newsfirstkannada.com

ತಪ್ಪಿದ ಭಾರೀ ಅನಾಹುತ; ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕಿದ್ದ ನಾಲ್ವರು ಉಗ್ರರು ಅರೆಸ್ಟ್

Share :

02-11-2023

  ಲಷ್ಕರ್ ಸಂಘಟನೆಯ ನಾಲ್ವರು ಉಗ್ರರು ಅರೆಸ್ಟ್

  ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಬಂಧನ

  ಬಂಧಿತ ಉಗ್ರರಿಂದ ಏನೆಲ್ಲಾ ವಶಕ್ಕೆ ಪಡೆಯಲಾಗಿದೆ..?

ಲಷ್ಕರ್-ಇ-ತೈಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ನಾಲ್ವರು ಉಗ್ರರನ್ನು ಭದ್ರತಾ ಸಿಬ್ಬಂದಿ ಬಂಧಿಸಿದೆ. ಜಮ್ಮು-ಕಾಶ್ಮೀರದ ಬಾರಮುಲ್ಲಾದಲ್ಲಿ ಉಗ್ರರನ್ನು ಬಂಧಿಸಿ, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ನರಧಿರಿ ದಂಗೆರ್​​ಪೊರಾದಲ್ಲಿರುವ ಚೆಕ್​​ಪಾಯಿಂಟ್​ನಲ್ಲಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುತ್ತಿದ್ದರು. ಭದ್ರತಾ ಸಿಬ್ಬಂದಿ ಅವರ ಬಳಿ ಹೋಗುತ್ತಿದ್ದಂತೆಯೇ ಓಡಿ ಹೋಗಲು ಪ್ರಯತ್ನಿಸಿದ್ದರು. ನಂತರ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಬೆನ್ನಲ್ಲೇ ನಾಲ್ವರು ಲಾಕ್ ಆಗಿದ್ದಾರೆ.

ಗುಲಾಮ್ ಹಸನ್, ಮುಖ್ತರ್ ಅಹ್ಮದ್ ಖಾನ್ ಬಂಧಿತ ಉಗ್ರರು. ಇವರು ಬಾರಮುಲ್ಲಾದ ಚಂದೂಸ ಪ್ರದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ತಾಫ್ ಅಹ್ಮದ್, ಫಾರೂಖ್ ಅಹ್ಮದ್ ಬಂಧಿತ ಇನ್ನಿಬ್ಬರು ಉಗ್ರರು. ಶೋಧಕಾರ್ಯಾಚರಣೆ ವೇಳೆ ಚೈನಿಸ್ ಪಿಸ್ತೂಲ್, ಪಿಸ್ತೂಲ್ ಮ್ಯಾಗಝಿನ್, 12 ಸಜೀವ ಗುಂಡುಗಳು, 2 ಹ್ಯಾಂಡ್​ ಗ್ರಾನೇಡ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಪ್ಪಿದ ಭಾರೀ ಅನಾಹುತ; ವಿಧ್ವಂಸಕ ಕೃತ್ಯಕ್ಕೆ ಹೊಂಚು ಹಾಕಿದ್ದ ನಾಲ್ವರು ಉಗ್ರರು ಅರೆಸ್ಟ್

https://newsfirstlive.com/wp-content/uploads/2023/11/JK-3.jpg

Load More