newsfirstkannada.com

WATCH: ಬೆಂಕಿ ಹಚ್ಚಿ ಬ್ಯಾಂಕ್‌ ಲೂಟಿಗಿಳಿದ ದಂಗೆಕೋರರು; 6 ದಿನ ಕಳೆದ್ರೂ ಫ್ರಾನ್ಸ್‌ನಲ್ಲಿ ನಿಲ್ಲದ ಹಿಂಸಾಜ್ವಾಲೆ

Share :

03-07-2023

    ಶಾಪಿಂಗ್ ಮಾಲ್‌, ಸೂಪರ್ ಮಾರ್ಕೆಟ್ಸ್​, ಬ್ಯಾಂಕ್‌ಗಳು ಕಳ್ಳತನ

    ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನುಗ್ಗುತ್ತಿರುವ ದರೋಡೆಕೋರರು.!

    ಫ್ರಾನ್ಸ್​ನಲ್ಲಿ ಶೇಕಡಾ 9 ರಷ್ಟು ವಲಸಿಗರು.. ಇವರಿಂದಲೇ ಲೂಟಿ

ಪ್ಯಾರಿಸ್​: ಬಾಲಕನೊಬ್ಬನನ್ನು ಪೊಲೀಸರು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಶುರುವಾದ ಗಲಭೆಯು ಇಡೀ ಫ್ರಾನ್ಸ್​ ಅನ್ನು ಧ್ವಂಸ ಮಾಡುತ್ತಿದೆ. ಇವತ್ತಿಗೆ 6 ದಿನಗಳಾದರೂ ಫ್ರಾನ್ಸ್​ನ ನಗರಗಳಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬರುತ್ತಿಲ್ಲ. ಗಲಭೆ, ಹಿಂಸಾಚಾರ ನಿಯಂತ್ರಣ ಮಾಡಲೆಂದು ಫ್ರಾನ್ಸ್​ ದೇಶದ್ಯಾಂತ 1 ಲಕ್ಷ ಪೊಲೀಸರನ್ನು ನಿಯೋಜನೆ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ವಿವಿಧ ನಗರಗಳಲ್ಲಿ ಪುಂಡಾಟ ‌ಮುಂದುವರೆದಿದ್ದು ರಸ್ತೆ ಬದಿಯಿರುವ ಅಂಗಡಿ ಮುಗ್ಗಟ್ಟುಗಳನ್ನು, ಶೋ ರೂಮ್​ಗಳನ್ನು ಹಾಗೂ ದಿನಸಿ ಅಂಗಡಿಗಳಿಗೆ ವಲಸಿಗರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನುಗ್ಗಿ ಲೂಟಿ ಮಾಡುತ್ತಿದ್ದಾರೆ. ಸಿಕ್ಕ ಸಿಕ್ಕ ರಸ್ತೆಗಳಲ್ಲಿನ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುತ್ತಿದ್ದಾರೆ.

ಕಳೆದ 6 ದಿನಗಲ್ಲಿ 200 ಅಧಿಕ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ರಾತ್ರಿ ಸಮಯದಲ್ಲಿ ಶಾಪಿಂಗ್ ಮಾಲ್‌ಗಳು, ಸೂಪರ್ ಮಾರ್ಕೆಟ್ಸ್​, ಬ್ಯಾಂಕ್‌ಗಳನ್ನು ದಂಗೆಕೋರರು ಲೂಟಿ ಮಾಡುತ್ತಿದ್ದಾರೆ ಎಂದು ಫ್ರಾನ್ಸ್‌ನ ಹಣಕಾಸು ಸಚಿವ ಬ್ರೂನೋ ಲೆ ಮೈರ್ ಅವರು ತಿಳಿಸಿದ್ದಾರೆ. ಪ್ರತಿಭಟನಾಕಾರರು ಜನ ವಸತಿ ಪ್ರದೇಶಗಳ ಮೇಲೂ ದಾಳಿ ನಡೆಸಿ ಬೆಂಕಿ ಹಚ್ಚುತ್ತಿರುವುದು ಜನರಲ್ಲಿ ತೀವ್ರ ಆತಂಕ ಹುಟ್ಟಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಉದಾರವಾದಿ, ಜಾತ್ಯತೀತತೆ ಪ್ರತಿಪಾದಿಸುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್, ಫ್ರಾನ್ಸ್​ನಲ್ಲಿನ ಜನಸಂಖ್ಯೆಯ ಪೈಕಿ ಶೇಕಡಾ 9 ರಷ್ಟು ವಲಸಿಗರು ಇದ್ದಾರೆ. ಇವರಿಂದಲೇ ದೇಶದಲ್ಲಿನ ಸಾರ್ವಜನಿಕ ಆಸ್ತಿ-ಪಾಸ್ತಿಗಳು ನಷ್ಟವಾಗುತ್ತಿವೆ. ಕಾನೂನು ಸುವ್ಯವಸ್ಥೆ ಕುಸಿಯುತ್ತಿದ್ದು ದೇಶದಲ್ಲಿ ಸಂಪೂರ್ಣ ಅರಾಜಕತೆಯ ಸ್ಥಿತಿ ಮುಂದುವರಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಬೆಂಕಿ ಹಚ್ಚಿ ಬ್ಯಾಂಕ್‌ ಲೂಟಿಗಿಳಿದ ದಂಗೆಕೋರರು; 6 ದಿನ ಕಳೆದ್ರೂ ಫ್ರಾನ್ಸ್‌ನಲ್ಲಿ ನಿಲ್ಲದ ಹಿಂಸಾಜ್ವಾಲೆ

https://newsfirstlive.com/wp-content/uploads/2023/07/FRANCE_FIGHT.jpg

Load More