newsfirstkannada.com

ಫ್ರಾನ್ಸ್​​ನಲ್ಲಿ ನಿಲ್ಲದ ಹಿಂಸಾಚಾರ.. 875 ಮಂದಿ ಅರೆಸ್ಟ್.. 200 ಪೊಲೀಸರಿಗೆ ಗಾಯ.. ಪ್ಯಾರೀಸ್​ನಲ್ಲಿ 40,000 ಭದ್ರತಾ ಪಡೆ ನಿಯೋಜನೆ

Share :

01-07-2023

  ಫ್ರಾನ್ಸ್​ ಅಕ್ಷರಶಃ ಉದ್ವಿಗ್ನ, ಕಟ್ಟಡಗಳು ಧಗಧಗ

  ವೈರಲ್ ಆಗಿರೋ ವಿಡಿಯೋಗಳು ಬೆಚ್ಚಿಬೀಳಿಸ್ತಿವೆ..?

  ಚೆನ್ನಾಗಿಯೇ ಇದ್ದ ಫ್ರಾನ್ಸ್​​ನಲ್ಲಿ ಆಗಿರೋದೇನು..?

ಫ್ರಾನ್ಸ್​ ರಾಜಧಾನಿ ಪ್ಯಾರಿಸ್‌ನಲ್ಲಿ ಟ್ರಾಫಿಕ್ ಪೊಲೀಸರು ಬಾಲಕನ ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಪೊಲೀಸರು ನಾಗರಿಕರ ಪ್ರತಿಭಟನೆ ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದು, ಅವೆಲ್ಲ ವಿಫಲವಾಗಿದೆ. ಅಕ್ಷರಶಃ ಫ್ರಾನ್ಸ್​ ಉದ್ವಿಗ್ನಗೊಂಡಿದೆ.

ಹತ್ಯೆಯಾದ ಬಾಲಕ
ಹತ್ಯೆಯಾದ ಬಾಲಕ

875 ಮಂದಿ ಅರೆಸ್ಟ್..!

ಅಲ್ಲಿನ ಪ್ರಮುಖ ಕಟ್ಟಡ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಇಟ್ಟಿದ್ದು ಧಗಧಗಿಸುತ್ತಿವೆ. ಮತ್ತೊಂದು ಕಡೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು, ಜಲಫಿರಂಗಿಗಳನ್ನು ಬಳಸಿದ್ದಾರೆ. ಇದುವರೆಗೆ 875 ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪ್ರತಿಭಟನೆ ವೇಳೆ 200 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಎಲ್ಲಾ ಬೆಳವಣಿಗೆಗೆ ಮೂಲ ಕಾರಣ 17 ವರ್ಷದ ನಹೆಲ್ ಎಂಬಾತನ ಹತ್ಯೆ ಮಾಡಿರುವ ವಿಡಿಯೋ ಹೊರಬಿದ್ದಿರೋದು. ಟ್ರಾಫಿಕ್ ತಪಾಸಣೆ ವೇಳೆ ಗುಂಡಿಕ್ಕಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಅಲ್ಲಿನ ಜನರನ್ನು ಕೆರಳಿಸುವಂತೆ ಮಾಡಿದೆ.
ವರದಿಗಳ ಪ್ರಕಾರ, ಬಾಲಕ ಹಲವಾರು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಇದರಿಂದ ಆತನಿಗೆ ಅಥವಾ ಬೇರೆ ಪ್ರಯಾಣಿಕರಿಗೆ ಅಪಾಯ ಆಗುವ ಭಯ ಪೊಲೀಸರಿಗೆ ಕಾಡಿತ್ತು. ಅದಕ್ಕೆ ಪೊಲೀಸರು ಆತನ ಕಾರು ಚೇಸ್​ ಮಾಡಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಹಾರಿಸಿದ್ದ ಗುಂಡು, ಆತನ ಎದೆಯನ್ನು ಸೀಳಿತ್ತು.

ಫ್ರೆಂಚ್ ಸರ್ಕಾರದಿಂದ ಎಚ್ಚರಿಕೆ

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಪೋಷಕರಿಗೆ ತಮ್ಮ ಮಕ್ಕಳನ್ನು ಹೊರಗೆ ಕಳುಹಿಸದಂತೆ ಮನವಿ ಮಾಡಿಕೊಂಡಿದ್ದಾರೆ. ಫ್ರಾನ್ಸ್‌ನಾದ್ಯಂತ ಹರಡುವ ಈ ಗಲಭೆಯನ್ನು ತಡೆಯಲು ಸೋಶಿಯಲ್ ಮೀಡಿಯಾವನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡುವಂತೆ ಸೂಚಿಸಿದ್ದಾರೆ.

ಪ್ರಸಿದ್ಧ ಮಾಲ್​ ಲೂಟಿ..!

ಇನ್ನು, ಪೊಲೀಸರನ್ನು ಎದುರಿಸಲು ಪ್ರತಿಭಟನಾಕಾರರು ಅವರ ಮೇಲೆ ಪಟಾಕಿಗಳನ್ನು ಎಸೆದಿದ್ದಾರೆ. ಅರೋಂಡಿಸ್‌ಮೆಂಟ್‌ ಠಾಣೆ ಮೇಲೆ ಜನರು ದಾಳಿ ಮಾಡಿದ್ದಾರೆ. ರಿವೋಲಿ ಸ್ಟ್ರೀಟ್‌ನಲ್ಲಿರುವ ಅಂಗಡಿಗಳನ್ನು, ಲೌವ್ರೆ ಮ್ಯೂಸಿಯಂ ಬಳಿಯಿರುವ ಪ್ಯಾರಿಸ್‌ನ ಅತಿದೊಡ್ಡ ಶಾಪಿಂಗ್ ಮಾಲ್‌ ಅನ್ನು ಲೂಟಿ ಮಾಡಿದ್ದಾರೆ ಅಂತಾ ವರದಿಯಾಗಿದೆ. ಪ್ಯಾರಿಸ್ ಪೊಲೀಸ್ ಪ್ರಧಾನ ಕಚೇರಿಯ ನೀಡಿದ ಮಾಹಿತಿ ಪ್ರಕಾರ, ಪ್ರತಿಭಟನೆಗಳನ್ನು ನಿಯಂತ್ರಿಸಲು ಸುಮಾರು 40,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹಿಂಸಾಚಾರದಲ್ಲಿ ಸುಮಾರು 200 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರಾನ್ಸ್​​ನಲ್ಲಿ ನಿಲ್ಲದ ಹಿಂಸಾಚಾರ.. 875 ಮಂದಿ ಅರೆಸ್ಟ್.. 200 ಪೊಲೀಸರಿಗೆ ಗಾಯ.. ಪ್ಯಾರೀಸ್​ನಲ್ಲಿ 40,000 ಭದ್ರತಾ ಪಡೆ ನಿಯೋಜನೆ

https://newsfirstlive.com/wp-content/uploads/2023/07/FRANCE-3.jpg

Load More