newsfirstkannada.com

WATCH: ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಫ್ರಾನ್ಸ್‌ನ ಜ್ವಾಲಾಮುಖಿ; ಸ್ವಿಟ್ಜರ್‌ಲ್ಯಾಂಡ್, ಬೆಲ್ಜಿಯಂನಲ್ಲೂ ಬೆಂಕಿ ಹಚ್ಚಿ ಅಟ್ಟಹಾಸ

Share :

03-07-2023

    ಸ್ವಿಟ್ಜರ್‌ಲ್ಯಾಂಡ್, ಬೆಲ್ಜಿಯಂಗೂ ಹಬ್ಬಿದ ಫ್ರಾನ್ಸ್‌ನ ಹಿಂಸಾಚಾರ

    ಬ್ರುಸೆಲ್ಸ್ ನಗರದಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ

    ಯುರೋಪಿನ ಕೆಲವು ದೇಶಗಳಿಗೂ ಹಬ್ಬಿದ ಸಮುದಾಯದ ಜ್ವಾಲೆ

17 ವರ್ಷದ ಬಾಲಕನನ್ನು ಪೊಲೀಸರು ಶೂಟ್ ಮಾಡಿ ಸಾಯಿಸಿದ್ದಾರೆ ಅನ್ನೋ ಕಾರಣಕ್ಕೆ ಫ್ರಾನ್ಸ್‌ ಧಗಧಗನೇ ಹೊತ್ತಿ ಉರಿದಿದೆ. ರೊಚಿಗೆದ್ದ ಯುವ ಸಮುದಾಯ ಸಿಕ್ಕ, ಸಿಕ್ಕ ವಾಹನಕ್ಕೆ ಬೆಂಕಿ ಹಚ್ಚಿ ಬೃಹತ್‌ ದಾಂಧಲೆ ನಡೆಸಿದೆ. ಅಷ್ಟೇ ಅಲ್ಲ ದೊಡ್ಡ, ದೊಡ್ಡ ಮಾಲ್‌ಗಳು, ಮಾರ್ಕೆಟ್‌ ಪ್ರದೇಶಗಳು, ಬ್ಯಾಂಕ್‌ಗಳನ್ನೇ ಲೂಟಿ ಮಾಡಲಾಗಿದೆ. ಫ್ರಾನ್ಸ್‌ನಲ್ಲಿ ಹೊತ್ತಿಕೊಂಡ ಈ ಬೆಂಕಿಯ ಕಿಡಿ ಇದೀಗ ಸ್ವಿಟ್ಜರ್‌ಲ್ಯಾಂಡ್, ಬೆಲ್ಜಿಯಂಗೂ ವ್ಯಾಪಿಸಿದ್ದು, ಪ್ರತಿಭಟನೆ ಉಗ್ರಸ್ವರೂಪ ಪಡೆಯುವ ಸಾಧ್ಯತೆಗಳಿವೆ.

ಕಳೆದ 6-7 ದಿನಗಳಿಂದ ಫ್ರಾನ್ಸ್‌ನ ಹಲವು ನಗರದಲ್ಲಿ ಆರಂಭವಾದ ಹಿಂಸಾಚಾರ ಇನ್ನೂ ನಿಂತಿಲ್ಲ. 1 ಲಕ್ಷಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದೆ. ಈ ಬೆಂಕಿಯೇ ಆರದಿರುವಾಗ ಹಿಂಸಾಚಾರದ ಜ್ವಾಲಾಮುಖಿ ಯುರೋಪಿನ ಹಲವು ರಾಷ್ಟ್ರಗಳಿಗೂ ವ್ಯಾಪಿಸಿದೆ. ಫ್ರಾನ್ಸ್‌ನಿಂದ ಸ್ವಿಟ್ಜರ್‌ಲ್ಯಾಂಡ್ ಬಂದ ಬೆಂಕಿಯ ಜ್ವಾಲೆ ಇದೀಗ ಬೆಲ್ಜಿಯಂಗೂ ತಟ್ಟಿದೆ.

ಸ್ವಿಟ್ಜರ್‌ಲ್ಯಾಂಡ್ ಹಾಗೂ ಬೆಲ್ಜಿಯಂ ದೇಶಗಳು ಫ್ರಾನ್ಸ್‌ನ ಅಕ್ಕಪಕ್ಕದ ದೇಶಗಳು. ಹೀಗಾಗಿ ಫ್ರಾನ್ಸ್‌ನಲ್ಲಿ ಹಿಂಸಾಚಾರ ಹೆಚ್ಚಾಗುತ್ತಲೇ ಅದರ ಕಿಚ್ಚು ಈ ಎರಡೂ ರಾಷ್ಟ್ರಗಳಿಗೂ ತಟ್ಟಿದೆ. ಬೆಲ್ಜಿಯಂನ ಸ್ವಿಸ್ ನಗರವನ್ನ ಪೊಲೀಸರು ಸುತ್ತುವರಿದಿದ್ದು ಕಲ್ಲು ತೂರಾಟ ನಡೆಸಿದ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್‌ನಲ್ಲೂ ಯುವಕರು ರಸ್ತೆಯಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ. ಬ್ರುಸೆಲ್ಸ್ ರಸ್ತೆ, ರಸ್ತೆಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮರೆದಿದ್ದಾರೆ.

WATCH: ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಫ್ರಾನ್ಸ್‌ನ ಜ್ವಾಲಾಮುಖಿ; ಸ್ವಿಟ್ಜರ್‌ಲ್ಯಾಂಡ್, ಬೆಲ್ಜಿಯಂನಲ್ಲೂ ಬೆಂಕಿ ಹಚ್ಚಿ ಅಟ್ಟಹಾಸ

https://newsfirstlive.com/wp-content/uploads/2023/07/Switzerland.jpg

Load More