newsfirstkannada.com

ಪುನೀತ್​ ರಾಜ್​ಕುಮಾರ್​ ಸಿನಿಮಾ ಮಾಡಿದ್ದ ಖ್ಯಾತ ನಿರ್ದೇಶಕನ ವಿರುದ್ಧ ವಂಚನೆ ಕೇಸ್​

Share :

10-11-2023

    ಕಾಪಿರೈಟ್ಸ್ ನೀಡದೆ ಸಾಕ್ಷ್ಯ ಚಿತ್ರ ಪ್ರಸಾರ ಮಾಡಿರುವ ಆರೋಪ!

    ಇಬ್ಬರು ವಿದ್ಯಾರ್ಥಿಗಳ 4 ವರ್ಷದ ಕ್ರೀಡೆ ವಿಡಿಯೋ ಚಿತ್ರೀಕರಣ

    ಈ ಬಗ್ಗೆ ಅಶೋಕ್​​ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಖ್ಯಾತ ನಿರ್ದೇಶಕರೊಬ್ಬರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಪೃಥ್ವಿ, ಸವಾರಿ, ಸವಾರಿ-2, ಚಂಬಲ್ ಚಿತ್ರಗಳ ನಿರ್ದೇಶಕರಾದ ಜಾಕೋಬ್ ವರ್ಗೀಸ್ ಮೇಲೆ ದೂರು ದಾಖಲಾಗಿದೆ. ಸಾಕ್ಷ್ಯಚಿತ್ರದ ಕಾಪಿರೈಟ್ಸ್ ನೀಡದೆ ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್‌ಗೆ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎಚ್ಐವಿ ಬಾಧಿತ ಮಕ್ಕಳ ಜೀವನ ಕ್ರಮದ ಬಗ್ಗೆ ಸಂಸ್ಥೆ ಜಾಕೋಬ್‌ ಬಳಿ ವಿಡಿಯೋ ಮಾಡಿಸಿತ್ತು. ರನ್ನಿಂಗ್ ಪಾಸಿಟಿವ್ ಎನ್ನುವ ಸಾಕ್ಷ್ಯಚಿತ್ರ ಮಾಡಲು ಫೌಂಡೇಶನ್ ಹಣ ನೀಡಿತ್ತು. ವಿಡಿಯೋ ಚಿತ್ರೀಕರಣ ಮಾಡಿದ್ದ ಜಾಕೋಬ್ ವರ್ಗೀಸ್ ಕಾಪಿರೈಟ್ಸ್ ಅನ್ನು ಸಂಸ್ಥೆಗೆ ನೀಡಿಲ್ಲ ಎಂದು ದೂರಲಾಗಿದೆ. 4 ವರ್ಷದ ಇಬ್ಬರು ವಿದ್ಯಾರ್ಥಿಗಳ ಬಗ್ಗೆ ವಿಡಿಯೋ ಚಿತ್ರಿಕರಣ ಮಾಡಿದ್ದ ಜಾಕೋಬ್‌ಗೆ ವಿಡಿಯೋ ಚಿತ್ರೀಕರಣ ಮಾಡಲು ಹಂತ ಹಂತವಾಗಿ ಫೌಂಡೇಶನ್ ಹಣ ನೀಡಿತ್ತು. ಇದೀಗ ಕಾಪಿರೈಟ್ಸ್ ಸಂಸ್ಥೆಗೆ ನೀಡದೆ ತಾನೇ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿರುವ ಆರೋಪ ಬಂದಿದೆ.

ಇನ್ನೂ ಆಸ್ಕರ್ ಅಕಾಡೆಮಿ ಅವಾರ್ಡ್ ವಿಭಾಗದಲ್ಲಿ ತಾನೇ ಕಾಪಿರೈಟ್ಸ್ ಮಾಲೀಕ ಎಂದು ಮಾಹಿತಿ ನೀಡಿದ್ದಾರೆ. ಆಯುಷ್ಮಾನ್ ಚಲನಚಿತ್ರ ಪ್ರಶಸ್ತಿಗೂ ಈ ಚಿತ್ರವನ್ನು ಆಯ್ಕೆ ಮಾಡಿಸಿ ಕಾಪಿರೈಟ್ಸ್ ಉಲ್ಲಂಘನೆ ಮಾಡಲಾಗಿದೆ. ಆ ಮೂಲಕ ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್‌ಗೆ ಆರ್ಥಿಕ ನಷ್ಟ ಉಂಟುಮಾಡಲಾಗಿದೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಸಂಸ್ಥೆ ಪ್ರಕರಣ ದಾಖಲಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುನೀತ್​ ರಾಜ್​ಕುಮಾರ್​ ಸಿನಿಮಾ ಮಾಡಿದ್ದ ಖ್ಯಾತ ನಿರ್ದೇಶಕನ ವಿರುದ್ಧ ವಂಚನೆ ಕೇಸ್​

https://newsfirstlive.com/wp-content/uploads/2023/11/bng-18.jpg

Load More