newsfirstkannada.com

WATCH: ಬಸ್​ನಿಂದ ಕೆಳಗೆ ಬಿದ್ದ ಬಾಲಕಿ ಜಸ್ಟ್ ಮಿಸ್‌; ಡೋರ್ ಅಲ್ಲ ಕಿಟಕಿಯಿಂದ ನುಗ್ಗಿದ್ರೂ ಇವತ್ತು ಗಂಡಸರಿಗೆ ಸೀಟ್‌ ಸಿಕ್ಕಿಲ್ಲ!

Share :

Published June 18, 2023 at 5:02pm

    ಫ್ರೀ ಶಕ್ತಿಯಿಂದ ಸರ್ಕಾರಿ ಬಸ್‌ಗಳಲ್ಲಿ ಇವತ್ತು ಸೀಟ್ ಹಿಡಿದವನೇ ಮಹಾಶೂರ

    ಸಾರಿಗೆ ಬಸ್ ಹತ್ತಲು ನೂಕುನುಗ್ಗಲಿನಲ್ಲಿ ಬಸ್​ನಿಂದ ಕೆಳಗೆ ಜಾರಿ ಬಿದ್ದ ಬಾಲಕಿ

    ಸೀಟ್​ನ ರಿಸರ್ವ್​ ಮಾಡಲು ಬಸ್​ನ ಕಿಟಕಿಯಿಂದ ಒಳಗೆ ಹಾರಿದ ಯುವಕ

ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಉಚಿತ ಪ್ರಯಾಣ ಶುರುವಾಗಿದ್ದೇ ಆಗಿದ್ದು ಮಹಿಳೆಯರ ಕಾಲು ಮನೆಯಲ್ಲಿ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಮಹಿಳೆಯರ ಪ್ರವಾಸ ಜೋರಾಗಿದೆ. ಇನ್ನು ಇವತ್ತು ಕೆಲಸಕ್ಕೆ ರಜೆ ಇದ್ದ ಕಾರಣ ರಾಜ್ಯದ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ. ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ಗಳು ಹೌಸ್ ಫುಲ್‌ ಆಗಿವೆ.​ ಬಸ್​​ನಲ್ಲಿ ಸೀಟ್​ ಇಲ್ಲದಿದ್ದರು ಜನರು ನಿಂತುಕೊಂಡೆ ಪ್ರಯಾಣ ಮಾಡುತ್ತಿದ್ದಾರೆ.

ಇತ್ತ, ಬೆಳಗಾವಿ ಬಸ್ ನಿಲ್ದಾಣದಲ್ಲಿ‌ ಅಧಿಕ ಪ್ರಯಾಣಿಕರಿಂದ ಕೂಡಿದ್ದರಿಂದ ನಾ ಮುಂದು ತಾ ಮುಂದು ಎಂದು ಮಹಿಳಾ ಮಣಿಗಳು ಬಸ್ ಹತ್ತುತ್ತಿದ್ದರು. ಇದೇ ವೇಳೆ ಬಸ್ ಹತ್ತಲು ನೂಕಾಟ ಉಂಟಾಗಿದ್ದ ಪರಿಣಾಮ ಬಾಲಕಿಯೊಬ್ಬಳು ಬಸ್​ನಿಂದ ಕೆಳಗೆ ಬಿದ್ದಿದ್ದಾಳೆ. ಸದ್ಯ ಬಸ್ ನಿಧಾನವಾಗಿ ಚಲಿಸುತ್ತಿದ್ದ ಕಾರಣಕ್ಕೆ ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಶಕ್ತಿ ಯೋಜನೆಯ ಎಫೆಕ್ಟ್ ರಾಜ್ಯದ ಎಲ್ಲಾ ಬಸ್​​ ನಿಲ್ದಾಣಗಳಿಗೆ ತಟ್ಟಿದೆ. ಸರ್ಕಾರಿ ಬಸ್‌ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ರಾಜ್ಯಾದ್ಯಂತ ಬಸ್​ಗ​​ಳಲ್ಲಿ ಮಹಿಳೆಯರದ್ದೇ ದರ್ಬಾರ್ ಶುರುವಾಗಿದೆ. ಫ್ರೀ ಅಂತ ಮಹಿಳೆಯರು ದೇವಸ್ಥಾನಗಳಿಗೆ ಸಾಗರೋಪಾದಿಯಲ್ಲಿ ತೆರಳುತ್ತಿದ್ದಾರೆ. ಇನ್ನು ಕಲಬುರಗಿಯಲ್ಲಿ ಸರ್ಕಾರಿ ಬಸ್‌ಗಳು ಫುಲ್ ರಶ್ ಆಗಿವೆ. ಸೀಟ್​ಗಾಗಿ ಮಹಿಳೆಯರು ಪುಟ್ಟ ಪುಟ್ಟ ಮಕ್ಕಳನ್ನು ಕಿಟಕಿಯಿಂದ ನುಸುಳುವಂತೆ ಮಾಡುತ್ತಿದ್ದಾರೆ.

ಇತ್ತ, ಸರ್ಕಾರ ಮಹಿಳೆಯರಿಗೆ ಬಸ್ ಫ್ರೀ ಯೋಜನೆ ಕೊಟ್ಟಿದ್ದೇ ಕೊಟ್ಟಿದ್ದು.. ಚಿಕ್ಕಮಗಳೂರಿನ ಶೃಂಗೇರಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್​ನ​ ಮೈನ್​ ಡೋರ್​ನಲ್ಲಿ ರಶ್​ ಎಂದು ಡ್ರೈವರ್ ಸೀಟ್​ ಡೋರ್​ನಿಂದಲೇ ಹತ್ತಿದ್ದಾರೆ. ಮಹಿಳೆಯರು ಬಸ್​ನ ಮುಂದಿನ ಡೋರ್​ನಲ್ಲಿ ಹತ್ತೋಕೆ ಮುಂದಾಗಿದ್ದರು. ತುಂಬಾ ಜನರಿದ್ದ ಕಾರಣ, ಮೈನ್​​​​ ಡೋರ್​ನಿಂದ ಹತ್ತೋದು ಕಷ್ಟಾ ಅಂತಾ ತಿಳಿದು, ಡ್ರೈವರ್ ಸೀಟ್​ ಡೋರ್​ ಬಳಿಯಿಂದಲೇ ಹತ್ತಿದ್ದಾರೆ. ಸದ್ಯ ಶೃಂಗೇರಿ ಬಸ್ ನಿಲ್ದಾಣದಲ್ಲಿ ಬಸ್ ಏರಲು ನೂಕಾಟ, ತಳ್ಳಾಟ ಹೆಚ್ಚಾಗಿದ್ದು, ಡ್ರೈವರ್​.. ಕಂಡಕ್ಟರ್​​ ಹೈರಾಣಾಗಿದ್ದಾರೆ.

ಮಹಿಳೆಯರೇ ತುಂಬಿರುವ ಬಸ್​ಗಳಲ್ಲಿ ಪುರುಷರ ಪಾಡು ಕೇಳೋರಿಲ್ಲ.. ಮಹಿಳಾಮಣಿಗಳ ಅಬ್ಬರದ ಮುಂದೆ ಬಸ್​ ಹತ್ತೋಕೆ ಆಗದೆ ಹೊಸ ಪ್ಲಾನ್​ ಮಾಡಿ ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ. ಇದೀಗ ಬಸ್​ನ ಕಿಟಕಿಯಿಂದ ಸೀಟ್​ ಮೇಲೆ ಕರ್ಚೀಫ್​ಗಳನ್ನು ಇಟ್ಟು ಸೀಟ್​ನ ರಿಸರ್ವ್​ ಮಾಡುತ್ತಿದ್ದಾರೆ. ಸರ್ಕಾರಿ ಬಸ್​ಗಳು ಫುಲ್ ರಶ್​ ಆಗ್ತಿವೆ. ಬಸ್​ ಹತ್ತಲು ಕಲಬುರಗಿ, ವಿಜಯಪುರದಲ್ಲಿ ನೂಕುನುಗ್ಗಲು ಉಂಟಾಗಿದೆ. ಸೀಟುಗಳನ್ನ ರಿಸರ್ವ್​ ಮಾಡಿಕೊಳ್ಳಲು ಪುರುಷರು ಕರ್ಚೀಫ್​​ಗಳನ್ನ ಮೊರೆ ಹೋಗುತ್ತಿದ್ದಾರೆ. ಬಸ್​ನ ಕಿಟಕಿ ಮೂಲಕ ಸೀಟ್​ನ ಮೇಲೆ ಕರ್ಚೀಫ್​​ ಇಟ್ಟು ಸೀಟ್​ಗಳನ್ನ ಕಾದಿರಿಸಿಕೊಂಡ ದೃಶ್ಯಗಳು ಕಂಡು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಬಸ್​ನಿಂದ ಕೆಳಗೆ ಬಿದ್ದ ಬಾಲಕಿ ಜಸ್ಟ್ ಮಿಸ್‌; ಡೋರ್ ಅಲ್ಲ ಕಿಟಕಿಯಿಂದ ನುಗ್ಗಿದ್ರೂ ಇವತ್ತು ಗಂಡಸರಿಗೆ ಸೀಟ್‌ ಸಿಕ್ಕಿಲ್ಲ!

https://newsfirstlive.com/wp-content/uploads/2023/06/free-bus-7.jpg

Load More