newsfirstkannada.com

ಫ್ರೀ ಬಸ್​​ ಎಫೆಕ್ಟ್​​.. ಧರ್ಮಸ್ಥಳಕ್ಕೆ ಹೋಗಲು ಮುಗಿಬಿದ್ದ ಮಹಿಳೆಯರು!

Share :

17-06-2023

    ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್

    ಉಚಿತ ಪ್ರಯಾಣ ಶುರುವಾಗಿದ್ದೇ ತಡ ಮಹಿಳೆಯರು ಫುಲ್​ ಖುಷ್​

    ಧರ್ಮಸ್ಥಳಕ್ಕೆ ಹೋಗಲು KSRTC ಅಡ್ವಾನ್ಸ್ ಬಸ್ ಟಿಕೆಟ್ ಬುಕ್ಕಿಂಗ್

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಉಚಿತ ಪ್ರಯಾಣ ಶುರುವಾಗಿದ್ದೇ ಆಗಿದ್ದು, ಮಹಿಳೆಯರ ಪ್ರವಾಸ ಜೋರಾಗಿದೆ. ಸದ್ಯ ನಾಳೆ ಬೇರೆ ರಜೆ ಇರುವ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಹೋಗಲು KSRTC ಅಡ್ವಾನ್ಸ್ ಬಸ್ ಟಿಕೆಟ್ ಬುಕ್ಕಿಂಗ್​ಗಾಗಿ ಮಹಿಳೆಯರು ಮುಗಿಬಿದ್ದಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಹಿಳೆಯರು ಸರದಿ ಸಾಲ್ಲಿನಲ್ಲಿ ನಾ ಮುಂದು ತಾ ಮುಂದು ಅಂತ ಟಕೆಟ್​ ತಗೋಳೋಕೆ ನುಗ್ಗುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಮಂಗಳೂರು, ಶೃಂಗೇರಿ, ಹೊರನಾಡು, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಬಸ್​ಗಳಿಗೆ ಡಿಮ್ಯಾಂಡ್​ ಹೆಚ್ಚಾಗಿದ್ದು, ಜನದಟ್ಟಣೆಗೆ ಅನುಗುಣವಾಗಿ ಬಸ್​ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ KSRTC ಸಿಬ್ಬಂದಿಗೆ ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.

ಇನ್ನು, ಬಸ್​​ ನಿಲ್ದಾಣದಲ್ಲಿದ್ದ ಜನರನ್ನು ಕಂಟ್ರೋಲ್ ಮಾಡಲು ಕೆಎಸ್​​ಆರ್​ಟಿಸಿ ಭರ್ಜರಿ ಪ್ಲಾನ್​ವೊಂದು ಮಾಡಿದ್ದಾರೆ. ಧಾರ್ಮಿಕ ಸ್ಥಳಗಳಿಗೆ ತೆರಳುವವರಿಗಾಗಿಯೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಜನರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಅಡ್ವಾನ್ಸ್ ಆಗಿ 10 ರೂಪಾಯಿ ನೀಡಿ ಟಿಕೆಟ್ ಪಡೆದರೆ ಬಸ್ ಟೈಮಿಂಗ್ ತಿಳಿಸಲಾಗುತ್ತೆ ಎಂದು ಕೆಎಸ್​​ಆರ್​ಟಿಸಿ ಸಿಬ್ಬಂದಿ ತಿಳಿಸಿದ್ದಾರೆ. ಜನ ಟಿಕೆಟ್ ಬುಕ್ ಮಾಡಿದ ಆಧಾರದ ಮೇಲೆ ಹೆಚ್ಚುವರಿ ಬಸ್ ಬಿಡಲಾಗುತ್ತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಾಹ್ನ ಧರ್ಮಸ್ಥಳಕ್ಕೆ ಒಟ್ಟು 45 ಬಸ್​​ಗಳನ್ನು ಬಿಡಲಾಗಿದೆ. ಈಗಾಗಲೇ ಬಹುತೇಕ ಪ್ರಯಾಣಿಕರು ಅಡ್ವಾನ್ಸ್ ಬಸ್ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ ಕಾರಣ ಹೆಚ್ಚುವರಿಯಾಗಿ 17 ಬಸ್​ಗಳನ್ನು ಬಿಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಬಸ್​​ ಎಫೆಕ್ಟ್​​.. ಧರ್ಮಸ್ಥಳಕ್ಕೆ ಹೋಗಲು ಮುಗಿಬಿದ್ದ ಮಹಿಳೆಯರು!

https://newsfirstlive.com/wp-content/uploads/2023/06/bng-44.jpg

Load More