newsfirstkannada.com

ಫ್ರೀ ಬಸ್​​ನಲ್ಲಿ ತುಂಬಿ ತುಳುಕಿದ ಮಹಿಳೆಯರು; ಗಂಡಸರಿಗಿಲ್ಲ ಸೀಟು; ಫುಲ್​ ರಶ್​ಗೆ ಬೆಚ್ಚಿಬಿದ್ದ ಕಂಡಕ್ಟರ್​​!

Share :

19-06-2023

    ಪುಣ್ಯ ಕ್ಷೇತ್ರಗಳತ್ತ ಪ್ರಯಾಣ.. ಬಸ್​ಗಳಲ್ಲಿ ಜನವೋ ಜನ!

    ಮೆಜೆಸ್ಟಿಕ್​ ನಿಲ್ದಾಣದಲ್ಲಿ ನಾರಿಯರದ್ದೇ ಫುಲ್​​​ ಮೆಜಾರಿಟಿ

    ಪ್ರಯಾಣಿಕರ ನೂಕಾಟ, ಡ್ರೈವರ್-ಕಂಡಕ್ಟರ್ ಕಂಗಾಲು..!

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡಿದ್ರೆ ಪುರುಷರಿಗೆ ನಿಶಕ್ತಿ ಉಂಟಾಗುವಂತೆ ಮಾಡಿದೆ. ನಾರಿಯರ ಮಧ್ಯೆ ಸರ್ಕಾರಿ ಬಸ್​ನಲ್ಲಿ ಸೀಟು ಹಿಡಿಯೋದೆ ಪುರುಷರ ಪಾಲಿಗೆ ದೊಡ್ಡ ಸವಾಲಾಗ್ಬಿಟ್ಟಿದೆ. ಈ ಮಧ್ಯೆ ಧರ್ಮಸ್ಥಳಕ್ಕೆ ಹೋದ ನನ್ನ ಪತ್ನಿ ವಾಪಸ್​ ಬಂದಿಲ್ಲ ಅಂತಾ ನ್ಯೂಸ್​ ಫಸ್ಟ್​ ಜೊತೆ ನೊಂದ ಪತಿಯೋರ್ವ ಅಳಲು ತೋಡಿಕೊಂಡ್ರೆ, ಅತ್ತ ಬಾಲಕಿಯೊಬ್ಬಳು ಬಸ್​ನಿಂದ ಜಾರಿ ಬಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸಿದ್ದರಾಮಯ್ಯ ಸರ್ಕಾರ ಮಹಿಳೆಯರ ಮಡಿಲಿಗೆ ಹಾಕಿರೋ ‘ಶಕ್ತಿ’ ಯೋಜನೆ ನಾರಿಯರ ಪಾಲಿಗೆ ವರವಾದ್ರೆ ಪುರುಷರ ಪಾಲಿಗೆ ವರಿಯಾಗ್ಬಿಟ್ಟಿದೆ. ಶಕ್ತಿ ಯೋಜನೆ ಎಫೆಕ್ಟ್​ನಿಂದ ರಾಜ್ಯದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗ್ತಿವೆ. ಕಲರ್​ ಕಲರ್​ ಡ್ರೆಸ್​ ಮಾಡ್ಕೊಂಡು, ರೀ ನಾ ಆಚೆ ಹೋಗಿ ಬರ್ತೀನಿ ಅಂತ ಮಡದಿಯರು ಟಾ ಟಾ ಬಾಯ್​​ ಹೇಳ್ತಿರೋದು ಪುರುಷರನ್ನ ಕಂಗಾಲಾಗಿಸಿದೆ.

ಧರ್ಮಸ್ಥಳಕ್ಕೆ ಹೋದ ಪತ್ನಿ ವಾಪಸ್​ ಬರದಕ್ಕೆ ಪತಿ ಕಂಗಾಲು!

ಫ್ರೀ ಬಸ್​ ಪ್ರಯಾಣ ಅಂತ ಧರ್ಮಸ್ಥಳಕ್ಕೆ ಹೋದ ಮಹಿಳೆಯೊಬ್ಳು ವಾಪಸ್ಸಾಗದೇ ಇರೋದು ಆಕೆಯ ಪತಿಯನ್ನ ಕಂಗಾಲಾಗಿಸಿದೆ. ನನ್ನ ಪತ್ನಿ ವಾಪಸ್ ಬಂದಿಲ್ಲ ಅಂತಾ ಸರ್ಕಾರದ ವಿರುದ್ಧ ನೊಂದ ಪತಿ ಕಿಡಿಕಾರಿದ್ದಾನೆ.

ಕಲಬುರಗಿಯಲ್ಲಿ ಶಕ್ತಿ ಎಫೆಕ್ಟ್​​ಗೆ ಬಸ್​ ಫುಲ್​ ರಶ್​!

ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್​ಗಳು ಫುಲ್ ರಷ್ ಆಗ್ತಿದ್ದು, ಬಸ್​ ಹತ್ತಲು ಕಲಬುರಗಿಯಲ್ಲಿ ನೂಕುನುಗ್ಗಲು ಉಂಟಾಗಿದೆ. ಅಮಾವಾಸ್ಯೆ ಹಿನ್ನೆಲೆ ಪುಣ್ಯಕ್ಷೇತ್ರಗಳಿಗೆ ಮಹಿಳೆಯರು ತೆರಳುತ್ತಿರುವ ಕಾರಣ ಕಲಬುರಗಿಯಿಂದ ಹೊರಡುವ ಬಹುತೇಕ ಬಸ್ ಗಳು ರಶ್ ಆಗ್ತಿವೆ. ಸೀಟು ಹಿಡಿಯಲು ಜನರು ಕಿಟಕಿಯಿಂದ ತೂರಿ ಬಸ್​ ಏರಲು ಮುಂದಾಗ್ತಿದ್ದಾರೆ. ಮಹಿಳೆಯರ ಮಧ್ಯೆ ಸೀಟು ಸಿಗದೇ ಪುರುಷರಿಗೆ ಪರದಾಟ ನಡೆಸಿದ್ದಾರೆ.

ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲಿ ನಾರಿಯರದ್ದೇ ಮೆಜಾರಿಟಿ

ಶಕ್ತಿ ಯೋಜನೆ ಎಫೆಕ್ಟ್​ಗೆ ಸರ್ಕಾರಿ ಬಸ್​ಗಳಲ್ಲಿ ಜನ ತುಂಬಿ ತುಳುಕುತ್ತಿದ್ರು. ಮಹಿಳಾ ಮಣಿಯರು ಟ್ರಿಪ್ ಹೊರಟ ಪರಿಣಾಮ ಮೆಜೆಸ್ಟಿಕ್ ಬಸ್ ನಿಲ್ದಾಣ ಫುಲ್​ ರಶ್ ಆಗಿತ್ತು. ಧರ್ಮಸ್ಥಳ ಸೇರಿ ವಿವಿಧ ಧಾರ್ಮಿಕ ಕ್ಷೇತ್ರಗಳತ್ತ ಪಯಣ ಬೆಳೆಸಲು ಉಚಿತ ಬಸ್​ನಲ್ಲಿ ರಿಸರ್ವೇಶನ್ ಮಾಡಲು ಮಹಿಳೆಯರು ಮುಗಿಬಿದ್ದಿದ್ರು.

ಬಸ್​ ಏರಲು ಹೋಗಿ ಜಾರಿಬಿದ್ದ ಬಾಲಕಿ!

ಅಮಾವಾಸ್ಯೆ ಹಿನ್ನೆಲೆ ಬೆಳಗಾವಿ ಜಿಲ್ಲೆಯಾದ್ಯಂತ ಸರ್ಕಾರಿ ಬಸ್​ಗಳು ​ಫುಲ್ ಆಗಿದ್ವು. ಈ ಮಧ್ಯೆ ಜಿಲ್ಲೆಯ ರಾಮದುರ್ಗ ಬಸ್ ನಿಲ್ದಾಣದಲ್ಲಿ ಬಾಲಕಿಯೊಬ್ಬಳು ಬಸ್​ನಿಂದ ಜಾರಿ ಬಿದ್ದಿರೋ ಘಟನೆ ನಡೆಯಿತು. ಬಸ್​​ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ ಬಾಲಕಿಯೊಬ್ಬಳು ಬಸ್​​ನಿಂದ ಕೆಳಗೆ ಬಿದ್ದಿದ್ದಳು.

ಡ್ರೈವರ್​ ಡೋರ್​ನಲ್ಲೇ ಬಸ್ ಏರಿದ ನಾರಿ!

ಬಸ್​ ಡೋರ್​ ರಶ್​ ಇದ್ದ ಕಾರಣ ಡ್ರೈವರ್ ಸೀಟ್​ನ​ ಡೋರ್​ನಿಂದಲೇ ಮಹಿಳೆಯೊಬ್ಬಳು ಬಸ್ ಹತ್ತಿದ್ದ ಘಟನೆ ಚಿಕ್ಕಮಗಳೂರಿನ ಶೃಂಗೇರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಕ್ಕಳನ್ನ ಡ್ರೈವರ್ ಸೀಟ್​ನ​ ಡೋರ್ ಮೂಲಕ ಹತ್ತಿಸಿದ ಮಹಿಳೆ ಸೀಟ್​ ಹಿಡಿಯಲು ಚಡಪಡಿಸಿದ್ದಾಳೆ. ಬಸ್ ನಿಲ್ದಾಣದಲ್ಲಿ ಬಸ್ ಏರಲು ನಡೆದ ನೂಕಾಟ, ತಳ್ಳಾಟ ನೋಡಿ ಡ್ರೈವರ್​ ಹಾಗೂ ಕಂಡಕ್ಟರ್​​ ಕಂಗಾಲಾಗಿದ್ದಾರೆ.

ಕೈಕೊಟ್ಟ ಟಿಕೆಟ್​ ಮೆಷಿನ್​.. ನಡುರಸ್ತೆಯಲ್ಲೇ ಕೈ ಬಿಟ್ಟ ಕಂಡಕ್ಟರ್​!

ಟಿಕೆಟ್ ಮಷಿನ್ ಕೊಟ್ಟ ಕಾರಣ ಪ್ರಯಾಣಿಕರನ್ನ ಕೆಎಸ್ಆರ್​ಟಿಸಿ ಬಸ್ ಕಂಡಕ್ಟರ್ ನಡುರಸ್ತೆಯಲ್ಲೇ ಇಳಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಕಾಡುಪ್ರಾಣಿಗಳು ಸಂಚರಿಸುವ ಜಾಗದಲ್ಲಿ ಪ್ರಯಾಣಿಕರನ್ನು ಕಂಡಕ್ಟರ್​ ಕೆಳಗಿಳಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಬಸ್ ಕಂಡಕ್ಟರ್​ ಸುದರ್ಶನ್ ಎಂಬಾತನನ್ನ ಕೆಎಸ್ಆರ್​ಟಿಸಿ ಡಿಸಿ ವಿಚಾರಣೆ ನಡೆಸಿದ್ದಾರೆ.

‘ಶಕ್ತಿ‘ ಯೋಜನೆ ಬಗ್ಗೆ ವಾಟಾಳ್​ ನಾಗರಾಜ್​ ಸಿಡಿಮಿಡಿ

ಶಕ್ತಿ ಯೋಜನೆಯಡಿ ಕೇವಲ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪ್ರಯಾಣ ಕಲ್ಪಿಸಿರೋದಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​ ವಿರೋಧ ವ್ಯಕ್ತಪಡಿಸಿದ್ದಾರೆ. ನಾವೇನು ಬಸ್ ಹಿಂದೆ ನಡ್ಕೊಂಡು ಹೋಗ್ಬೇಕಾ, ಹೆಣ್ಮಕ್ಕಳಿಗೆ ಬಸ್ ಫ್ರೀ ಓಕೆ. ಆದ್ರೆ ಗಂಡಸರು ಏನು ಓಟ್ ಹಾಕಿಲ್ವಾ? ಅಂತ ಸರ್ಕಾರವನ್ನ ಪ್ರಶ್ನಿಸಿದ್ದಾರೆ.

ಒಟ್ನಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿದ ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ತುಂಬಿದ್ರೆ ಪುರುಷರ ನಿಶಕ್ತಿಗೆ ಕಾರಣವಾಗಿದೆ. ಈ ಶಕ್ತಿ ಯೋಜನೆ ಇನ್ನೂ ಅದ್ಯಾವ್ಯಾವ ಹೈಡ್ರಾಮಾಗಳನ್ನ ಸೃಷ್ಟಿ ಮಾಡುತ್ತೆ ಅಂತ ಕಾದು ನೋಡ್ಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಫ್ರೀ ಬಸ್​​ನಲ್ಲಿ ತುಂಬಿ ತುಳುಕಿದ ಮಹಿಳೆಯರು; ಗಂಡಸರಿಗಿಲ್ಲ ಸೀಟು; ಫುಲ್​ ರಶ್​ಗೆ ಬೆಚ್ಚಿಬಿದ್ದ ಕಂಡಕ್ಟರ್​​!

https://newsfirstlive.com/wp-content/uploads/2023/06/KSRTC.jpg

Load More