newsfirstkannada.com

2ನೇ ವೀಕೆಂಡ್‌ಗೆ ತಗ್ಗಿದ ಮಹಿಳೆಯರ ಸಂಖ್ಯೆ.. ಖಾಲಿ ಖಾಲಿ ಹೊಡೆದ ಫ್ರೀ ಬಸ್​ಗಳು..!

Share :

25-06-2023

    ಮೆಜೆಸ್ಟಿಕ್​​ನಲ್ಲಿ ತಗ್ಗಿದ ಮಹಿಳಾ ಪ್ರಯಾಣಿಕರ ಸಂಖ್ಯೆ..!

    ದಕ್ಷಿಣದಲ್ಲಿ ಸ್ತ್ರೀ ಶಕ್ತಿ.. ಉತ್ತರದಲ್ಲಿ ಕುಸಿದ ಮಹಿಳಾ ಬಲ

    ಧಾರವಾಡದಲ್ಲಿ ನಾರಿಯರಿಲ್ಲದೇ ಬಿಕೋ ಎಂದ ನಿಲ್ದಾಣ

ಬೆಂಗಳೂರು: ಕಳೆದ ವಾರವಿದ್ದ ರಶ್​ ಕಡಿಮೆ ಆಗಿದೆ. ಈ ವಾರ ಇಲ್ಲ ಅಂತ ಅಲ್ಲ. ಈ ವಾರವೂ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಆದ್ರೆ, ಸಾರಿಗೆ ಇಲಾಖೆಗೆ ಒತ್ತಡವಿಲ್ಲ. ಆಷಾಡ ಕಾರಣಕ್ಕೆ ದಕ್ಷಿಣ ಮತ್ತು ಕರಾವಳಿಯಲ್ಲಿ ಬಸ್​ಗಳು ಭರ್ತಿ ಆಗಿ ಪ್ರಯಾಣಿಸಿದ್ರೆ, ಉತ್ತರದಲ್ಲಿ ಮಾತ್ರ ಶಕ್ತಿ ಕುಸಿತ ಕಂಡಿದೆ.

ಶಕ್ತಿ ಸ್ತ್ರೀಯರ ಪ್ರಯಾಣಕ್ಕೆ ಬಲ ತುಂಬಿದ ಯೋಜನೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಆರಂಭವಾದ ಜೂನ್​ 11ರಿಂದ ತುಂಬಿ ತುಳುಕಿದ ಬಸ್​ಗಳು ಈಗಲೂ ರಶ್​ ಆಗಿಯೇ ಓಡಾಡ್ತಿವೆ. ಸದ್ಯ, ಜನರ ಆತುರ ಕಡಿಮೆ ಆಗಿದೆ. ಪ್ರಯಾಣಿಕರ ಒತ್ತಡವನ್ನ ನಿಭಾಯಿಸುವ ಶಕ್ತಿ ಕೂಡ ಕೆಎಸ್​ಆರ್​ಟಿಸಿಗೆ ಬಂದಂತಿದೆ. ಆದ್ರೆ, ಆರಂಭಿಕ ವಾರದಲ್ಲಿದ್ದ ಗದ್ದಲ, ಗೊಂದಲ ಗಲಾಟೆಗಳು ಸ್ವಲ್ಪ ಕಡಿಮೆ ಆಗಿದ್ದು ಸಾರಿಗೆ ಸಂಸ್ಥೆ ಗೆಲುವಿನ ನಗೆ ಬೀರಿದೆ.

ದಕ್ಷಿಣದಲ್ಲಿ ಸ್ತ್ರೀ ಶಕ್ತಿ.. ಉತ್ತರದಲ್ಲಿ ಕುಸಿದ ಬಲ!

ಇಷ್ಟು ದಿನ ಬಸ್​ನಲ್ಲಿ ಸೀಟಿಗಾಗಿ ಮಹಿಳೆಯರ ಜಗಳ ಮೀತಿ ಮೀರಿತ್ತು. ಸೀಟ್​​ ಹಿಡಿಯಲು ಕಾಣಿಸಿದ ದಾರಿಗಳೆಲ್ಲವನ್ನೂ ಬಳಸಿಕೊಂಡಿದ್ರು. ಇತ್ತ, ಮೆಜೆಸ್ಟಿಕ್​ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿದೆ. ಆದ್ರೆ, ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಈಗಲೂ ಬಸ್​​ಗಳು ಭರ್ತಿ ಆಗಿಯೇ ಓಡಾಡ್ತಿವೆ. ಕೆಲ ಜಿಲ್ಲೆಗಳಲ್ಲಿ ಸ್ವಲ್ಪ ಮಹಿಳಾ ಪ್ರಯಾಣಿಕರ ಸಂಖ್ಯೆ ತಗ್ಗಿದೆ.

ಫ್ರೀ ಬಸ್​ ಎಫೆಕ್ಟ್​, ತೀರ್ಥಕ್ಷೇತ್ರಗಳು ಫುಲ್ ರಶ್

ದೇಗುಲಗಳ ನಾಡು ದಕ್ಷಿಣ ಕನ್ನಡ ಮತ್ತು ಉಡುಪಿ, ಚಿಕ್ಕಮಗಳೂರಿನ ತೀರ್ಥಕ್ಷೇತ್ರಗಳಿಗೆ ಸರ್ಕಾರದ ಯೋಜನೆ, ಶಕ್ತಿ ತುಂಬಿದೆ. ಶಕ್ತಿ ಯೋಜನೆಯ 2ನೇ ವೀಕೆಂಡ್​​​ ಕಾರಣ, ಭಕ್ತರ ದಂಡೇ ತೀರ್ಥ ಕ್ಷೇತ್ರಗಳಿಗೆ ಹರಿದು ಬಂದಿದೆ. ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ವಾರಾಂತ್ಯವೂ ನಾರಿಯರೇ ಹೆಚ್ಚಿದ್ದರು. ಕಳೆದ ವಾರ ಹೋಲಿಸಿದ್ರೆ, ಈ ವಾರ ಯಾತ್ರಾರ್ಥಿಗಳ ಸಂಖ್ಯೆ ಸ್ವಲ್ಪ ಕಡಿಮೆ ಆಗಿತ್ತು. ಆದ್ರೆ, ಆಷಾಡದಲ್ಲಿ ಖಾಲಿಯಾಗಿರುತ್ತಿದ್ದ ಈ ತೀರ್ಥಕ್ಷೇತ್ರಗಳು ಫ್ರೀ ಬಸ್​ನಿಂದಾಗಿ ರಶ್ ಆಗಿವೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಜನವೋ ಜನ
ವಾರಾಂತ್ಯ, ಆಷಾಡ ಮಾಸ ಪ್ರಯುಕ್ತ ಭಕ್ತಸಾಗರ

ಇತ್ತ, ನಾಡದೇವತೆ ಚಾಮುಂಡಿ ಬೆಟ್ಟ ಮಾತ್ರ ಭಕ್ತರಿಂದ ತುಳುಕಿತು. ಆಷಾಡ ಶುಕ್ರವಾರ ದರ್ಶನ ಸಿಗದ ಭಕ್ತರು ದೇವಿಯ ದರ್ಶನಕ್ಕೆ ಬಂದಿದ್ರು. ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಧನ್ಯರಾದ್ರು. ಸಚಿವೆ ‌ಹೆಬ್ಬಾಳ್ಕರ್ ಕೂಡ ಬೆಟ್ಟದ ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ರು.

KSRTC ಬಸ್​ಗಳಲ್ಲಿ ಕಿಕ್ಕಿರಿದ ಮಹಿಳೆಯರು

ಆದಿಯೋಗಿ ನೋಡೋಕೆ ಮಹಿಳೆಯರು ರಾಜ್ಯದ ಮೂಲೆ ಮೂಲೆಯಿಂದ ಮಹಿಳೆಯರು ಆಗಮಿಸ್ತಿದ್ದು, ಬಸ್​ಗಳು ಫುಲ್ ರಶ್ ಆಗಿವೆ. ರಾಜ್ಯದ ವಿವಿಧ ಭಾಗಗಳಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸ್ತಿದ್ದು, ನಗರದಿಂದ ಇಶಾ ಫೌಂಡೇಶನ್​ಗೆ ತೆರಳಲು ಹರಸಾಹಸ ಪಡ್ತಿದ್ದಾರೆ.. KSRTC ಬಸ್​ಗಳಲ್ಲಿ ಮಹಿಳೆಯರು ಕಿಕ್ಕಿರಿದು ತುಂಬಿದ್ದಾರೆ.

ಯಲ್ಲಮ್ಮನ ಗುಡ್ಡದಲ್ಲಿ ಕಂಡಕ್ಟರ್​ ಜೊತೆ ಕಿತ್ತಾಟ!

ಇನ್ನು, ಸುಪ್ರಸಿದ್ಧ ಬೆಳಗಾವಿಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಸ್​ ನಿರ್ವಾಹಕನ ಜೊತೆ ಜೋರು ಗಲಾಟೆ ಆಗಿದೆ. ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಮಹಿಳೆ, ಕರ್ತವ್ಯದಲ್ಲಿದ್ದ ನಿರ್ವಾಹಕನ ಶರ್ಟ್ ಹಿಡಿದು ಎಳೆದಾಡಿದ್ದಾಳೆ. ಇದ್ರಿಂದ ನಿರ್ವಾಹಕ ಹಾಗೂ ಮಹಿಳಾ ಪ್ರಯಾಣಿಕರು ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಧಾರವಾಡದಲ್ಲಿ ಸ್ತ್ರೀಯರಿಲ್ಲದೇ ಬಿಕೋ ಎಂದ ನಿಲ್ದಾಣ!

ಇತ್ತ, ವಿಜಯಪುರದಲ್ಲಿ ಬಸ್​ಗಳು ಖಾಲಿ ಹೊಡೆಯುತ್ತಿವೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ವಿಜಯಪುರ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಕೂಗಿ ಕರೆಯುವಷ್ಟು ಸಂಖ್ಯೆ ಇಳಿಮುಖವಾಗಿದೆ. ಕಳೆದ ವಾರ ಸೀಟಿಗಾಗಿ ನಡೆಯುತ್ತಿದ್ದ ಫೈಟ್​​​ ನಿಂತು ಹೋಗಿದೆ. ಇತ್ತ, ಧಾರವಾಡದಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಶನಿವಾರ ಆಗಿದ್ರೂ ಕೂಡ ಬಸ್​ ಸ್ಟಾಂಡ್​ ಖಾಲಿ ಹೊಡೀತಿದೆ. ಸವದತ್ತಿ, ದಾಂಡೇಲಿ ಸೇರಿ ದೂರದ ಊರುಗಳ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ.

ಒಟ್ಟಾರೆ, ಕೆಲ ಜಿಲ್ಲೆಗಳಲ್ಲಿ ಮಹಿಳಾ ಪ್ರಯಾಣಿಕರಿಂದ ಬಸ್​ಗಳು ಭರ್ತಿ ಆಗಿದ್ರೆ, ಕೆಲ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈ ಸಂಖ್ಯೆ ಕುಸಿದಿದೆ. ಜಿಲ್ಲಾವಾರು ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿದ್ರೂ ಕಳೆದ ವಾರಕ್ಕಿಂತ ಓಡಾಟ ನಡೆಸಿದ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ. ಇದಕ್ಕೆ ಕಾರಣ ಆಷಾಡ ಮಾಸ. ದಕ್ಷಿಣ ಕರ್ನಾಟಕ, ಕರಾವಳಿ ಮತ್ತು ಕೆಲ ಪ್ರಸಿದ್ಧ ದೇಗುಲ ಹೊಂದಿರುವ ಜಿಲ್ಲೆಗಳಲ್ಲಿ ಈ ಓಡಾಟ ಹೆಚ್ಚಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2ನೇ ವೀಕೆಂಡ್‌ಗೆ ತಗ್ಗಿದ ಮಹಿಳೆಯರ ಸಂಖ್ಯೆ.. ಖಾಲಿ ಖಾಲಿ ಹೊಡೆದ ಫ್ರೀ ಬಸ್​ಗಳು..!

https://newsfirstlive.com/wp-content/uploads/2023/06/KSRTC_1.jpg

Load More