newsfirstkannada.com

×

ಈ ತಿಂಗಳು ಬಿಲ್​​ ಕಟ್ಟಬೇಕಾ ಬೇಡವಾ? ಯಾವಾಗನಿಂದ ಕರೆಂಟ್​​ ಫ್ರೀ..?

Share :

Published July 1, 2023 at 6:16am

    ಇಂದಿನಿಂದ ಗೃಹಜ್ಯೋತಿ ದರ್ಬಾರ್​, 200 ಯೂನಿಟ್​ಗೆ ನೋ ಬಿಲ್​!

    ಅರ್ಜಿ ನೋಂದಣಿ ಮಾಡಿಸಿದವರಿಗೆ ಈ ಗೃಹಜ್ಯೋತಿ ಭಾಗ್ಯ ಅನ್ವಯ

    ಹಿಂದಿನ ತಿಂಗಳ ಬಿಲ್​ ಕ್ಲಿಯರ್​ ಮಾಡಿದ್ರೆ ಮಾತ್ರ ಬೆಳಗುತ್ತೆ ಗೃಹಜ್ಯೋತಿ

ಬೆಂಗಳೂರು: ಇನ್ಮುಂದೆ ಕರೆಂಟ್​ ಫ್ರೀ. ಇಂದಿನಿಂದಲೇ ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಇನ್ಮುಂದೆ ಬಳಸುವ 200 ಯುನಿಟ್​ ವಿದ್ಯುತ್​ಗೆ​ ಒಂದು ರೂಪಾಯಿ ಕಟ್ಟಂಗಿಲ್ಲ. ಇದೇ ವೇಳೆ ಮಹಿಳೆಯರು ಆನ್​​ಲೈನ್​​ ಅರ್ಜಿ ಸಲ್ಲಿಸುವಾಗ ಌಪ್ ಡೌನ್ಲೋಡ್​ ಮಾಡುವಾಗ ಎಚ್ಚರವಾಗಿರಿ. ಇಲ್ಲದಿದ್ರೆ ನಿಮ್ಮ ಖಾತೆಯಲ್ಲಿನ ಎಲ್ಲಾ ಹಣ ಖೋತಾ ಆಗಬಹುದು ಎಚ್ಚರ!

200 ಯೂನಿಟ್ ಬಳಸುವ ಯಾರಿಗೂ ಇಲ್ಲ ಕರೆಂಟ್ ಬಿಲ್

ಇಂದಿನಿಂದಲೇ ಗೃಹಜ್ಯೋತಿ ಸ್ಕೀಂ ಜಾರಿಯಾಗಲಿದೆ. ಹೀಗಾಗಿ 200 ಯೂನಿಟ್​ ವಿದ್ಯುತ್​ಗೆ ಸರಾಸರಿ ಲೆಕ್ಕದಲ್ಲಿ ಬಿಲ್​ ಕಟ್ಟುವಂತಿಲ್ಲ. ಜೂನ್​ನಲ್ಲಿ ಬಳಸಿದ ಕರೆಂಟ್​ಗೆ ಜುಲೈನಲ್ಲಿ ಬರುವ ಬಿಲ್​ ಕಟ್ಟಬೇಕು. ಆದ್ರೆ ಜುಲೈನಲ್ಲಿ ಬಳಸುವ ಕರೆಂಟ್​ಗೆ ಆಗಸ್ಟ್​ನಲ್ಲಿ ಬರುವ ಬಿಲ್​ಗೆ 200 ಯೂನಿಟ್​ ಬಿಲ್​ ಕಟ್ಟಂಗಿಲ್ಲ. ಅರ್ಜಿ ನೋಂದಣಿ ಮಾಡಿಸಿದವರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ. ಹಿಂದಿನ ಬಾಕಿ ಬಿಲ್​ ಕ್ಲೀಯರ್​ ಇದ್ರೆ ಮಾತ ಈ ಯೋಜನೆಯ ಸವಲತ್ತು ಜನರಿಗೆ ಸಿಗಲಿದೆ.

ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ನಕಲಿ ಆ್ಯಪ್‌ಗಳ ಹಾವಳಿ

ಇನ್ನು ಗ್ಯಾರಂಟಿಗಳ ಲಾಭ ಪಡೆಯಲು ಜನರು ಸಾಗರೋಪಾದಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಿಂದ ಸೇವಾಸಿಂಧು ವೆಬ್​ಸೈಟ್​ ಸೂಕ್ತವಾಗಿ ಕಾರ್ಯನಿರ್ವಹಿಸದಂತಾಗಿದೆ. ಇದನ್ನೇ ಲಾಭ ಮಾಡಿಕೊಂಡು ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ನಕಲಿ ಆ್ಯಪ್‌ಗಳು ಹಾವಳಿ ಇಟ್ಟಿವೆ. ಹೀಗಾಗಿ ಪ್ಲೇಸ್ಟೋರ್​​ನಿಂದ ಆ್ಯಪ್ ಮಾಡುವಾಗ ಎಚ್ಚರವಾಗಿರಬೇಕು. ಡೌನ್‌ಲೋಡ್ ಮಾಡೋರಿಗೆ ನಕಲಿ ಆ್ಯಪ್​ಗಳಿಂದ ಕನ್ಫ್ಯೂಸ್ ಆಗಿದ್ದು ಅರ್ಜಿ ರಿಲೀಸ್​​ಗೂ ಮೊದಲೇ ಜನರನ್ನ ವಂಚಿಸೋಕೆ ಖದೀಮರು ಖೆಡ್ಡಾ ರೆಡಿಮಾಡಿಕೊಂಡಿದ್ದಾರೆ. ಗೃಹಲಕ್ಷ್ಮೀ ಹೆಸರಲ್ಲೇ ಐದಾರು ನಕಲಿ ಆ್ಯಪ್​ಗಳು ಸೃಷ್ಠಿಯಾಗಿವೆ. ಒಂದು ವೇಳೆ ಈ ಆ್ಯಪ್​ಗಳನ್ನ ಡೌನ್​ಲೋಡ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಖೋತಾ ಆಗೋದು ಪಕ್ಕಾ.

ನಕಲಿ ಆ್ಯಪ್ ಬಗ್ಗೆ ಎಚ್ಚರ

ಅರ್ಜಿ ಹಾಕುವ ಭರದಲ್ಲಿ ಮಿಸ್ಸಾದ್ರೆ ನಿಮ್ಮ ಮೊಬೈಲ್​ಗೆ ನಕಲಿ ಆ್ಯಪ್ ಎಂಟ್ರಿಯಾಗುತ್ತೆ. ಪರಿಣಾಮ ಸೈಬರ್ ಕಳ್ಳರು ಸದ್ದಿಲ್ಲದೆ ಎಂಟ್ರಿ ಕೊಡ್ತಾರೆ. ಈ ಌಪ್​ಗಳು ಅದೇಗೆ ಜನರನ್ನು ಯಾಮಾರಿಸುತ್ತವೆ ಅಂದ್ರೆ ಸರ್ಕಾರ ಸಿದ್ದಪಡಿಸಿರೋ ಆ್ಯಪ್ ರೀತಿಯೇ ಇವು ಕಾಣುತ್ತವೆ. ಪ್ಲೇ ಸ್ಟೋರ್‌ನಲ್ಲಿ ಸರ್ಚ್​ ಮಾಡಿದ ತಕ್ಷಣವೇ ಈ ಅಸಲಿಯಂತೆ ಕಾಣುವ ಈ ನಕಲಿಗಳು ದಿಢೀರ್​ ಪ್ರತ್ಯಕ್ಷವಾಗುತ್ತವೆ. ಸಾಲಾಗಿ ಬರುವ ಈ ಆ್ಯಪ್​ಗಳನ್ನು ಓಪನ್ ಮಾಡಿದ್ರೆ ಸರ್ಕಾರದ ಆ್ಯಪ್​ನಂತೆ ಕಾಣುತ್ತವೆ. ಈ ನಕಲಿ ಆ್ಯಪ್‌ನಲ್ಲೂ ಸ್ಕೀಂನ ಸಂಪೂರ್ಣ ಮಾಹಿತಿ ನೀಡಲಾಗಿದೆ. ಯೋಜನೆಯ ಪ್ರಕ್ರಿಯೆ ಬಗ್ಗೆಯೂ ಕನ್ಪ್ಯೂಸ್​ ಮಾಡಲಾಗುತ್ತದೆ. ಹೀಗಾಗಿ ತಿಳಿಯದೆ ಡೌನ್​ಲೋಡ್​ ಆದ್ರೆ ನಿಮ್ಮ ಬ್ಯಾಂಕ್ ಖಾತೆಗೂ ಖದೀಮರು ಕನ್ನ ಹಾಕ್ತಾರೆ. ಮೊಬೈಲ್‌ನಲ್ಲಿರೋ ನಿಮ್ಮ ಖಾಸಗಿ‌ ಮಾಹಿತಿಯನ್ನೂ ಹ್ಯಾಕ್ ಮಾಡ್ತಾರೆ.

ಒಟ್ಟಾರೆ ಫ್ರೀಯಾಗಿ ಖಾತೆಗೆ ಹಣ ಬರಲಿದೆ ಅಂತ ಗೃಹಲಕ್ಷ್ಮೀಯರು ಮೈ ಮರೆಯದಿರಿ. ಡೌನ್​ಲೋಡ್​ ಮಾಡುವಾಗಲೇ ಪರಿಶೀಲಿಸಿಕೊಳ್ಳಿ. ಅಥವಾ ಸಮೀಪದ ಸೈಬರ್​ಗೆ ಹೋಗಿ. ಸರ್ಕಾರ ಕೊಡುವ 2 ಸಾವಿರಕ್ಕಾಗಿ ನೀವು ಇಷ್ಟು ದಿನ ಕಷ್ಟಪಟ್ಟು ದುಡಿದ ಹಣ ಸೈಬರ್ ಖದೀಮರ ಪಾಲಾಗದಿರಲಿ. ಸೋ ಎಚ್ಚರ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಈ ತಿಂಗಳು ಬಿಲ್​​ ಕಟ್ಟಬೇಕಾ ಬೇಡವಾ? ಯಾವಾಗನಿಂದ ಕರೆಂಟ್​​ ಫ್ರೀ..?

https://newsfirstlive.com/wp-content/uploads/2023/06/Current-Bill-4.jpg

Load More