ಕರುನಾಡನ್ನ ಬೆಳಗಿದ ಕಾಂಗ್ರೆಸ್ ‘ಗೃಹಜ್ಯೋತಿ’ ಬೆಳಕು
200 ಯೂನಿಟ್ ಲಕ್ಷ್ಮಣ ರೇಖೆ, ಫಲಾನುಭವಿಗಳಿಗೆ ಫ್ರೀ!
ಗೃಹಜ್ಯೋತಿಯ ಭಾಗ್ಯ ಈ ತಿಂಗಳಿಂದಲೇ ಒಲಿಯುತ್ತಾ?
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳ ಪೈಕಿ ಒಂದಾದ ‘ಗೃಹಜ್ಯೋತಿ‘ ಕರುನಾಡನ್ನ ಬೆಳಗಲು ಶುರುಮಾಡಿದೆ. ಆದ್ರೆ ಈ ತಿಂಗಳು ಗೃಹಜ್ಯೋತಿಯ ಕೃಪಾಕಟಾಕ್ಷಕ್ಕೆ ಯಾಱರ ಮನೆಯ ಮೀಟರ್ಗಳು ಒಳಪಡುತ್ತೆ ಅನ್ನೋ ಗೊಂದಲ ಜನರನ್ನ ಕಾಡ್ತಿದೆ. ಹಾಗಿದ್ರೆ ಅರ್ಜಿ ಹಾಕದವರಿಗೆ ಗೃಹಜ್ಯೋತಿಯ ವರ ಸಿಗುತ್ತಾ ಇಲ್ವಾ? ಸಿಗಬೇಕು ಅಂದ್ರೆ ಏನ್ ಮಾಡ್ಬೇಕು ಅನ್ನೋ ಡಿಟೈಲ್ಸ್ ಇಲ್ಲಿದೆ ನೋಡಿ.
ನಿನ್ನೆಯಿಂದ ಕರುನಾಡಲ್ಲಿ ಗೃಹಜ್ಯೋತಿಯ ಬೆಳಕು ಚೆಲ್ಲಿದೆ. ಗ್ಯಾರಂಟಿ ಗುದ್ದಾಟದಲ್ಲಿ ಗೆದ್ದ ಕೈ ಫಲಾನುಭವಿಗಳ ಮನೆಯ ಮೀಟರ್ಗೆ 200 ಯೂನಿಟ್ನ ಲಕ್ಷ್ಮಣ ರೇಖೆ ಎಳೆದು, ಮೈನ್ ಸ್ವಿಚ್ನ್ನ ಆನ್ ಮಾಡಿದೆ. ಈ ಮಧ್ಯೆ ಯಾರ್ಯಾರ ಮನೆಗಳ ವೈರ್ನಲ್ಲಿ ಗೃಹಜ್ಯೋತಿ ಕರೆಂಟ್ ಪಾಸ್ ಆಗುತ್ತೆ, ಯಾರ್ಯಾರ ಮನೆಗಳಲ್ಲಿ ಮತ್ತದೇ ಹಳೆಯ ಪವರ್ ಸಪ್ಲೆಯೇ ಮುಂದುವರೆಯುತ್ತೇ ಅನ್ನೋ ತವಕ ಜನರನ್ನ ಕಾಡತೊಡಗಿದೆ. ಗೃಹಜ್ಯೋತಿಯ ಭಾಗ್ಯ ಈ ತಿಂಗಳಿನಿಂದಲೇ ಒಳಿಯುತ್ತೋ ಅಥವಾ, ಮುಂದಿನ ತಿಂಗಳೋ ಅನ್ನೊ ಗೊಂದಲವೂ ಜನರಲ್ಲಿ ಮೂಡಿದೆ.
ಜುಲೈ 25ರೊಳಗೆ ಅರ್ಜಿ ಸಲ್ಲಿಸಿದವರಿಗಷ್ಟೇ ಗೃಹಜ್ಯೋತಿ ಬೆಳಕು!
ಗೃಹಜ್ಯೋತಿ ಅರ್ಜಿ ಸಲ್ಲಿಸದೇ ಇನ್ನೂ ಟೈಂ ಇದೆ ಅಂತ ಕಾದಿದ್ದ ಜನರಿಗೆ ಕಾಂಗ್ರೆಸ್ ಸರ್ಕಾರ ಗಡಿಯೊಂದರ ಕಡೆ ಬೊಟ್ಟುಮಾಡಿ ಅಲರ್ಟ್ ಆಗುವ ಸೂಚನೆ ನೀಡಿದೆ. ಈ ತಿಂಗಳ 25ರೊಳಗೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ರೆ ಮಾತ್ರ ಮುಂದಿನ ತಿಂಗಳು, ಅಂದ್ರೆ ಆಗಸ್ಟ್ನಲ್ಲಿ ಬರುವ ಜುಲೈ ತಿಂಗಳ ಕರೆಂಟ್ ಬಿಲ್ ಗೃಹಜ್ಯೋತಿ ಕೃಪೆಗೆ ಪಾತ್ರವಾಗಿರುತ್ತೆ. ಒಂದು ವೇಳೆ ಜುಲೈ 25ರೊಳಗೆ ನೀವು ಅರ್ಜಿಸಲ್ಲದೇ ಇದ್ದರೆ ನೀವು ಈ ಹಿಂದಿನಂತೆ ಕರೆಂಟ್ ಬಿಲ್ ಹಿಡಿದು ಕೆಇಬಿ ಕಚೇರಿಯಲ್ಲಿ ಕ್ಯೂ ನಿಲ್ಲಲೇ ಬೇಕಾಗುತ್ತೆ. ಈ ತಿಂಗಳು ಗೃಹಜ್ಯೋತಿ ನಿಮ್ಮ ಮನೆ ಬೆಳಗಬೇಕು ಅಂದ್ರೆ 25ರ ಒಳಗೆ ಅರ್ಜಿಸಲ್ಲಿಸಲೇ ಬೇಕಾಗುತ್ತೆ.
ಜುಲೈ 25ರ ಬಳಿಕ ಸಲ್ಲಿಸಿದ ಅರ್ಜಿ ಆಗಸ್ಟ್ ಲೆಕ್ಕಕ್ಕೆ!
ಒಂದು ವೇಳೆ ಪಲಾನುಭವಿಗಳು ಜುಲೈ 25ರ ಬಳಿಕ ಅರ್ಜಿ ಸಲ್ಲಿಸಿದ್ರೆ ಆ ಅರ್ಜಿಯ ಕಥೆ ಏನು ಅಂತ ನೀವು ಯೋಚನೆ ಮಾಡ್ತಿರಬಹುದು. ಸರ್ಕಾರ ಅದಕ್ಕೂ ಒಂದು ಸಲ್ಯೂಷನ್ ನೀಡಿದೆ. ಜುಲೈ 25ರ ಬಳಿಕ ಸಲ್ಲಿಕೆಯಾದ ಅರ್ಜಿ ಆಗಸ್ಟ್ ತಿಂಗಳಿನ ಗೃಹಜ್ಯೋತಿ ಸೌಲಭ್ಯ ಪಡೆಯಲು ಅರ್ಹವಾಗಿರುತ್ತೆ. ಅಂದ್ರೆ ಮುಂದೆ ಸೆಪ್ಟೆಂಬರ್ನಲ್ಲಿ ಬರುವ ಆಗಸ್ಟ್ ತಿಂಗಳಿನ ಕರೆಂಟ್ ಬಿಲ್ ಗೃಹಜ್ಯೋತಿ ಕೃಪಾಕಟಾಕ್ಷಕ್ಕೆ ಒಳಗಾಗಿರುತ್ತೆ. ಆಗಸ್ಟ್ ತಿಂಗಳಿನಲ್ಲಿ ನೀವು ಬಳಿಸಿದ 200 ಯೂನಿಟ್ ಒಳಗಿನ ಕರೆಂಟ್ಗೆ ಫುಲ್ ಫ್ರೀಯಾಗಿರುತ್ತೆ. ಈ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಸಹ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಗೃಹಜ್ಯೋತಿಗೆ ಕವಿದ ನಕಲಿ ಆ್ಯಪ್ಗಳ ಗ್ರಹಣ!
ಒಂದ್ಕಡೆ ಜನ ಗೃಹಜ್ಯೋತಿಗೆ ಅರ್ಜಿಸಲ್ಲಿಸಲು ಮುಗಿಬೀಳ್ತಿದ್ರೆ ಮತ್ತೊಂದ್ಕಡೆ ಸೈಬರ್ ಖದೀಮರು ಇದನ್ನೇ ಬಂಡವಾಳ ಮಾಡಿಕೊಳ್ಳು ಪ್ಲಾನ್ ಮಾಡಿದ್ದಾರೆ.. ಫೇಕ್ ಲಿಂಕ್, ಫೇಕ್ ವೆಬ್ಸೈಟ್ ಮೂಲಕ ಜನರಿಗೆ ವಂಚನೆ ಮಾಡಲು ಖದೀಮರು ಮೋಸದ ಬಲೆ ಹೆಣೆದಿದ್ದಾರೆ. ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವವರನ್ನೇ ಸೈಬರ್ ಖದೀಮರು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಸಿಸಿಬಿ ಟೆಕ್ನಿಕಲ್ ಸ್ಕ್ವಾಡ್ ವೆಬ್ಸೈಟ್, ಲಿಂಕ್ಗಳನ್ನ ಪರಿಶೀಲಿಸುತ್ತಿದ್ದು ಹದ್ದಿನ ಕಣ್ಣಿಟ್ಟಿದೆ. ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ಈ ಬಗ್ಗೆ ದೂರು ನೀಡುವಂತೆ ಬೆಸ್ಕಾಂ ಎಂ.ಡಿಗೆ ಮನವಿ ಮಾಡಿದ್ದಾರೆ. ಹಾಗೂ ಸುಮೋಟೋ ಕೇಸ್ ಕೂಡ ದಾಖಲಿಸಲು ಚಿಂತನೆ ನಡೆಸಿದ್ದಾರೆ.
‘ದೂರು ಕೊಟ್ರೆ ಕ್ರಮ ’
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ವೆಬ್ ಸೈಟ್‌ಗಳ ಬಗ್ಗೆ ಗಮನಕ್ಕೆ ಬಂದಿದೆ. ಗೃಹಜ್ಯೋತಿಗೆ ದಿನೇ ದಿನೆ ಅರ್ಜಿದಾರರ ಸಂಖ್ಯೆ ಹೆಚ್ಚಾಗ್ತಿದೆ. ಮೊಬೈಲ್‌ನಲ್ಲಿ ಅರ್ಜಿ ಹಾಕ್ತಿರೋರನ್ನ ಸೈಬರ್ ವಂಚಕರು ಟಾರ್ಗೆಟ್ ಮಾಡ್ತಿದ್ದಾರೆ. ಫೇಕ್‌ವೆಬ್ ಸೈಟ್‌ಗಳ ಹಾವಳಿ ಬಗ್ಗೆ ಬೆಸ್ಕಾಂ ಎಂಡಿಯವರಿಗೆ ಮನವಿ ಮಾಡಿದ್ದೇವೆ. ದೂರು ಕೊಟ್ರೆ ಕ್ರಮ ಕೈಗೋಳ್ತಿವಿ. ಇಲ್ಲವಾದಲ್ಲಿ ನಾವೇ ಸ್ವಯಂಪ್ರೇರಿತ ದೂರು ದಾಖಲಿಸಿ ವೆಬ್ ಸೈಟ್‌ಗಳ ಬಗ್ಗೆ ತನಿಖೆ ಕೈಗೊಳ್ತೀವಿ.
ಒಟ್ನಲ್ಲಿ ಗೃಹಜ್ಯೋತಿಯ ಬೆಳಕಿನ ಮಧ್ಯೆ ಸೈಬರ್ ವಂಚಕರ ಛಾಯೆ ಮೂಡಿರೋದು ಸಿಸಿಬಿ ಪೊಲೀಸರ ನಿದ್ದೆಗೆಡಿಸಿದೆ. ಮೊಬೈಲ್‌ನಲ್ಲಿ ಆರಾಮಾಗಿ ಅಪ್ಲಿಕೇಷನ್ ಹಾಕ್ತಿನಿ ಅಂತ ಸಿಕ್ಕಸಿಕ್ಕ ಲಿಂಕ್ ಅನ್ನ ಕ್ಲಿಕ್ ಮಾಡಿದ್ರೆ ಖದೀಮರು ನಿಮ್ಮ ಜೇಬಿಗೂ ಕತ್ತರಿ ಹಾಕೋದು ಖಾತರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ