newsfirstkannada.com

200 ಯೂನಿಟ್​​ ಕರೆಂಟ್​​ ಫ್ರೀ ಯಾರಿಗೆ..? ಬಾಡಿಗೆ ಮನೆಯವ್ರು ಓದಲೇಬೇಕಾದ ಸ್ಟೋರಿ ಇದು!

Share :

07-06-2023

  ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರದಿಂದ ಸರ್ಕಸ್

  ಗ್ಯಾರಂಟಿ ಜಾರಿಯಾದ್ರೂ ಬಗೆಹರಿಯದ ಗೊಂದಲ

  ಬಾಡಿಗೆ ಮನೆಗಳನ್ನೂ ಬೆಳಗಲಿದೆ ‘ಗೃಹಜ್ಯೋತಿ’

ಬೆಂಗಳೂರು: ಗ್ಯಾರಂಟಿ ಮೇಲೆ ಅಧಿಕಾರಕ್ಕೆ ಬಂದಿರೋ ಸರ್ಕಾರ.. ಕಾಂಗ್ರೆಸ್‌ ಸರ್ಕಾರ.. ಆದ್ರೀಗ ಗ್ಯಾರಂಟಿಗಳ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಹೆಣಗಾಡುತ್ತಿದೆ.. ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಸ್ ಶುರುಮಾಡಿದೆ.. ಆದ್ರೆ, ಸರ್ಕಾರ ಕೊಡ್ತಿರೋ ಗ್ಯಾರಂಟಿ ಬಗ್ಗೆ ಜನರಿಗೇ ಗ್ಯಾರಂಟಿ ಇಲ್ಲದಂತಾಗಿದೆ. ದಿನಕ್ಕೊಂದು ಸಂಶಯಗಳು ಜನರನ್ನ ಕಾಡುತ್ತಿವೆ. ಹೀಗಾಗಿ ಎಲ್ಲಾ ಕನ್‌ಫ್ಯೂಷನ್ ಬಗೆಹರಿಸಲು ಸರ್ಕಾರ ಪ್ರಯತ್ನಿಸಿದೆ.. ಅದರಲ್ಲೂ ಗೃಹಜ್ಯೋತಿ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆದಿದೆ..

ನುಡಿದಂತೆ ನಡೆಯುವೆವು.. ಕೊಟ್ಟ ಮಾತನ್ನ ತಪ್ಪಲಾರೆವು.. ಎಂದಿದ್ದ ಕಾಂಗ್ರೆಸ್ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಅನುಷ್ಟಾನ ಮಾಡಿದೆ.. ಆದ್ರೆ, ಗ್ಯಾರಂಟಿ ಜಾರಿಯಾದ್ರೂ ಜನರಿಗೆ ಮಾತ್ರ ಗೊಂದಲ ಬಗೆಹರಿಯುತ್ತಿಲ್ಲ.. ಈ ಮಧ್ಯೆ ಗೃಹಜ್ಯೋತಿ ಬಗ್ಗೆ ಜನರು ತಲೆ ಕೆಡಿಸಿಕೊಂಡಿದ್ರು. ಯಾರ ಬಾಳಲ್ಲಿ ಗೃಹಜ್ಯೋತಿ ಬೆಳಗಲಿದೆ ಅಂತಾ ಹುಳ ಬಿಟ್ಕೊಂಡಿದ್ರು.. ಇದೀಗ ಎಲ್ಲಾ ಕನ್‌ಫ್ಯೂಷನ್‌ಗೂ ಸರ್ಕಾರ ತೆರೆ ಎಳೆದಿದೆ.

ಬಾಡಿಗೆ ಮನೆಗಳನ್ನೂ ಬೆಳಗಲಿದೆ ‘ಗೃಹಜ್ಯೋತಿ’

ಗೃಹ ಜ್ಯೋತಿ.. ಕಾಂಗ್ರೆಸ್‌ನ ಬಹು ಉಪಯೋಗಿ ಈ ಯೋಜನೆ ಎಲ್ಲರ ಮನೆಯನ್ನ ಬೆಳಗಲಿದೆ ಅಂತಾ ಸರ್ಕಾರ ಹೇಳಿದೆ.. ಇದನ್ನ ಜಾರಿಗೊಳಿಸಲು ಗೈಡ್‌ಲೈನ್ಸ್‌ನೂ ರಿಲೀಸ್ ಮಾಡಿದೆ. ಆದ್ರೆ, ಸರ್ಕಾರದ ಮಾರ್ಗಸೂಚಿಯೇ ಜನರನ್ನ ಗೊಂದಲಕ್ಕೆ ತಳ್ಳಿತ್ತು. ಬಾಡಿಗೆ ಮನೆಗಳಿಗೆ ಗ್ಯಾರಂಟಿ ಸಿಗುತ್ತೋ? ಇಲ್ವೋ ಎಂಬ ಸಂಶಯ ಜನಸಾಮಾನ್ಯರನ್ನ ಕಾಡಿತ್ತು.. ಅದರಲ್ಲೂ ಬೆಂಗಳೂರಿನಂತ ಸಿಟಿಯಲ್ಲಿ ಬಾಡಿಗೆ ಮನೆಯಲ್ಲಿರೋ ಜನರಿಗೆ ಗೃಹಜ್ಯೋತಿ ಸಿಗುತ್ತೋ ಇಲ್ವೋ ಎಂಬ ಅನುಮಾನ ಮೂಡಿತ್ತು. ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಇಂಧನ ಸಚಿವ ಕೆ.ಜೆ. ಜಾರ್ಜ್ ಅಖಾಡಕ್ಕೆ ಇಳಿದಿದ್ರು.. ಬಾಡಿಗೆ ದಾರರಿಗೂ ಫ್ರೀ ವಿದ್ಯುತ್ ಹೇಗೆ ಸಿಗಲಿದೆ ಅಂತಾ ಎಳೆ ಎಳೆಯಾಗಿ ವಿವರಿಸಿದ್ರು..

ಆಧಾರ್, RR, ವೋಟರ್‌ ಐಡಿ ಕೊಡ್ಬೇಕು

ಇನ್ನೂ ಬಾಡಿಗೆದಾರರಿಗೂ ಗೃಹಜ್ಯೋತಿ ಫ್ರೀ ವಿದ್ಯುತ್ ದೊರೆಯಲಿದೆ.. ಹಾಗಾದ್ರೆ, ಗೃಹಜ್ಯೋತಿ ಬಳಕೆ ಹೇಗೆ? ಎಷ್ಟು ಯೂನಿಟ್‌ವರೆಗೂ ಉಚಿತ.. ಸರಾಸರಿಯಲ್ಲಿ ಎಷ್ಟು ಯೂನಿಟ್‌ವರೆಗೂ ಫ್ರೀ ವಿವರಿಸ್ತೀವಿ ನೋಡಿ.

ಗೃಹಜ್ಯೋತಿ ‘ಗ್ಯಾರಂಟಿ’

ಒಂದು ಮನೆಯಲ್ಲಿ ಬಳಸಿದ 12 ತಿಂಗಳ ವಿದ್ಯುತ್‌ನ ಸರಾಸರಿಯಂತೆ ಉಚಿತ ವಿದ್ಯುತ್‌ ಯೂನಿಟ್‌ ನಿಗದಿಯಾಗಲಿದೆ.. ಸರಾಸರಿ ಜೊತೆಗೆ ಶೇಕಡ 10ರಷ್ಟು ಹೆಚ್ಚುವರಿ ಬಳಕೆಗೂ ಬಿಲ್ ಉಚಿತವಾಗಿರಲಿದೆ. ಸರಾಸರಿಗಿಂತ ಶೇ.10 ಮೀರಿದ್ರೆ ಹೆಚ್ಚುವರಿ ಯೂನಿಟ್‌ಗಷ್ಟೇ ಬಿಲ್‌ ಪಾವತಿಸಬೇಕು.. ಇನ್ನೂ 200 ಯೂನಿಟ್​ವರೆಗೆ ಮಾತ್ರ ಉಚಿತ ವಿದ್ಯುತ್‌ ಪ್ರಯೋಜನ ಸಿಗಲಿದೆ.. 200 ಯೂನಿಟ್‌ಗಿಂತ ಹೆಚ್ಚಾದ್ರೆ ಸಂಪೂರ್ಣ ಬಿಲ್‌ ಪಾವತಿಸಬೇಕು ಅಂತಾ ಸರ್ಕಾರ ಮಾರ್ಗಸೂಚಿ ನೀಡಿದೆ..

ಬಾಡಿಗೆದಾರರೇ ಗಮನಿಸಿ..!

ಗೃಹಜ್ಯೋತಿ ಫ್ರೀ ವಿದ್ಯುತ್ ಸೌಲಭ್ಯದ ಲಾಭ ಬಾಡಿಗೆದಾರರು, ಲೀಸ್‌ದಾರರಿಗೂ ಕೂಡ ಸಿಗಲಿದೆ. ಬಾಡಿಗೆದಾರರು ಆರ್‌ಆರ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡಬೇಕು, ಅಥವಾ ಮನೆ ಬಾಡಿಗೆ ಕರಾರು ಪತ್ರವನ್ನ ಅಪ್‌ಲೋಡ್‌ ಮಾಡಬಹುದು. ಇಲ್ಲದಿದ್ದರೆ ತಾವು ವಾಸ ಮಾಡುವ ಸ್ಥಳದ ವೋಟರ್‌ ಐಡಿ ಇದ್ದರೆ ಅದನ್ನೂ ಅಪ್‌ಲೋಡ್‌ ಮಾಡಬಹುದು. ಜೊತೆಗೆ ಡಿಎಲ್‌, ಪಾಸ್‌ಪೋರ್ಟ್‌, ರೇಷನ್‌ ಕಾರ್ಡ್‌ ಕೂಡಾ ನೀಡಬಹುದು. ಸೇವಾಸಿಂಧು ಪೋರ್ಟಲ್‌ ಮೂಲಕ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂತಾ ಸರ್ಕಾರ ಮಾಹಿತಿ ನೀಡಿದೆ..

ಹೀಗೆ, ಸೇವಾಸಿಂಧು ಪೋರ್ಟ್‌ಲ್‌ನಲ್ಲಿ ಗೃಹಜ್ಯೋತಿಗೆ ಅರ್ಜಿ ಹಾಕಿದ್ರೆ ಈ ಯೋಜನೆಗೆ ನೀವು ಅರ್ಹತೆಯನ್ನ ಹೊಂದಿದ್ದೇ ಆದ್ರೆ ವಿದ್ಯುತ್ ಉಚಿತ.. ಒಂದ್ವೇಳೆ ನಿಮ್ಮ ಸರಾಸರಿ 200 ಯೂನಿಟ್ ಮೀರಿದ್ರೆ ನಿಮ್ಮ ಮನೆಗೆ ಫುಲ್ ಬಿಲ್ ಬರೋದು ಖಚಿತ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

200 ಯೂನಿಟ್​​ ಕರೆಂಟ್​​ ಫ್ರೀ ಯಾರಿಗೆ..? ಬಾಡಿಗೆ ಮನೆಯವ್ರು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/06/Current-Bill.jpg

Load More