ಅತಿಯಾದ ಜುಗ್ಗತನವೇ ಒಮ್ಮೊಮ್ಮೆ ಅಪಾಯಕ್ಕೆ ಹಾದಿ
ದುಡ್ಡು ಹೆಚ್ಚಾದ್ರೂ ಪರ್ವಾಗಿಲ್ಲ ಆಟೋ, ಬಸ್ನಲ್ಲೇ ಹೋಗಿ!
ಬಿಟ್ಟಿಯಾಗಿ ಡ್ರಾಪ್ ಮಾಡ್ತೀವಿ ಎಂದಿದ್ದೇ ತಡ ಕಾರ್ ಹತ್ತಬೇಡಿ
ಬೆಂಗಳೂರು: ಅತಿಯಾದ ಜುಗ್ಗತನ ಒಮ್ಮೊಮ್ಮೆ ಅಪಾಯಕ್ಕೆ ದೂಡಿಬಿಡುತ್ತೆ ಅಂತಾ ಯಾರೂ ಗೆಸ್ ಕೂಡ ಮಾಡೋಕ್ಕಾಗಲ್ಲ. ನಮ್ಮ ವೀಕ್‌ನೆಸೇ ದುಷ್ಕರ್ಮಿಗಳಿಗೆ ಹಲವು ಬಾರಿ ಪ್ಲಸ್ ಆಗಿ ಕನ್ವರ್ಟ್ ಆಗಿಬಿಡುತ್ತೆ. ಆ ವ್ಯಕ್ತಿಯೂ ಕೂಡ ಕೇವಲ 100 ರೂಪಾಯಿ ಉಳಿಸೋಕೆ ಹೋಗಿ, ದೊಡ್ಡ ಗಂಡಾಂತರದಲ್ಲಿ ಸಿಲುಕಿಕೊಂಡು ಬಿಟ್ಟ. ಜೀವ ಉಳಿದರೇ ಸಾಕಪ್ಪಾ! ಅನ್ನೋ ಪರಿಸ್ಥಿತಿಗೆ ತನ್ನನ್ನೇ ತಾನು ತಂದುಕೊಂಡುಬಿಟ್ಟಿದ್ದ. ಆ ಇಬ್ಬರು ಅಪಾಯಕ್ಕೆ ಸಿಲುಕಿಕೊಳ್ಳಲು ಕಾರಣ ಅದೊಂದು ಪದ… ಡ್ರಾಪ್.. ಡ್ರಾಪ್..ಡ್ರಾಪ್..!
ವ್ಯಕ್ತಿಯ ಹೆಸರು ನಾಗ್ಯನಾಯ್ಕ. ಇವ್ರು ಊರು ಚಿತ್ರದುರ್ಗ. ಈ ಸ್ಟೋರಿಯಲ್ಲಿ ಇವ್ರ ಹೆಸರಾಗಲಿ, ಊರಾಗಾಲಿ ಇಂಪಾರ್ಟ್‌ಟೆಂಟೇ ಅಲ್ಲ. ಅದಕ್ಕಿಂತ ಮುಖ್ಯವಾಗಿರೋದು ಇವರ ಕಣ್ಣಿನ ಗುಡ್ಡೆ ಮೇಲೆ ರಕ್ತ ಹೆಪ್ಪುಗಟ್ಟಿರೋದು ಮತ್ತು ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗಿರೋದು.
ಈ ರೀತಿ ಯಾವಾಗ ಆಗುತ್ತೆ ಅಂತಾ ನಿಮ್ಗೆ ಬಿಡಿಸಿಹೇಳ್ಬೇಕಿಲ್ಲ. ಬಲವಾಗಿ ಕೈಯಿಂದ ಹಲ್ಲೆ ಮಾಡಿದರೆ ಮಾತ್ರ ಇಂತಹ ಪೆಟ್ಟು ಆಗೋದು. ಇನ್‌ಫ್ಯಾಕ್ಟ್ ಇದು ಸಣ್ಣಪುಟ್ಟ ಗಾಯವಲ್ಲ. ತೀವ್ರ ನೋವು ಕೊಡುವ ಹಾಗೂ ಆಪಾಯಕ್ಕೆ ದೂಡುವ ಹೊಡೆತ.
ಅಷ್ಟಕ್ಕೂ ಈ ವ್ಯಕ್ತಿಗೆ ಈ ರೀತಿ ಆಗಲು ಕಾರಣವೇ… ಡ್ರಾಪ್.. ಡ್ರಾಪ್..ಡ್ರಾಪ್..!
ಸೆಪ್ಟೆಂಬರ್ 2ನೇ ತಾರೀಖು ನಾಗ್ಯ ನಾಯ್ಕು ಮತ್ತು ಸ್ನೇಹಿತರೊಬ್ಬರು ಅಡುಗೆ ಕೆಲ್ಸಕ್ಕಾಗಿ ಚಿತ್ರದುರ್ಗದಿಂದ ಬಂದಿದ್ದರು. ಕೆಲ್ಸ ಮುಗಿಯೋವಷ್ಟರಲ್ಲಿ ರಾತ್ರಿಯಾಗಿತ್ತು. ಗೊರಗುಂಟೆಪಾಳ್ಯದಲ್ಲಿದ್ದ ಈ ಇಬ್ಬರು, ನಾಯಂಡಹಳ್ಳಿಗೆ ಬರಬೇಕಿತ್ತು. ಇಲ್ಲಿಗೆ ಹೋಗಲು ಕ್ಯಾಬೋ, ಆಟೋನೋ ಬುಕ್ ಮಾಡಿಕೊಂಡಿದ್ದಿದ್ರೆ, ಏನೂ ಪ್ರಾಬ್ಲಂ ಆಗ್ತಿರಲಿಲ್ಲ. ಜೇಬಿಗೆ ದೊಡ್ಡ ಕತ್ತರಿ ಅಂತೂ ಬೀಳ್ತಾನೇ ಇರ್ಲಿಲ್ಲ. ಹೆಚ್ಚೆಂದರೇ, 50 ರಿಂದ 100 ರೂಪಾಯಿ ಆಗ್ತಿತ್ತು ಅಷ್ಟೇ. ಈ ದುಡ್ಡನ್ನ ಉಳಿಸಲು ಇವ್ರು ಮಾಡಿದ ಯಡವಟ್ಟು ಏನೂ ಗೊತ್ತಾ.. … ಡ್ರಾಪ್.. ಡ್ರಾಪ್..ಡ್ರಾಪ್..!
ನಾಗ್ಯನಾಯ್ಕ
ಇವ್ರು ಡ್ರಾಪ್ ಅಂತಾ ಕೈ ಅಡ್ಡಗಟ್ಟುತ್ತಿದ್ದಂತೆ ಬಿಳಿಯ ಬಣ್ಣದ ಕಾರೊಂದು ಇವರ ಮುಂದೆ ನಿಲ್ಲಿಸಿತು. ಬನ್ನಿ ಅಣ್ಣ ನಾವು ಅಲ್ಲಿಗೆ ಹೋಗ್ತಿದ್ದೇವೆ. ನಿಮಗೆ ಡ್ರಾಪ್ ಕೊಡ್ತೀವಿ ಅಂತಾ ಹೇಳಿದರಷ್ಟೇ. ಇವರಿಬ್ಬರು ಹಿಂದೂ ಮುಂದು ಯೋಚ್ನೆ ಮಾಡ್ದೆ, ಕಾರು ಹತ್ತು ಬಿಟ್ಟರು. ಕಾರಿನ ಡ್ರೈವರ್ ಬಿಟ್ಟು ಹಿಂದಿನ ಸೀಟ್ ನಲ್ಲಿ ಇಬ್ಬರು ಪ್ಯಾಸೆಂಜರ್ ರೀತಿ ಕೂತಿದ್ರು. ಯಾವಾಗ ಕಾರು ಹತ್ತಿದರೋ, ಸ್ಪೀಕರ್ ವಾಲ್ಯೂಮ್ ಹೆಚ್ಚಾಯ್ತು. ಮಾತನಾಡಿಸಿದರೂ ಕೇಳಿಸದಷ್ಟು ಸೌಂಡ್ ಕೊಟ್ಟರು.
ಇವರಿಬ್ಬರ ಖುಷಿ ಇದ್ದದ್ದು ಕೆಲವೇ ಕೆಲವು ನಿಮಿಷ ಮಾತ್ರ. ಸ್ವಲ್ಪ ದೂರ ಹೋಗ್ತಿದ್ದಂತೆ, ಹಿಂದಿನ ಸೀಟ್ ನಿಂದ ಕತ್ತು ಲಾಕ್ ಮಾಡಿ, ಕುತ್ತಿಗೆಗೆ ಚಾಕು ಇಟ್ಟರು. ಮುಖ ಮೂತಿ ನೋಡದೇ ಹಲ್ಲೆ ಮಾಡೋಕೆ ಶುರು ಮಾಡಿದರು. ಹಾಡು ಜೋರಾಗಿ ಕೊಟ್ಟಿದ್ದರಿಂದ, ಇವರ ಕೂಗು ಯಾರಿಗೂ ಕೇಳಿಸಲಿಲ್ಲ.
ಕಾರಿನಲ್ಲಿಯೇ ನಿರಂತರವಾಗಿ ಹಲ್ಲೆಯಾಗ್ತಿತ್ತು. ಬಳಿಕ ಕಾರು ಮಾಳಗಾಳದ ನಿರ್ಜನ ಪ್ರದೇಶದತ್ತ ಹೋಯ್ತು. ಕಾರು ನಿಂತಿತು, ಆದ್ರೆ, ಟಾರ್ಚರ್ ಮಾತ್ರ ನಿಲ್ಲಲಿಲ್ಲ.
ಕಾರಿನಲ್ಲಿ ಇಬ್ಬರು ಫುಲ್ ಲಾಕ್ ಆಗಿದ್ದರು. ನಮ್ಮನ್ನ ಬಿಟ್ಟುಬಿಟ್ರಿ ಅಂತಾ ಗೋಗರೆದರೂ ನಿಷ್ಕರುಣಿಗಳ ಮನಸ್ಸು ಕರಗಲಿಲ್ಲ. ಕೊನೆಗೆ ಮೊಬೈಲ್‌ನಲ್ಲಿದ್ದ ಹಣವನ್ನೆಲ್ಲಾ ತಮ್ಮ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಸಿಕೊಂಡರು. ಜೇಬಿನಲ್ಲಿದ್ದದ್ದು, ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ವರ್ಗಾಯಾಯ್ತು.
1 ಲಕ್ಷಕ್ಕೂ ಹೆಚ್ಚು ಪೀಕಿದ್ರು
4700 ರೂಪಾಯಿ ಸ್ಕ್ಯಾನ್ ಮಾಡಿಕೊಂಡಿದ್ದಲ್ಲದೇ, ಕಿವಿಯಲ್ಲಿ ಓಲೆ, ಮೊಬೈಲ್ ಸೇರಿದಂತೆ 93 ಸಾವಿರ ಬೆಳೆಬಾಳುವ ವಸ್ತುಗಳನ್ನ ಕಸಿದುಕೊಂಡರು. ಆರೋಪಿಗಳ ಹಲ್ಲೆಯಿಂದ ಅಮಾಯಕರಿಗೆ ತೀವ್ರ ಗಾಯವಾಗಿತ್ತು.
ತೀವ್ರ ಗಾಯಗೊಂಡಿದ್ದ ಇವರಿಬ್ಬರು ಪಕ್ಕದಲ್ಲಿದ್ದ ಪಬ್ಲಿಕ್ ಫೋನ್‌ನಿಂದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣವೇ ಬಂದ ಪೊಲೀಸರು, ಮೊದಲು ಅವರಿಬ್ಬರಿಗೆ ಚಿಕಿತ್ಸೆ ಕೊಡಿಸಿ, ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದರು.
ಅಂದ್ಹಾಗೇ, ಇದೇ ರೀತಿ ಈ ಹಿಂದೆ ಎರಡು ಪ್ರಕರಣ ದಾಖಲಾಗಿತ್ತು. ಅನ್ನಪೂರ್ಣೇಶ್ವರಿ ನಗರ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಈ ಕೇಸ್ ಕೂಡ ಸೇರಿ ಒಟ್ಟು ಮೂರಾಗಿತ್ತು.
ಆರೋಪಿಗಳು ಸಂತ್ರಸ್ತರಿಂದ ಹಣ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದ ನಂಬರ್ ಮತ್ತು ಅಕೌಂಟ್‌ನ ಟ್ರೇಸ್ ಮಾಡಿದಾಗ ಪೊಲೀಸರಿಗೆ ಸಾಕಷ್ಟು ಮಾಹಿತಿ ಸಿಕ್ಕಿತ್ತು. ಒಂದಷ್ಟು ಸಿಸಿಟಿವಿ ಫೂಟೇಜ್ ಜಾಲಾಡಿದಾಗ ಕಾರಿನ ನಂಬರ್ ಪತ್ತೆಯಾಯ್ತು. ಈ ಕಾರಿನಲ್ಲಿ ಜಿಪಿಎಸ್ ಇರೋದು ಗೊತ್ತಾಯ್ತು. ಈ ಆಧಾರದ ಮೇಲೆ ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿರೋದು ಗೊತ್ತಾಯ್ತು. ಪೊಲೀಸರು 23 ಕಿಲೋ ಮೀಟರ್ ಚೇಸ್ ಮಾಡಿ ಆರೋಪಿಗಳನ್ನ ಅರೆಸ್ಟ್ ಮಾಡಿದರು.
ಓರ್ವ ಆರೋಪಿ ಖಾಸಗಿ ಕಂಪನಿಯಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದ. ಇನ್ನೊಬ್ಬ ವೃತ್ತಿಯಲ್ಲಿ ಆಟೋ ಡ್ರೈವರ್. ಟ್ರಾವೆಲ್ಸ್ ವೊಂದಕ್ಕೆ ಸೇರಿದ್ದ ಕಾರ್ ನಲ್ಲೇ ಆರೋಪಿಗಳು…ಕೃತ್ಯ ಎಸಗಿದ್ದರು. ಇದೊಂದು ಅಪರಾಧ ಕೃತ್ಯವಲ್ಲ. ಪ್ರತಿಯೊಬ್ಬರು ಈ ಬಗ್ಗೆ ಎಚ್ಚರಿಕೆಯಿಂದ ಇರ್ಬೇಕು. ಇಲ್ಲದಿದ್ರೆ, ನೀವು ಅಪಾಯಕ್ಕೆ ಸಿಲುಕೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ