'ಫ್ರೀ.. ಫ್ರೀ.. ಫ್ರೀ ಅನ್ನೋದೆಲ್ಲಾ ಚೀಪ್ ಪಾಪುಲಾರಿಟಿ'
ಸಿಎಂ ಸಿದ್ದು ಸಂಪುಟದ ಸದಸ್ಯರೇ ಹೀಗೆ ಹೇಳಿದ್ದೇಕೆ?
‘ಕೈ’ ಚೀಪ್ ಪಾಪ್ಯುಲಾರಿಟಿ ಮೂಲಕ ಅಧಿಕಾರಕ್ಕೆ ಬಂತಾ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳು ಅದರ ಕಂಡೀಷನ್ಸ್‌ಗಳ ಬಗ್ಗೆಯೇ ಭಾರೀ ಚರ್ಚೆಯಾಗ್ತಿದೆ. ಗ್ಯಾರಂಟಿ ಯೋಜನೆಯ ಗದ್ದಲದ ಮಧ್ಯೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು, ಅಧಿಕಾರಕ್ಕಾಗಿ ಫ್ರೀ.. ಫ್ರೀ ಅನ್ನೋ ಚೀಪ್ ಪಾಪುಲಾರಿಟಿಯನ್ನ ನಾವು ಮಾಡ್ತೀವಿ ಅಂತಾ ಚಲುವರಾಯಸ್ವಾಮಿ ಹೇಳಿರುವ ಮಾತು ಸಖತ್ ವೈರಲ್ ಆಗಿದೆ.
ತಮಿಳುನಾಡಿನಲ್ಲಿ ಉಚಿತ ಯೋಜನೆಗಳು ಘೋಷಣೆ ಆದಾಗ ದೇಶಾದ್ಯಂತ ಚರ್ಚೆ ಆಯ್ತು. ಈ ಫ್ರೀ ಯೋಜನೆಗಳು ಒಳ್ಳೆಯದಲ್ಲ ಅಂತಾ ನಾವು ಕೂಡ ಚರ್ಚೆ ಮಾಡಿದ್ದೀವಿ. ಫ್ರೀ.. ಫ್ರೀ ಅಂತಾ ಹೋದ್ರೆ ಮುಂದೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಅಂತಾ ಚಲುವರಾಯಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಚುನಾವಣೆ, ರಿಸಲ್ಟ್, ಸರ್ಕಾರ ಬಂದ್ರೆ ತಾನೇ ನಾವೇನಾದ್ರೂ ಮಾಡೋಕೆ ಸಾಧ್ಯವಾಗೋದು. ಅಧಿಕಾರ ಸಿಕ್ಕಿದ್ರೆ ತಾನೇ ನಾವು ಕೆಲಸ ಮಾಡೋಕೆ ಆಗೋದು ಎಂದಿರುವ ಸಚಿವ ಚಲುವರಾಯಸ್ವಾಮಿ ಅವರು ಅವತ್ತಿಗೆ ರಿಸಲ್ಟೇ ಅನಿವಾರ್ಯವಾಗುತ್ತೆ ಎಂದಿದ್ದಾರೆ.
ರಿಸಲ್ಟ್ ಬರಬೇಕು ಅಂದಾಗ ಚೀಪ್ ಪಾಪುಲಾರಿಟಿ, ಇಲ್ಲದ್ದು ಸಲ್ಲದ್ದು ಎಲ್ಲಾ ಮಾಡ್ತೀವಿ. ನಮ್ಮ ಮನಸ್ಸಿಗೆ ಇಷ್ಟವಾಗುತ್ತೋ ಇಲ್ವೋ, ಇದು ಸಿದ್ದರಾಮಯ್ಯರಿಗೂ ಇಷ್ಟ ಆಗುತ್ತೊ ಇಲ್ವೋ ಆದ್ರೆ ಮಾಡ್ಕೊಂಡು ಹೋಗ್ಬೇಕಾಗುತ್ತೆ. ಒಪ್ಪಿಕೊಂಡು ಹೋಗಬೇಕಾಗುತ್ತೆ ಎಂದು ಕೃಷಿ ಸಚಿವರು ಹೇಳಿದ್ದಾರೆ. ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ಮೇಲೆ ಕಿಡಿಕಾರುತ್ತಿರುವಾಗ ಸಚಿವ ಚಲುವರಾಯಸ್ವಾಮಿ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಫ್ರೀ.. ಫ್ರೀ.. ಅಂತಾ ಎಲೆಕ್ಷನ್ನಲ್ಲಿ ಗೆಲುವಿಗಾಗಿ ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು-ಸಲ್ಲದ್ದು ಮಾಡ್ತೀವಿ. ಸಿಎಂ ಸಿದ್ದರಾಮಯ್ಯಗೆ ಇಷ್ಟ ಆಗುತ್ತೋ ಇಲ್ವೋ, ಮಾಡ್ಕೊಂಡು ಹೋಗ್ಬೇಕು ಅಂತಾ ಕೃಷಿ ಸಚಿವ ಚಲುವರಾಯಸ್ವಾಮಿ ಆಡಿರೋ ಮಾತು ಸಂಚಲನ ಸೃಷ್ಟಿಸಿದೆ. #Newsfirstlive #Cheluvarayaswamy @siddaramaiah @DKShivakumar @INCIndia… pic.twitter.com/jGrAutL9bk
— NewsFirst Kannada (@NewsFirstKan) June 7, 2023