ಮೆಟ್ರೋದಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಕುಸಿಯೋ ಸಾಧ್ಯತೆ
KSRTC ಬಸ್ಗಳನ್ನೇ ನೆಚ್ಚಿಕೊಂಡ ಮಹಿಳೆಯರು
ಬಸ್ಗಳಲ್ಲಿ ಫ್ರೀಯಾಗಿ ಮಹಿಳೆಯರು ಎಲ್ಲೆಲ್ಲಿಗೆ ಹೋಗುತ್ತಿದ್ದಾರೆ ಗೊತ್ತಾ?
ಪರ್ಸ್ ತರಬೇಕು ಅನ್ನೋ ಟೆನ್ಶನ್ ಇಲ್ಲ. ಟಿಕೆಟ್ ತಗೋಬೇಕು ಅನ್ನೋ ಧಾವಂತ ಇಲ್ಲ. ಚಿಲ್ರೆ ಇಲ್ಲಪ್ಪಾ ಅನ್ನೋ ಟೆನ್ಶನ್ ಅಂತೂ ಇಲ್ವೇ ಇಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಜಾರಿಯಿಂದ ‘ಶಕ್ತಿ’ವಂತರಾಗಿರೋ ಮಹಿಳೆಯರು ನಿನ್ನೆ ಬೆಳಗ್ಗೆಯಿಂದಾನೇ ಎಷ್ಟು ಉತ್ಸಾಹದಿಂದ ಉಚಿತ ಪ್ರಯಾಣ ಆರಂಭಿಸಿದರು.
2ನೇ ದಿನವಾದ ಇವತ್ತು ಮಹಿಳೆಯರು ಮುಗಿಬಿದ್ದು ಬಸ್ ಸ್ಟಾಪ್ಗಳ ಕಡೆ ಮುಖ ಮಾಡಿದ್ರು. ಅದ್ರಲ್ಲೂ ನಿನ್ನೆ ಸೋಮವಾರ ಬೇರೆ. ಕೆಲಸಕ್ಕೆ ಹೋಗೋರು, ಸ್ಟೂಡೆಂಟ್ಸ್ ಬೆಳ್‌ಬೆಳ್‌ಗೆ ಬಿಎಂಟಿಸಿ ಬಸ್ ಹತ್ತಿದ್ರು. ಇಟ್ರೆಸ್ಟಿಂಗ್ ವಿಚಾರ ಏನು ಗೊತ್ತಾ. ಫ್ರೀ ಜರ್ನಿ ಅನೌನ್ಸ್ ಆದ್ಮೇಲೆ ಬಸ್ಗಳಲ್ಲೇ ಜರ್ನಿ ಮಾಡೋಕೆ ಮಹಿಳೆಯರು ಮುಂದಾಗಿದ್ದು, ಸದಾ ಗಿಜುಗುಡ್ತಿದ್ದ ರೆಲ್ವೇ ನಿಲ್ದಾಣದಲ್ಲಿ ಎಂದಿಗಿಂತ ಮಹಿಳೆಯರ ಸಂಖ್ಯೆ ಕಡೆಮೆಯಾಗಿತ್ತು. ಲಗೇಜ್ ತಗೊಂಡು ಟ್ರೈನ್ ಹಿಡಿಯುತ್ತಿದ್ದ ಮಹಿಳೆಯರು KSRTC ಬಸ್ ಸ್ಟ್ಯಾಂಡ್ ಅಲ್ಲಿ ಜಮಾಯಿಸಿದ್ದರು.
ಬಸ್‌ನಲ್ಲಿ ಟಿಕೆಟ್ಗೆ ರೊಕ್ಕ ತಗೊಳಲಿಲ್ಲ. ಆಧಾರ್ ಕಾರ್ಡ್ ತೋರಿಸು ಎಂದು ಹೇಳಿದರು. ಅದರಂತೆ ಆಧಾರ್ ಕಾರ್ಡ್ ತೋರಿಸಿದ್ದಕ್ಕೆ ಟಿಕೆಟ್ಗೆ ಹಣ ತಗೊಂಡಿಲ್ಲ.
ವಸಂತಮ್ಮ, ಮಹಿಳಾ ಪ್ರಯಾಣಿಕರು
ಮೊದಲೆಲ್ಲಾ ಕುಂದಾಪುರ, ಯಾದಗಿರಿ ಹೀಗೆ ಸಿಕ್ಕಾಪಟ್ಟೆ ದೂರ ಇರುವ ಊರುಗಳಿಗೆ ಬಸ್‌ನಲ್ಲಿ ಹೋದ್ರೆ ಸುಮ್ನೆ ಜಾಸ್ತಿ ದುಡ್ಡು ಖರ್ಚು ಅಂತ ರೈಲಿನ ಮೇಲೆ ಡಿಪೆಂಡ್ ಆಗಿದ್ರು. ಆದ್ರೀಗ ಹೆಂಗೂ ಉಚಿತ ಇರಬೇಕಾದರೆ ರೈಲಿಗೆ ಹೋಗಿ ಆ ದುಡ್ಡು ಯಾಕ್ ವೇಸ್ಟ್ ಮಾಡೋದು ಅಂತ ಬಹುಪಾಲು ಮಂದಿ KSRTC ಬಸ್ ಸ್ಟ್ಯಾಂಡ್ ಕಡೆಯೇ ಮುಖ ಮಾಡ್ತಿದ್ದಾರೆ.
ಇನ್ನು ಮೊನ್ನೆ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಎಷ್ಟು ಮಂದಿ ಮಹಿಳೆಯರು ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಹತ್ತಿದ್ರು ಅನ್ನೋ ಮಾಹಿತಿ ಲಭ್ಯವಾಗಿದೆ.
ಮೊನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ಒಟ್ಟು 2 ಲಕ್ಷದ 1 ಸಾವಿರದ 215 ಮಂದಿ ಮಹಿಳಾ ಪ್ರಯಾಣಿಕರು ಬಿಎಂಟಿಸಿ ಬಸ್‌ನಲ್ಲಿ ತಮ್ಮ ದಾಖಲೆ ತೋರಿಸಿ ಶಕ್ತಿ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. ಇದಕ್ಕೆ ಬಿಎಂಟಿಸಿಗೆ ತಗುಲಿರೋ ವೆಚ್ಚ 26 ಲಕ್ಷದ 19 ಸಾವಿರದ 604 ರೂಪಾಯಿ.
ಮಹಿಳೆಯರಿಗೆ ಉಚಿತ ಪ್ರಯಾಣ ಖಚಿತ ಆಗಿದ್ದೇ ತಡ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಅಂತ ಬಸ್ ಗಳಲ್ಲಿಯೇ ಟೆಂಪಲ್ ರನ್ ಮಾಡೋಕೆ ಶುರು ಮಾಡಿ ಕೊಂಡಿದ್ದಾರೆ. ಪರಿಣಾಮ ಟ್ರೈನ್‌ನಲ್ಲಿ ಹೋಗೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮತ್ತೊಂದ್ಕಡೆ ನಮ್ಮ ಮೆಟ್ರೋದಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಕುಸಿಯೋ ಸಾಧ್ಯತೆ ಇದೆ ಅನ್ನೋ ಮಾತು ಕೇಳಿಬರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ