200 ಯೂನಿಟ್ ಉಚಿತ ವಿದ್ಯುತ್ನ ನೀಡುವುದು ಹೇಗೆ?
ಯಾರಿಗೆಲ್ಲಾ ಗ್ಯಾರಂಟಿ ಉಚಿತ ವಿದ್ಯುತ್ ನೀಡಬೇಕು?
200 ಯೂನಿಟ್ ದಾಟಿದರೆ ಯಾವ ರೀತಿ ಬಿಲ್ ಸಂಗ್ರಹಿಸಬೇಕು
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ. ಇದೀಗ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಬಗ್ಗೆ ಬಿಸಿಬಿಸಿ ಚರ್ಚೆ ಆಗ್ತಿದೆ. ತಾವು ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಯೇ ಸಿದ್ಧ ಎಂದು ಹೇಳ್ತಿದೆ. ಇತ್ತ ವಿರೋಧ ಪಕ್ಷಗಳು ಕಾಂಗ್ರೆಸ್ ಆಶ್ವಾಸನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಜಾರಿ ಮಾಡಲೇಬೇಕು ಎಂದು ಪಟ್ಟು ಹಿಡಿದಿವೆ.
ಇದರ ಮಧ್ಯೆ ಕಾಂಗ್ರೆಸ್ 200 ಯೂನಿಟ್ ವಿದ್ಯುತ್ ಫ್ರೀ ಗ್ಯಾರಂಟಿಯನ್ನು ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ತಿದೆ. ತೆರೆಮರೆಯಲ್ಲೇ ಸಿದ್ಧತೆಯನ್ನ ನಡೆಸಿದ್ದು, ಈಗಾಗಲೇ ಎಸ್ಕಾಂ ಅಧಿಕಾರಿಗಳಿಂದ ಮಾಹಿತಿಯನ್ನು ಕೆಲ ಹಾಕಿದೆ. ಉನ್ನತ ಅಧಿಕಾರಿಗಳ ಜೊತೆ ಸಿಎಂ, ಡಿಸಿಎಂ ಅವರು ಚರ್ಚೆ ನಡೆಸಿದ್ದಾರೆ. ಉಚಿತ ವಿದ್ಯುತ್ ನೀಡುವುದು ಹೇಗೆ ಅನ್ನೋದ್ರ ಬಗ್ಗೆ ಮಾತುಕತೆ ನಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಏನೆಲ್ಲಾ ಸಿದ್ಧತೆ?
ಮಾರ್ಗಸೂಚಿಯಲ್ಲಿ ಏನಿದೆ?
ವಿದ್ಯುತ್ ದರಗಳನ್ನ ಸಂಗ್ರಹಿಸಲು ಸದ್ಯ 5 ಸ್ಲಾಬ್ಗಳಿವೆ. ನಗರ ಪ್ರದೇಶ, ಗ್ರಾಮೀಣ ಪ್ರದೇಶಕ್ಕೆ ಬೇರೆ ರೀತಿ ದರಗಳನ್ನು ವಿಧಿಸಲಾಗುತ್ತಿದೆ. ಇದರನ್ವಯ ಒಬ್ಬ ವ್ಯಕ್ತಿಯ ಹೆಸರಲ್ಲಿ ಒಂದೇ ಮೀಟರ್ ಇರಬೇಕು. ಒಂದೇ ಕಟ್ಟಡದಲ್ಲಿರುವ ಎಲ್ಲಾ ಮೀಟರ್ ಒಬ್ಬರ ಹೆಸರು ಇದ್ದರೆ, ಅಷ್ಟರಲ್ಲಿ ಒಂದು ಮೀಟರ್ಗೆ ಮಾತ್ರ ಉಚಿತ ವಿದ್ಯುತ್ಗೆ ನೀಡಲು ತೀರ್ಮಾನಿಸಿದೆ ಎನ್ನಲಾಗಿದೆ.
ಮುಂದಿನ 2 ತಿಂಗಳಲ್ಲಿ ವಿದ್ಯುತ್ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗಲಿದೆ. ವಾಣಿಜ್ಯ ಬಳಕೆಯ ವಿದ್ಯುತ್ ದರಗಳಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಗೃಹೋಪಯೋಗಿ ವಿದ್ಯುತ್ನ ಹಿತ, ಮಿತವಾಗಿ ಬಳಸಲು ಜಾಗೃತಿ ಮೂಡಿಸಲು ಸರ್ಕಾರ ನಿರ್ಧರಿಸಿದೆ. ಸೋಲಾರ್ ಪವರ್ ಪ್ಲಾಂಟ್ ಮೂಲಗಳಿಂದ ವಿದ್ಯುತ್ನ ಬಳಕೆ ಆಗಲಿದೆ. ಸಾಧ್ಯವಾದ್ರೆ ಗೃಹೋಪಯೋಗಕ್ಕೂ ಇದನ್ನ ವಿಸ್ತರಿಸುವುದಕ್ಕೆ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ