newsfirstkannada.com

ಫ್ರೀ ಕರೆಂಟ್​​ ಸ್ಕೀಮ್​​ಗೆ ಆರಂಭದಲ್ಲೇ ವಿಘ್ನ; ಅರ್ಜಿ ಸಲ್ಲಿಸಲಾಗದೆ ಜನ ಸುಸ್ತೋ ಸುಸ್ತು; ಕಾರಣವೇನು?

Share :

19-06-2023

  ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಪ್ಲಿಕೇಶನ್ ಸಲ್ಲಿಕೆ

  ಎಲ್ಲಾ ವಿದ್ಯುತ್‌ ಕಚೇರಿಗಳು, ಆನ್‌ಲೈನ್ ಅವಕಾಶ

  ಗ್ರಾಮ ಒನ್, ಕರ್ನಾಟಕ ಒನ್‌ಗೆ ತೆರಳಿ ಅರ್ಜಿ ಸಲ್ಲಿಸಿ

ಬೆಂಗಳೂರು: ಗೃಹಜ್ಯೋತಿ 200 ಯೂನಿಟ್‌ವರೆಗೆ ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡ್ತಿರೋ ಯೋಜನೆ. ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆ. ಇದೀಗ ಎಲ್ಲರ ಮನೆ ಬೆಳಗುವ ಗೃಹಜ್ಯೋತಿಗೆ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದ್ರೆ, ಪ್ರಾರಂಭದಲ್ಲೇ ಉಚಿತ ವಿದ್ಯುತ್ ಭಾಗ್ಯಕ್ಕೆ ವಿಘ್ನ ಎದುರಾಗಿದೆ. ಅರ್ಜಿಗಳ ಹಾವಳಿಗೆ ಸರ್ವರ್‌ಗಳೇ ಪರದಾಡಿವೆ.

ಪಂಚ ಗ್ಯಾರಂಟಿಗಳ ಜಾರಿಗೊಳಿಸಲು ಸಿದ್ದರಾಮಯ್ಯ ಸರ್ಕಾರ ಹರಸಾಹಸ ಪಡ್ತಿದೆ. ಶಕ್ತಿಯನ್ನ ಈಗಾಗಲೇ ಜಾರಿಗೊಳಿಸಿರೋ ಸರ್ಕಾರ ಇದೀಗ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಜಾರಿಗೆ ಸರ್ಕಸ್‌ ನಡೆಸ್ತಿದೆ. ಆದ್ರೆ, ರಾಜ್ಯದ ಎಲ್ಲರ ಮನೆ ಬೆಳಗುವ ಜ್ಯೋತಿಗೆ ಬತ್ತಿ ಹೊಸೆಯುತ್ತಿದ್ದ ಕೈಗೆ ಸರ್ವರ್ ಎಂಬ ದೋಷ ಎದುರಾಗಿದೆ.

‘ಗೃಹಜ್ಯೋತಿ’ ಅರ್ಜಿ ಸಲ್ಲಿಕೆ ಆರಂಭ.. ಸರ್ವರ್‌ ಡೌನ್
ಆರಂಭದಲ್ಲೇ ಅಪ್ಲಿಕೇಶನ್‌ಗೆ ವಿಘ್ನ.. ಜನ ಫುಲ್ ಸುಸ್ತು

ಇನ್ನು, ಗೃಹಜ್ಯೋತಿ ಗ್ಯಾರಂಟಿ ಜಾರಿಗೆ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅರ್ಜಿ ಸಲ್ಲಿಸೋ ಪ್ರಕ್ರಿಯೆಗೂ ಸರ್ಕಾರ ಚಾಲನೆ ನೀಡಿತ್ತು. ಸೇವಾ ಸಿಂಧು ಪೋರ್ಟಲ್ ಮೂಲಕ ಮೊಬೈಲ್, ಕಂಪ್ಯೂಟರ್​ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿತ್ತು. ಆದ್ರೆ, ‘ಗೃಹಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಆರಂಭವಾಗ್ತಿದ್ದಂತೆ ವಿಘ್ನ ಎದುರಾಗಿತ್ತು.

ರಾಜ್ಯದ ಬಹುತೇಕ ಕೇಂದ್ರಗಳಲ್ಲಿ ಅಪ್ಲಿಕೇಶನ್ ಸಲ್ಲಿಸುವ ಎಲ್ಲಾ ಸರ್ವರ್‌ಗಳು ಡೌನ್‌ ಆಗಿಬಿಟ್ಟಿದ್ವು. ಬೆಂಗಳೂರಿನಲ್ಲಿ ಗೃಹಜ್ಯೋತಿ ಸೇವಾ ಸಿಂಧು ಆ್ಯಪ್​, ಬೆಂಗಳೂರು ಒನ್, ಬೆಸ್ಕಾಂ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆಯ ವೆಬ್‌ಸೈಟ್‌ಗಳ ಸರ್ವರ್ ಡೌನ್ ಆಗಿಬಿಟ್ಟಿತ್ತು. ಇದ್ರಿಂದ ಅರ್ಜಿ ಸಲ್ಲಿಸಲು ಆಗದೇ ಜನರು ಕಾದು ಕಾದು ಸುಸ್ತಾದ ಪ್ರಸಂಗವೂ ನಡೆಯಿತು.

ಮಧ್ಯಾಹ್ನದ ಬಳಿಕ ಸರ್ವರ್‌ ಸಮಸ್ಯೆ ನಿವಾರಣೆ

ಬೆಳಗ್ಗೆ ಸ್ಥಗಿತಗೊಂಡಿದ್ದ ವೆಬ್‌ಸೈಟ್‌ಗಳನ್ನ ಮಧ್ಯಾಹ್ನದ ವೇಳೆಗೆ ಅಧಿಕಾರಿಗಳು ಸರಿಪಡಿಸಿದ್ರು. ಸರ್ವರ್‌ನಲ್ಲಿ ಎದುರಾಗಿದ್ದ ಸಮಸ್ಯೆಯನ್ನ ಪರಿಹರಿಸಿದ್ರು. ಬಳಿಕ ಸರ್ವರ್‌ ಸಮಸ್ಯೆ ಬಗೆಹರಿಯುತ್ತಿದ್ದಂತೆ ಮತ್ತೆ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಯ್ತು. ಜನರು ಕ್ಯೂನಲ್ಲಿ ನಿಂತು ಗೃಹಜ್ಯೋತಿ ಯೋಜನೆಗೆ ಸರಾಗವಾಗಿ ಅರ್ಜಿ ಸಲ್ಲಿಸಿ ಮನೆಗೆ ತೆರಳಿದ್ರು.

ಧಾರವಾಡದಲ್ಲಿ ಅರ್ಜಿ ಸಲ್ಲಿಕೆಗೆ ನೀರಸ ಪ್ರತಿಕ್ರಿಯೆ!

ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಧಾರವಾಡದ ಕಲಾಭವನದ ಆವರಣದಲ್ಲಿರುವ ಕರ್ನಾಟಕ ಒನ್ ಸೇರಿದಂತೆ ಹೆಸ್ಕಾಂ ಕಚೇರಿಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರವಾದ್ರೂ ಕಚೇರಿಗೆ ಬಂದಿದ್ದ ಸಿಬ್ಬಂದಿ ಜನರಿಗಾಗಿ ಕಾದು ಕೂತಿದ್ರು. ಆದ್ರೆ, ಉಚಿತ ವಿದ್ಯುತ್ ಅಂದ್ರೂ ಅರ್ಜಿ ಸಲ್ಲಿಸಲು ಜನರು ಬಾರದೇ ಕಚೇರಿಗಳು ಖಾಲಿ ಖಾಲಿ ಹೊಡೆಯುತ್ತಿದ್ದವು. ಮತ್ತೊಂದೆಡೆ ಧಾರವಾಡ ನಗರದ ವಿಜಯ ಟಾಕೀಸ್ ಪಕ್ಕದಲ್ಲಿರೋ ಹೆಸ್ಕಾಂ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿತ್ತು. ಲಾಗಿನ್ ಆದ್ರೂ ಡಾಟಾ ಎಂಟ್ರಿಗೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು.

ತುಮಕೂರಿನಲ್ಲೂ ಕಾಡಿದ ಸರ್ವರ್‌ಡೌನ್ ಸಮಸ್ಯೆ!

ಇನ್ನೂ ತುಮಕೂರಿನಲ್ಲೂ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿತ್ತು. ನೋಂದಣಿ ಪ್ರಕ್ರಿಯೆ ಆರಂಭವಾಗ್ತಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಸರ್ವರ್‌ ಸಮಸ್ಯೆಯಿಂದ ಜನರು ಕಾದು ಕಾದು ಸುಸ್ತಾಗಿ ಹೋಗಿದ್ರು. ಅರ್ಜಿ ಸಲ್ಲಿಕೆಗೆ ಸೂಕ್ತ ವ್ಯವಸ್ಥೆ ಮಾಡದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ರು.

‘ಶೀಘ್ರದಲ್ಲೇ ಗೃಹಲಕ್ಷ್ಮೀ ಅರ್ಜಿ ಪ್ರಕ್ರಿಯೆ ಆರಂಭ

ಗೃಹಜ್ಯೋತಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ರೆ, ಇತ್ತ ಮಹಿಳಾ ಮಣಿಗಳು ಗೃಹಲಕ್ಷ್ಮೀಗೆ ಯಾವಾಗಿನಿಂದ ಅರ್ಜಿ ಸಲ್ಲಿಸೋದು ಅಂತಾ ಕಾದು ಕೂತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಆದಷ್ಟು ಶೀಘ್ರವೇ ಗೃಹಲಕ್ಷ್ಮೀ ಅಪ್ಲಿಕೇಷನ್ ಲಾಂಚ್ ಮಾಡ್ತೇವೆ ಎಂದಿದ್ದಾರೆ. ಜೊತೆಗೆ ಗೃಹಲಕ್ಷ್ಮೀ ಯೋಜನೆ ಬಗ್ಗೆ ಕೆಲ ಮಹತ್ವದ ಮಾಹಿತಿಯನ್ನೂ ನೀಡಿದ್ದಾರೆ.

1.13 ಕೋಟಿ ಕುಟುಂಬಕ್ಕೆ ಉಪಯೋಗ

ಒಟ್ಟಾರೆ, ಹಂತ ಹಂತವಾಗಿ ಪಂಚ ಗ್ಯಾರಂಟಿಗಳ ಜಾರಿಗೆ ಸರ್ಕಾರ ಶತಪ್ರಯತ್ನ ನಡೆಸ್ತಿದೆ. ಆದ್ರೆ, ಸರ್ಕಾರಕ್ಕೆ ಒಂದೊಂದೇ ಸವಾಲುಗಳು ಎದುರಾಗುತ್ತಲೇ ಇವೆ. ಇದೀಗ ಈ ಎಲ್ಲಾ ಸವಾಲುಗಳನ್ನ ಮೆಟ್ಟಿನಿಂತು ಸರ್ಕಾರ ಅದ್ಯಾವಾಗ ಪಂಚ ಗ್ಯಾರಂಟಿಗಳನ್ನ ಜನರಿಗೆ ಪ್ರಾಪ್ತಿ ಮಾಡುತ್ತೋ? ಲೆಟ್ಸ್ ವೇಯ್ಟ್‌ ಅಂಡ್ ವಾಚ್‌..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರೀ ಕರೆಂಟ್​​ ಸ್ಕೀಮ್​​ಗೆ ಆರಂಭದಲ್ಲೇ ವಿಘ್ನ; ಅರ್ಜಿ ಸಲ್ಲಿಸಲಾಗದೆ ಜನ ಸುಸ್ತೋ ಸುಸ್ತು; ಕಾರಣವೇನು?

https://newsfirstlive.com/wp-content/uploads/2023/06/Current-Bill-2.jpg

Load More