Advertisment

ನೀರಜ್​ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ಉಚಿತ ವೀಸಾ! ಸ್ಟಾರ್ಟ್​ಅಪ್​ ಕಂಪನಿ ಸಿಇಒ ಕೊಟ್ಟ ಅಚ್ಚರಿಯ ಭರವಸೆ

author-image
AS Harshith
Updated On
ನೀರಜ್​ ಚೋಪ್ರಾ ಚಿನ್ನ ಗೆದ್ದರೆ ಎಲ್ಲರಿಗೂ ಉಚಿತ ವೀಸಾ! ಸ್ಟಾರ್ಟ್​ಅಪ್​ ಕಂಪನಿ ಸಿಇಒ ಕೊಟ್ಟ ಅಚ್ಚರಿಯ ಭರವಸೆ
Advertisment
  • ನೀರಜ್ ಚೋಪ್ರಾ ಮೇಲೆ ಎಲ್ಲರ ಗಮನ ಮತ್ತು ನಿರೀಕ್ಷೆ
  • ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದ್ರೆ ಎಲ್ಲರಿಗೆ ಉಚಿತ ವೀಸಾ
  • ಭಾರತೀಯ ಮೂಲದ ಸ್ಟಾರ್ಟ್​​ಅಪ್​​ವೊಂದರ ಸಿಇಒ ನೀಡಿದ ಅಚ್ಚರಿಯ ಹೇಳಿಕೆ

2024ನೇ ಒಲಿಂಪಿಕ್ಸ್​ನಲ್ಲಿ ಭಾರತ ಚಿನ್ನ ಕಸಿಯುವ ಕನಸು ಹಾಗೆಯೇ ಉಳಿದಿದೆ. ಸದ್ಯ ನೀರಜ್ ಚೋಪ್ರಾ ಮೇಲೆ ಎಲ್ಲರ ಗಮನವಿದೆ ಹಾಗೂ ನಿರೀಕ್ಷೆಯಿದೆ. ನೀರಜ್ ಚೋಪ್ರಾ ಒಂದು ವೇಳೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದರೆ ಎಲ್ಲರಿಗೂ ಉಚಿತ ವೀಸಾ ನೀಡುವುದಾಗಿ ಅಮೆರಿಕಾದಲ್ಲಿರುವ ಭಾರತೀಯ ಮೂಲಕ ಸ್ಟಾರ್ಟ್​​ಅಪ್​​ವೊಂದರ ಸಿಇಒ ಹೇಳಿದ್ದಾರೆ.

Advertisment

ಅಟ್ಲಿಸ್​​ ಸಂಸ್ಥಾಪಕರಾದ ಮೋಹಕ್​ ನೆಕ್ತಾರವರು ಅಚ್ಚರಿಯ ಮಾತುಗಳು ಈಗ ವೈರಲ್​ ಆಗಿದೆ. ಇವರು ವೀಸಾ ಸ್ಟಾರ್​ಅಪ್​ವೊಂದನ್ನು ನಡೆಸುತ್ತಿದ್ದು, ನೀರಜ್​ ಚೋಪ್ರಾ ಭಾರತಕ್ಕೆ ಚಿನ್ನ ತಂದು ಕೊಟ್ಟರೆ ಅಟ್ಲಿಸ್​​ ತನ್ನ ಎಲ್ಲಾ ಬಳಕೆದಾರರಿಗೆ ಒಂದು ಇಡೀ ದಿನದ ವೀಸಾವನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.

publive-image

ಇದನ್ನೂ ಓದಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರೋ ನದಿಗಳು.. 40 ಗ್ರಾಮಗಳ ಜನರ ಬದುಕು ಅತಂತ್ರ

ಲಿಂಕ್ಡ್​​ಇನ್​ನಲ್ಲಿ ಪೋಸ್ಟ್​ ಮಾಡಿದ ಅವರು, ‘ನೀರಜ್​ ಚಿನ್ನ ಗೆದ್ದರೆ ವೈಯಕ್ತಿಕವಾಗಿ ಎಲ್ಲರಿಗೂ ಉಚಿತ ವೀಸಾ ಕಳುಹಿಸುತ್ತೇನೆ, ಹೋಗೋಣ’ ಎಂದು ಹೇಳಿದ್ದಾರೆ. ಜೊತೆಗೆ ಎಲ್ಲ ದೇಶಗಳಿಗೂ ಉಚಿತ ವೀಸಾ ನೀಡಲಾಗುವುದು. ಅರ್ಜಿದಾರರಿಗೆ ಯಾವುದೇ ವೆಚ್ಚವನ್ನು ಭರಿಸುವುದಿಲ್ಲ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ನಟಿ ಐಶ್ವರ್ಯಾ ರೈ ಅನ್ನು ಅಮಿತಾಬ್​ ಸೊಸೆ ಅಂದುಕೊಂಡೇ ಇಲ್ಲ.. ಜಯಾ ಬಚ್ಚನ್​ ಶಾಕಿಂಗ್​ ಹೇಳಿಕೆ!

ಆಗಸ್ಟ್​ 8 ರಂದು ನೀರಜ್​ ತಮ್ಮ ತಾಖತ್ತನ್ನು ಪ್ಯಾರೀಸ್​​ನಲ್ಲಿ ತೋರಿಸಲಿದ್ದಾರೆ. ಸದ್ಯ ಭಾರತ ಇವರ ಸ್ಪರ್ಧೆಯನ್ನು ಕಾಣುವ ತವಕದಲ್ಲಿದೆ.

publive-image

ಭಾರತಕ್ಕೆ ಮೂರು ಕಂಚಿನ ಪದಕಗಳು ಮಾತ್ರ ಬಂದಿವೆ. ಅದರಲ್ಲಿ ಪುರುಷರ 50 ಮೀ ರೈಫಲ್​​ನಲ್ಲಿ ಎಸ್​​ ಕುಸಲೆ ಕಂಚು ಪದಕ ಗೆದ್ದಿದ್ದಾರೆ. 10ಮೀ ಏರ್​ ಪಿಸ್ತೂಲ್​ನಲ್ಲಿ ಮತ್ತು ಮಹಿಳೆಯರ 10 ಮೀಟರ್​ ಏರ್​ ಪಿಸ್ತೂಲ್​​ನಲ್ಲಿ ಮನು ಭಾಕರ್​ ಕಂಚು ಗೆದ್ದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment