newsfirstkannada.com

VIDEO: 68ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ ಫೇಮಸ್ ರೀಲ್ಸ್ ಸ್ಟಾರ್; ಕೊನೆ ಸೆಲ್ಫಿಗೆ ಅಭಿಮಾನಿಗಳ ಕಂಬನಿ

Share :

31-07-2023

    68ನೇ ಬಹುಮಹಡಿ ಕಟ್ಟಡದ ಮೇಲೆ ರೀಲ್ಸ್ ಮಾಡುತ್ತಿದ್ದಾಗ ದುರಂತ

    ಇವನ ಸಾಹಸಗಳನ್ನ ನೋಡ್ತಿದ್ರೆ ಎದೆ ಝಲ್ ಅನ್ನೋದು ಗ್ಯಾರಂಟಿ

    ಗಗನಚುಂಬಿ ಕಟ್ಟಡಗಳ ಮೇಲೆ ಸೆಲ್ಫಿ ರೀಲ್ಸ್ ಮಾಡ್ತಿದ್ದ ಸಾಹಸಿಗ

ಅಬ್ಬಾ.. ಇವನ ಸಾಹಸಗಳನ್ನ ನೋಡ್ತಿದ್ರೆ ಎದೆ ಝಲ್ ಅನ್ನುತ್ತೆ. ಇವನ ಧೈರ್ಯಕ್ಕೆ ಮೆಚ್ಚಬೇಕೋ, ಇಂಥಾ ಹುಚ್ಚ ಮತ್ತೊಬ್ಬನಿಲ್ಲ ಅನ್ನಬೇಕೋ ಗೊತ್ತಿಲ್ಲ. ಗಗನಚುಂಬಿ ಕಟ್ಟಡಗಳ ಮೇಲೆ ಸೆಲ್ಫಿ ರೀಲ್ಸ್ ಮಾಡ್ತಿದ್ದ ಜಗತ್ತಿನ ಫೇಮಸ್ ಸ್ಟಾರ್ ರೆಮಿ ಲುಸಿಡಿ ಇನ್ನಿಲ್ಲ. 30 ವರ್ಷದ ರೆಮಿ ಲುಸಿಡಿ ಸೆಲ್ಫಿ ರೀಲ್ಸ್ ಮಾಡುತ್ತಿದ್ದಾಗ 68ನೇ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ರೆಮಿ ಲುಸಿಡಿ ಕೊನೇ ಬಾರಿಗೆ ತೆಗೆದ ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಅಭಿಮಾನಿಗಳು ಈತನ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ.

ಇದನ್ನೂ ಓದಿ: ವಿಂಡೀಸ್​​​​ ವಿರುದ್ಧ ಸೋತ ಟೀಂ ಇಂಡಿಯಾಗೆ ಗುಡ್​ನ್ಯೂಸ್​​; ಸ್ಟಾರ್​​ ಪ್ಲೇಯರ್​ ಕಮ್​ಬ್ಯಾಕ್​ ಸಾಧ್ಯತೆ!

ಫ್ರೆಂಚ್ ಮೂಲದ ರೆಮಿ ಲುಸಿಡಿಗೆ ಸೆಲ್ಫಿ ರೀಲ್ಸ್ ಮಾಡೋದೆ ಹವ್ಯಾಸವಾಗಿತ್ತು. ಜಗತ್ತಿನ ಅತ್ಯಂತ ಎತ್ತರವಾದ ಕಟ್ಟಡಗಳ ಮೇಲೆ ನಿಂತು ಈತ ಮಾಡಿರೋ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗಗನಚುಂಬಿ ಕಟ್ಟಡದ ಮೇಲೆ ಇವನು ಮಾಡುತ್ತಿದ್ದ ಸ್ಟಂಟ್‌ಗಳ ವಿಡಿಯೋ ನೋಡಿದ್ರೆ ಎಲ್ರೂ ಸ್ಟನ್ ಆಗಿಬಿಡ್ತಾರೆ. ಅಷ್ಟು ಭಯಾನಕವಾದ ಸೆಲ್ಫಿ ರೀಲ್ಸ್‌ಗಳಿಗೆ ರೆಮಿ ಲುಸಿಡಿ ಫೇಮಸ್‌ ಆಗಿದ್ದ. ಇದೇ ಸೆಲ್ಫಿ ರೀಲ್ಸ್ ಇವತ್ತು ರೆಮಿ ಲುಸಿಡಿ ಸಾವಿಗೆ ಕಾರಣವಾಗಿದೆ. ಹಾಕಾಂಗ್‌ನ 68ನೇ ಜನವಸತಿ ಕಟ್ಟಡದ ಮೇಲೆ ರೀಲ್ಸ್ ಮಾಡುತ್ತಿದ್ದಾಗ ಈತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ರೆಮಿ ಲುಸಿಡಿ ಮಾಡಿದ ಕೊನೆ ಬಾರಿಯ ವಿಡಿಯೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದ್ರೆ ರೆಮಿ ಲುಸಿಡಿ ಕೊನೇ ಬಾರಿ ತೆಗೆದ ಸೆಲ್ಫಿ ಫೋಟೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಆಗಿದೆ.

30 ವರ್ಷದ ರೆಮಿ ಲುಸಿಡಿ ಮಾಡಿದ ಸಾಹಸ ದೃಶ್ಯಗಳು ಈಗಲೂ ಲಕ್ಷಾಂತರ ಅಭಿಮಾನಿಗಳ ಹಾರ್ಟ್ ಫೇವರಿಟ್ ಆಗಿದೆ. ಇವನ ಅತ್ಯುತ್ಸಾಹದ ಸೆಲ್ಫಿ ಹುಚ್ಚೇ ಈತನ ಸಾವಿಗೆ ಕಾರಣವಾಗಿದೆ. ಹಾಂಗ್‌ಕಾಂಗ್ ವರದಿಗಳ ಪ್ರಕಾರ ರೆಮಿ ಲುಸಿಡಿ 40ನೇ ಮಹಡಿಯಲ್ಲಿ ತನ್ನ ಸ್ನೇಹಿತ ಮಾಡಲು ಹೋಗಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಅವನನ್ನು ತಡೆದು ನಿಲ್ಲಿಸಿದ್ದಾನೆ. ಇದಾದ ಮೇಲೂ 68ನೇ ಮಹಡಿ ಮೇಲೆ ಹತ್ತಿದ ಮೇಲೆ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: 68ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ ಫೇಮಸ್ ರೀಲ್ಸ್ ಸ್ಟಾರ್; ಕೊನೆ ಸೆಲ್ಫಿಗೆ ಅಭಿಮಾನಿಗಳ ಕಂಬನಿ

https://newsfirstlive.com/wp-content/uploads/2023/07/remi-lucidi.jpg

Load More