newsfirstkannada.com

ರೋಹಿತ್ ಬದುಕು ಬದಲಿಸಿದ್ದು ಅದೊಂದು ಜಾಹೀರಾತು.. ಮ್ಯಾಗಿಮ್ಯಾನ್ ​​ಹಿಟ್​ಮ್ಯಾನ್ ಆಗಿದ್ದೇ ರೋಚಕ..!

Share :

Published June 19, 2024 at 10:23am

    ಇದು ಡಬಲ್​ ಸೆಂಚುರಿ ಸರದಾರನ ಅನ್​ಟೋಲ್ಡ್​​​​ ಸ್ಟೋರಿ

    ಒಂದು ಆ್ಯಡ್​​​​, ಗೆಳೆಯನ ಸಲಹೆ, ಹಣೆಬರಹವೇ ಬದಲು

ಒಂದು ಮಾತಿನಿಂದ ಅದೆಷ್ಟೋ ಕ್ರಿಕೆಟಿಗರ ಲೈಫ್​​ ಬದಲಾದ ಉದಾಹರಣೆಗಳಿವೆ. ಅಂತೆಯೇ ಡಬಲ್​​ ಸೆಂಚುರಿಮ್ಯಾನ್​ ರೋಹಿತ್​ ಶರ್ಮಾ ಕರಿಯರ್​​​​​​​ ಚೇಂಜ್ ಆಗಿದ್ದು ಒಂದೇ ಜಾಹೀರಾತಿನಿಂದ. ಆ ಒಂದು ಆ್ಯಡ್​ನಲ್ಲಿ​​ ಸ್ಥಾನಕ್ಕಾಗಿ ಪರದಾಡ್ತಿದ್ದ ರೋಹಿತ್​​ಗೆ ಹೊಸ ದಾರಿ ತೋರಿಸ್ತು.

ಡಬಲ್​ ಸೆಂಚುರಿ ಸರದಾರನ ಅನ್​​​ಟೋಲ್ಡ್​​​ ಸ್ಟೋರಿ
ರೋಹಿತ್​​ ಶರ್ಮಾ.. ಭಾರತೀಯ ಕ್ರಿಕೆಟ್​ನ ರತ್ನ. ಈ ರೋಹಿತ್​ ಗಳಿಸಿದ ಖ್ಯಾತಿ, ಹೊಡೆದ ರನ್​​, ಪುಡಿಗಟ್ಟಿದ ದಾಖಲೆ, ದಿಗ್ಗಜ ಆಟಗಾರನಾಗಿ ಬೆಳೆದ ಬಗೆ ನಿಜಕ್ಕೂ UNBELIEVABLE​​​​​​​. ಇಂತಹ ಸೂಪರ್​​ ಸ್ಟಾರ್​ ಕರಿಯರ್​ನಲ್ಲಿ​​​ ಎರಡು ಭಾಗವಿದೆ. ಒಂದು ಹಂತದಲ್ಲಿ ಬರೀ ಸ್ಟ್ರಗಲ್ಸ್ ತುಂಬಿಕೊಂಡಿದ್ರೆ ಇನ್ನೊಂದು ಹಂತ ಯಶಸ್ಸಿನ ಯಶೋಗಾಥೆಯಿಂದ ತುಂಬಿಕೊಂಡಿದೆ.

ಇದನ್ನೂ ಓದಿ:ಶವ ಬೀಸಾಕಿದ್ದಾಗಿಂದ ಒಂದೇ ಬಟ್ಟೆಯಲ್ಲೇ ಮೂರು ದಿನ ಓಟಾಟ.. ಎಣ್ಣೆ ಪಾರ್ಟಿ..!

2007 TO 2011 ಅಭದ್ರತೆ.. ಸ್ಥಾನಕ್ಕಾಗಿ ಪರದಾ
ರೋಹಿತ್​​ ಇಂದು ವಿಶ್ವಕ್ರಿಕೆಟ್​ನ ಸ್ಟಾರ್ ಕ್ರಿಕೆಟರ್​​ ಅನ್ನಿಸಿಕೊಂಡಿರಬಹುದು. ಅವರ ಆರಂಭಿಕ ಜರ್ನಿ ಬರೀ ಕಲ್ಲು ಮುಳ್ಳಿನಿಂದಲೇ ಕೂಡಿತ್ತು. 2007 ರಲ್ಲಿ ತಂಡಕ್ಕೆ ಡೆಬ್ಯು ಮಾಡಿದ್ರೂ ಹೆಚ್ಚು ಅವಕಾಶ ಸಿಗ್ಲಿಲ್ಲ. ಖಾಯಂ ಸ್ಲಾಟ್​ಗಾಗಿ ಪರದಾಡಿದ್ರು. ಆಗೊಂದು ಈಗೊಂದು ಅವಕಾಶ. ಸಿಕ್ಕ ಚಾನ್ಸ್​​​ ಅಲ್ಲಿ ನ್ಯಾಯ ಒದಗಿಸಿದ್ರೂ, 2011ರ ಏಕದಿನ ವಿಶ್ವಕಪ್​ನಲ್ಲಿ ಅವಕಾಶ ವಂಚಿತರಾದ್ರು. ಇದರಿಂದ ಹಿಟ್​ಮ್ಯಾನ್ ಕರಿಯರ್​ ಡೋಲಾಮಾನವಾಗಿತ್ತು.

2013ರ ಬಳಿಕ ರೋಹಿತ್​​ ಮುಟ್ಟಿದ್ದೆಲ್ಲಾ ಚಿನ್ನ
2013ನೇ ಇಸವಿ, ರೋಹಿತ್​​ಗೆ ಹೊಸ ಪುನರ್ಜನ್ಮ ನೀಡ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಆರಂಭಿಕನಾಗಿ ಆರ್ಭಟಿಸಿದ್ರು. ಕ್ಯಾಪ್ಟನ್​​​ ಧೋನಿ ಮನಗೆದ್ರು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಸಾವಿರ​​ಗಟ್ಟಲೇ ರನ್​​​, ಲೆಕ್ಕವಿಲ್ಲದಷ್ಟು ದಾಖಲೆ, ವಿಶ್ವ ದಾಖಲೆಯ 3 ದ್ವಿಶತಕ, ಐದು ಬಾರಿ ಮುಂಬೈ ಇಂಡಿಯನ್ಸ್​ಗೆ ಐಪಿಎಲ್ ಟ್ರೋಫಿ, ಭಾರತ ತಂಡವನ್ನ ಮುನ್ನಡೆಸುವ ಸೌಭಾಗ್ಯ.! ಕಳೆದ 11 ವರ್ಷದಲ್ಲಿ ರೋಹಿತ್ ಮುಟ್ಟಿದ್ದೆಲ್ಲವೂ ಚಿನ್ನವಾಗಿದೆ.

ಇದನ್ನೂ ಓದಿ:ಸೂಪರ್ 8ರಲ್ಲಿ ಮೂವರು ಫಿಕ್ಸ್​.. ಭಾರತದ ಗೆಲುವಿಗೆ ಬೇಕೇಬೇಕು ಈ ಸ್ಪಿನ್ ಟ್ವಿನ್ಸ್ ಜೋಡಿ.. ರೋಹಿತ್ ಆಯ್ಕೆ ಏನು?

ರೋಹಿತ್​ ಕರಿಯರ್​ ಬದಲಿಸ್ತು ಆ ಒಂದು ಜಾಹೀರಾತು
2012 ರ ಸ್ಥಾನಕ್ಕಾಗಿ ಪರದಾಡಿದ್ದ ರೋಹಿತ್​​ ಲೆಕ್ಕವಿಲ್ಲದಷ್ಟು ಟೀಕೆ, ಅವಮಾನ ಎದುರಿಸಿದ್ರು. ಇಂತಹ ಹಿಟ್​ಮ್ಯಾನ್​ 2013ರ ಬಳಿಕ ಫಿನಿಕ್ಸ್​​​ನಂತೆ ಎದ್ದು ನಿಂತ್ರು. ಕಳೆದು ಹೋಗ್ತಿದ್ದ ಹಿಟ್​​ಮ್ಯಾನ್​ ವಿಶ್ವಮೆಚ್ಚಿದ ವಿಕ್ರಮನಾದ್ರು. ಈ ಪರಿರ್ತನೆಗೆ ಕಾರಣ ಆ ಒಂದು ಜಾಹೀರಾತು.

2011 ರ ವಿಶ್ವಕಪ್‌ಗೆ ರೋಹಿತ್ ಅವರನ್ನು ಆಯ್ಕೆ ಮಾಡದಿದ್ದಾಗ, ನಾನು ಅವನಿಗೆ ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡೋಣ ಎಂದು ಹೇಳುತ್ತಿದ್ದೆ. ಏಕೆಂದರೆ ಅವರು ಆ ಸಮಯದಲ್ಲಿ ಸ್ವಲ್ಪ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಟಿವಿಯಲ್ಲಿ ಒಂದು ಜಾಹೀರಾತು ದೃಶ್ಯ ಪ್ರಸಾರವಾಯಿತು. ರೋಹಿತ್ ಮತ್ತು ಯುವರಾಜ್ ನಿಂತುಕೊಂಡಿದ್ರು. ರೋಹಿತ್‌ನ ಹೊಟ್ಟೆಯ ಸುತ್ತಲು ಬಾಣದ ಗುರುತು ಹಾಕಲಾಗಿತ್ತು. ನಾನು ಅದನ್ನು ಎಂದಿಗೂ ಮರೆಯುವುದಿಲ್ಲ. ಇದನ್ನ ನೋಡಿದ ರೋಹಿತ್​​​​​ ಶರ್ಮಾ ಆ ಗ್ರಹಿಕೆ ಬದಲಿಸಬೇಕೆಂದು ಎಂದರು-ಅಭಿಷೇಕ್​​ ನಾಯರ್​​​​, ಮಾಜಿ ಕ್ರಿಕೆಟಿಗ

ಇದನ್ನೂ ಓದಿ:ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

ಮ್ಯಾಗಿಮ್ಯಾನ್ ಅಂದೋರಿಗೆ ತಕ್ಕ ಉತ್ತರ
ರೋಹಿತ್​​ರನ್ನ​ ಆರಂಭಿಕ ದಿನಗಳಲ್ಲಿ ಎರಡು ನಿಮಿಷಗಳ ಮ್ಯಾಗಿಮ್ಯಾನ್ ಅಂತೆಲ್ಲಾ ಟೀಕಿಸ್ತಿದ್ರು. ಇದನ್ನ ಗಂಭೀರವಾಗಿ ತೆಗೆದುಕೊಂಡ ಹಿಟ್​​ಮ್ಯಾನ್​​​, ಅಭಿಷೇಕ್​ ನಾಯರ್​​​ ಬಳಿ ಅವರ ಬಾಯಿಯನ್ನ ಮುಚ್ಚಿಸುತ್ತೇನೆ ಎಂದು ಮಾತುಕೊಟ್ಟಿದ್ರಂತೆ.

ಜನರು ಅವನ (ರೋಹಿತ್​​) ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳುತ್ತಿದ್ದರು. ಎರಡು ನಿಮಿಷಗಳ ಮ್ಯಾಗಿ-ಮ್ಯಾನ್ ಅಂತೆಲ್ಲಾ ಕರೆಯುತ್ತಿದ್ರು. ಅದು ಎಲ್ಲವನ್ನೂ ಬದಲಾಯಿಸಿತು. ರೋಹಿತ್​​​, ನನ್ನ ಬಳಿ ಬಂದು ‘ನೀವು ಏನು ಹೇಳುತ್ತೀರೋ ಅದನ್ನು ನಾನು ಮಾಡುತ್ತೇನೆ. ಐಪಿಎಲ್ ಮುಗಿದ ನಂತರ ಜನರು ಅವನು ಆ ರೋಹಿತ್ ಶರ್ಮಾ ಅಲ್ಲ ಎಂದು ಹೇಳಬೇಕು ಎಂದಿದ್ರು-ಅಭಿಷೇಕ್​​ ನಾಯರ್​​​​, ಮಾಜಿ ಕ್ರಿಕೆಟಿಗ

ಆ ಬಳಿಕ ಸಖತ್​ ಹಾರ್ಡ್​ವರ್ಕ್​ ಮಾಡಿದ ರೋಹಿತ್​ ಶರ್ಮಾ ಫಿಟ್​ನೆಸ್​ಗೆ ಹೆಚ್ಚಿನ ಮಹತ್ವ ನೀಡಿದ್ರು. ಬ್ಯಾಟಿಂಗ್​ ಟೆಕ್ನಿಕ್​ ಮೇಲೆ ವರ್ಕೌಟ್​ ಮಾಡಿದ್ರು. ಅಭ್ಯಾಸದ ಕಣದಲ್ಲಿ ಬೆವರುಹರಿಸಿದ ಪರಿಣಾಮ ಯಶಸ್ಸಿನ ರುಚಿ ನೋಡಿದ್ರು. ಆ ಬಳಿಕ ಹಿಟ್​ಮ್ಯಾನ್​ ರೋಹಿತ್​ ಹಿಂತಿರುಗಿ ನೋಡಿದ್ದೇ ಇಲ್ಲ.

ಇದನ್ನೂ ಓದಿ:ಜೈಲಿನಿಂದ ಹೊರ ಬರ್ತಿದ್ದಂತೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿ.. ಮತ್ತೆ ಕಂಬಿ ಹಿಂದೆ ಹೋದ ದರ್ಶನ್ ಆಪ್ತ..!

ಒಟ್ಟಿನಲ್ಲಿ ಒಂದು ಟೈಮ್​​ನಲ್ಲಿ ಹಿಟ್​ಮ್ಯಾನ್​​​ಗೆ ತಂಡದಲ್ಲಿ ಖಾಯಂ ಸ್ಥಾನ ಅನ್ನೋದೆ ಇರ್ಲಿಲ್ಲ. ಇದೀಗ ಅದೇ ರೋಹಿತ್​​​ ವಿಶ್ವದ ಸ್ಟಾರ್​ ಓಪನರ್​​. ಭಾರತ ತಂಡ ಚುಕ್ಕಾಣಿ ಹಿಡಿಯುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ತಾಳ್ಮೆ, ಪರಿಶ್ರಮವೊಂದಿದ್ರೆ ಏನು ಬೇಕಾದ್ರು ಸಾಧಿಸಬಹುದು ಅನ್ನೋದಕ್ಕೆ ಹಿಟ್​ಮ್ಯಾನ್ ಉತ್ತಮ ನಿದರ್ಶನ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್ ಬದುಕು ಬದಲಿಸಿದ್ದು ಅದೊಂದು ಜಾಹೀರಾತು.. ಮ್ಯಾಗಿಮ್ಯಾನ್ ​​ಹಿಟ್​ಮ್ಯಾನ್ ಆಗಿದ್ದೇ ರೋಚಕ..!

https://newsfirstlive.com/wp-content/uploads/2024/06/ROHIT_SHARMA_USA.jpg

Load More