ಕ್ರಿಕೆಟ್ ಮೈದಾನದಲ್ಲಿ ನಿರೀಕ್ಷೆಗೂ ಮೀರಿದ ಘಟನೆ
ವಿಡಿಯೋ ನೋಡಲು ತುಂಬಾನೇ ಭಯಾನಕ
ಕೈಕೊಟ್ಟ ದುರಾದೃಷ್ಟ; ಕ್ರೀಸ್ನಲ್ಲಿದ್ದ ಬ್ಯಾಟ್ಸ್ಮನ್ ಗಂಭೀರ
ಕ್ರಿಕೆಟ್ ಅನ್ನೋದು ಇವತ್ತಿನ ದಿನದಲ್ಲಿ ಯುವಕರಿಗೆ ದೊಡ್ಡ ಫ್ಯಾಷನ್ ಆಗಿದೆ. ಕ್ರಿಕೆಟ್ ಬದುಕಿನ ಭವಿಷ್ಯಕ್ಕಾಗಿ ಅದೆಷ್ಟೋ ಮಂದಿ ಕಾತುರದಿಂದ ತುಡಿಯುತ್ತಿದ್ದಾರೆ. ಅಮೆರಿಕ, ಸೌದಿ ಅರೆಬಿಯಾ, ಕೆನಡಾ ದೇಶದ ಕ್ರೀಡಾಪಟುಗಳು ಕ್ರಿಕೆಟ್ ಬಗ್ಗೆ ಕನಸು ಕಾಣುತ್ತಿವೆ. ಸ್ಪರ್ಧೆಗಳು ಬಿಗಿಯಾಗಿರುವಾಗ, ಕೆಲವೊಮ್ಮೆ ಮೈದಾನಗಳಲ್ಲಿ ನಿರೀಕ್ಷೆಗಳಿಗೂ ಮೀರಿದ ಸಂಗತಿಗಳು ಗತಿಸಿ ಹೋಗುತ್ತವೆ.
ಅದರಂತೆ ಸೋಶಿಯಲ್ ಮೀಡಿಯಾದಲ್ಲಿ ಭಯಾನಕ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ, ತಂಡವೊಂದರ ಇಬ್ಬರು ಆಟಗಾರರು ಬ್ಯಾಟ್ ಮಾಡುತ್ತಿರುತ್ತಾರೆ. ಎದುರಾಳಿ ತಂಡ ಬೌಲಿಂಗ್ನಲ್ಲಿ ಬ್ಯುಸಿಯಾಗಿತ್ತು. ಈ ಸಂದರ್ಭದಲ್ಲಿ ಎದುರಾಳಿ ತಂಡದ ಬೌಲರ್ ಎದುರಿಸಿದ್ದ ಬ್ಯಾಟರ್, ಬಾಲ್ಗೆ ಕನೆಕ್ಟ್ ಮಾಡಿ ರನ್ ಗಳಿಸುವ ಪ್ರಯತ್ನ ಮಾಡುತ್ತಾರೆ.
ದುರಾದೃಷ್ಟವಶಾತ್, ಬಾಲ್ ಫೀಲ್ಡರ್ ಕೈಗೆ ಸಿಕ್ಕಿದ್ದರಿಂದ ಕ್ರೀಸ್ನಲ್ಲಿದ್ದ ಬ್ಯಾಟರ್ ಓಡಲು ಹಿಂದೇಟು ಹಾಕಿ ಅಲ್ಲಿಯೇ ನಿಂತಿರುತ್ತಾರೆ. ಆದರೆ ನಾನ್ಸ್ಟ್ರೈಕ್ನಲ್ಲಿದ್ದ ಬ್ಯಾಟ್ಸ್ಮನ್ ಓಡಿ ಬಂದಿದ್ದಾರೆ. ಪರಿಣಾಮ ನಾನ್ಸ್ಟ್ರೈಕ್ನಲ್ಲಿದ್ದ ಬ್ಯಾಟ್ಸ್ಮನ್ ಔಟ್ ಆಗುತ್ತಾರೆ. ಇದರಿಂದ ಹತಾಶೆಗೊಂಡ ಬ್ಯಾಟರ್ ಕೋಪಿಸಿಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಮೈದಾನದಲ್ಲಿ ಬ್ಯಾಟ್ ಜೋರಾಗಿ ಎಸೆದು, ಸಿಟ್ಟನ್ನು ತೋರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಆ ಬ್ಯಾಟ್ ಕೈಯಿಂದ ಜಾರಿ ತನ್ನ ಟೀಂ ಮೇಟ್ ಕುತ್ತಿಗೆಗೆ ಹೋಗಿ ಬಡಿದೆ. ಪರಿಣಾಮ ಕ್ರೀಸ್ನಲ್ಲಿದ್ದ ಬ್ಯಾಟರ್ ಮೈದಾನದಲ್ಲಿ ಕುಸಿದು ಬೀಳುತ್ತಾರೆ. ಮುಂದೆ ಏನಾಯ್ತು ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ವಿಡಿಯೋ ಮಾತ್ರ ನೋಡಲು ತುಂಬಾ ಭಯವಾಗುತ್ತದೆ.
— Movie And Cric (@MovieNCricEdits) August 25, 2023
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್