/newsfirstlive-kannada/media/post_attachments/wp-content/uploads/2024/12/MINERAL-WATER.jpg)
ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ(FSSAI ) ಒಂದು ಶಾಕಿಂಗ್ ಸತ್ಯವೊಂದನ್ನು ಹೊರಹಾಕಿದೆ. ಕ್ಲಾಸಿಫೈ ಪ್ಯಾಕೇಜ್ಡ್ ಹಾಗೂ ಮಿನರಲ್ ವಾಟರ್​ ಅತೀ ಅಪಾಯಕಾರಿ ಆಹಾರಗಳ ಗುಂಪಿಗೆ ಸೇರಿಸಲಾಗಿದೆ. ಇದರಿಂದಾಗಿ ಈ ಬಗೆಯು ಉತ್ಪನ್ನಗಳು ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಥರ್ಡ್​ ಪಾರ್ಟಿಯಿಂದ ಆಡಿಟ್​ಗೆ ಒಳಗಾಗಲಿವೆ ಎಂದು FSSAI ಹೇಳಿದೆ.
ಸರ್ಕಾರದ ನಿರ್ಧಾರದಂತೆ ಈ ಪ್ರಾಡಕ್ಟ್​ಗಳಿಗೆ ನೀಡಲಾಗಿರುವ ಬಿಎಸ್​ಐ ಸರ್ಟಿಫಿಕೆಟ್​ನ್ನು ತೆಗೆದುಹಾಕುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ.ಹೊಸ ನಿಯಮದ ಪ್ರಕಾರ ಪ್ಯಾಕ್ ಆಗಿರುವ ಕುಡಿಯುವ ಹಾಗೂ ಮಿನರಲ್ ವಾಟರ್ ಉತ್ಪಾದಕರು ಪ್ರತಿವರ್ಷ ಪರಿಶೀಲನೆಯ ಸಮಸ್ಯೆಯನ್ನು ಎದುರಿಸಲಿದದ್ದಾರೆ. ಈ ಎಲ್ಲಾ ಪರಿಶೀಲನೆಗಳು ನಡೆದ ಬಳಿಕವೇ ಉತ್ಪಾದಕ ಕಂಪನಿಗಳಿಗೆ ಪರವಾನಿಗೆ ಪತ್ರ ಹಾಗೂ ನೊಂದಣಿ ಪತ್ರ ಸಿಗಲಿದೆ.
ಇದನ್ನೂ ಓದಿ:ಕಂಡ ಕನಸು ಈಡೇರೋ ಮುನ್ನವೇ ಕೊನೆಯಾದ IPS ಅಧಿಕಾರಿ; ಈ ಭೀಕರ ಅಪಘಾತ ಹೇಗಾಯ್ತು?
ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಆದೇಶದ ಪ್ರಕಾರ ಅತಿ ಅಪಾಯಕಾರಿ ಆಹಾರ ಪದಾರ್ಥಗಳು ಉದಾಹರಣೆಗೆ ಪ್ಯಾಕ್ ಆದ ಕುಡಿಯುವ ನೀರು ಸೇರಿ ಎಲ್ಲ ಉತ್ಪನ್ನಗಳು ಇನ್ಮುಂದೆ ಆಹಾರ ಸುರಕ್ಷತಾ ಎಜೆನ್ಸಿಗಳ ಥರ್ಡ್​ ಪಾರ್ಟಿ ಅಡಿಯಲ್ಲಿಯೆ ಆಡಿಟ್​ಗೆ ಒಳಗಾಗಲಿವೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಸುರಕ್ಷತೆಯ ಆಹಾರವನ್ನು ಪೂರೈಸುವ ಗುರಿಯನ್ನಿಟ್ಟುಕೊಂಡು ಈ ನಿರ್ಣಯಕ್ಕೆ ಬರಲಾಗಿದೆ ಎಂದು ಎಫ್​ಎಸ್​ಎಸ್​ಎಐ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us