newsfirstkannada.com

ಕನ್ನಡತಿ ಶ್ರೇಯಾಂಕಗೆ ಫುಲ್​ ಡಿಮ್ಯಾಂಡ್.. ವಿದೇಶ ಲೀಗ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ RCB ಆಟಗಾರ್ತಿ

Share :

02-07-2023

    ಟೀಮ್ ಇಂಡಿಯಾ ಕರೆಗೂ ಮುನ್ನವೇ ಫುಲ್ ಡಿಮ್ಯಾಂಡ್

    ವಿದೇಶ ಲೀಗ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹೆಮ್ಮೆಯ ಕನ್ನಡತಿ

    RCB ಪ್ಲೇಯರ್​​ ಶ್ರೇಯಾಂಕ ಬ್ಯಾಟಿಂಗ್​ಗೂ ಸೈ, ಬೌಲಿಂಗ್​ಗೂ ಜೈ

ಈಕೆ ಕನ್ನಡತಿ.. ವುಮೆನ್ಸ್​ ಪ್ರಿಮೀಯರ್​ ಲೀಗ್​ನಲ್ಲಿ ಹಂಗಾಮ ಸೃಷ್ಟಿಸಿದ್ದ 20ರ ಚಲುವೆ, ಎಮರ್ಜಿಂಗ್ ಎಷ್ಯಾಕಪ್​​ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದೇ ತಡ ವಿಶ್ವ ಕ್ರಿಕೆಟ್​ ಲೋಕದಲ್ಲಿ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಯಾರು ಮಾಡದ ಸಾಧನೆ ಮಾಡಿರೋ ಈಕೆ, ಟೀಮ್ ಇಂಡಿಯಾ ಎಂಟ್ರಿ ಕೂಗಳತೆಯ ದೂರದಲ್ಲೇ ಇದೆ. ಅಂದಹಾಗೆಯೇ ಈಕೆ ಯಾರು ಗೊತ್ತಾ? ಈ ಸ್ಟೋರಿ ನೋಡಿ.

ಶ್ರೇಯಾಂಕ ಪಾಟಿಲ್​​​​​​​​​​, ಆರ್​ಸಿಬಿಯ ಎಕ್ಸ್​-ಫ್ಯಾಕ್ಟರ್ ಪ್ಲೇಯರ್. 20 ವರ್ಷದ ಈ ಚೆಲುವೆಯ ಫಿಯರ್​ಲೆಸ್ ಬ್ಯಾಟಿಂಗ್. ಇನೋವೇಟಿವ್​ ಶಾಟ್ಸ್​. ಆತ್ಮವಿಶ್ವಾಸ ನಿಜಕ್ಕೂ ಎಂಥವರಿಗೂ ಸ್ಪೂರ್ತಿ. ಚೊಚ್ಚಲ ವುಮೆನ್ಸ್​ ಐಪಿಎಲ್​ನಲ್ಲೇ ಸೆನ್ಸೇಷನ್​ ಸೃಷ್ಟಿಸಿದ್ದ ಈ ಕನ್ನಡಿತಿಗೆ, ಈಗ ವಿಶ್ವ ಕ್ರಿಕೆಟ್​​​ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್​​.

ಹೌದು.! ಚೊಚ್ಚಲ ವುಮೆನ್ಸ್​ ಐಪಿಎಲ್​​ನಲ್ಲಿ ಆರ್​​​​​​​​​​​​​​ಸಿಬಿ ಪರ ಕಣಕ್ಕಿಳಿದ 20ರ ಶ್ರೇಯಾಂಕ, ಈಗ ವಿದೇಶಗಳಲ್ಲೂ ಸದ್ದು ಮಾಡೋಕೆ ರೆಡಿಯಾಗಿದ್ದಾರೆ. ​ಅಷ್ಟೇ ಅಲ್ಲ.! ಯಾರು ಮಾಡದ ಹೆಗ್ಗಳಿಕೆಗೂ ಪಾತ್ರವಾಗಿರೋ ನಮ್ಮ ಕನ್ನಡಿತಿ, ನೆಕ್ಸ್ಟ್ ಟೀಮ್ ಇಂಡಿಯಾ ಮಹಿಳಾ ತಂಡದ ಬಿಗ್ ಫಿಷ್​ ಆಗೋಕೆ ಹೊರಟಿದ್ದಾರೆ.

ವುಮೆನ್ಸ್​ ಐಪಿಎಲ್​​ನಲ್ಲಿ ಶ್ರೇಯಾಂಕ ಹಂಗಾಮ..!

ಅಂಡರ್​​-16ನಲ್ಲಿ ಕರ್ನಾಟಕ ರಾಜ್ಯ ತಂಡದ ಪರ ಮಿಂಚಿದ್ದ ಶ್ರೇಯಾಂಕ, ನಂತರ ಎಂಟ್ರಿ ನೀಡಿದ್ದೇ ಐಪಿಎಲ್​​ ಎಂಬ ಮೆಗಾ ಟೂರ್ನಿಗೆ, ಅದರಲ್ಲೂ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಈ ಚಲುವೆ, ನಿಜಕ್ಕೂ ಮೋಡಿ ಮಾಡಿದ್ದರು. ಆಫ್ ಸ್ಪಿನ್ನರ್​ ಆಗಿ ಕೈಚಳಕ ತೋರಿದ್ದ ಈಕೆ, 7 ಇನ್ನಿಂಗ್ಸ್​ಗಳಿಂದ 6 ವಿಕೆಟ್ ಉರುಳಿಸಿ ಗಮನ ಸೆಳೆದ್ರೆ. ಸಿಕ್ಕ ಅವಕಾಶದಲ್ಲೇ 151ರ ಸ್ಟ್ರೈಕ್​​ರೆಟ್​​ನಲ್ಲಿ ಬ್ಯಾಟಿಂಗ್​​ ಮಾಡಿ ಫ್ಯೂಚರ್ ಸ್ಟಾರ್​ ಎಂಬ ಸಂದೇಶ ಪಾಸ್ ಮಾಡಿದ್ದರು.

ಎಮರ್ಜಿಂಗ್ ಏಷ್ಯಾಕಪ್​ನಲ್ಲಿ ಶ್ರೇಯಾಂಕ ಮಿಂಚು!

ಹೌದು! ಐಪಿಎಲ್​ ಬೆನ್ನಲ್ಲೇ ಹಾಂಗ್ ಕಾಂಗ್‌ನಲ್ಲಿ ನಡೆದ ಎಮರ್ಜಿಂಗ್ ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾವನ್ನ ಪ್ರತಿನಿದಿಸಿದ ಶ್ರೇಯಾಂಕ, ಈ ಟೂರ್ನಿಯಲ್ಲಿ ಅಕ್ಷರಶಃ ಮ್ಯಾಜಿಕ್ ಮಾಡಿದ್ದರು. ಈಕೆಯ ಒಂದೊಂದು ಎಸೆತಕ್ಕೂ ತಡಬಡಾಯಿಸಿದ್ದ ಎದುರಾಳಿಗಳು ಬಂದ ದಾರಿಗೆ ಸುಂಕ ಇಲ್ಲದಂತೆ ಹಿಂತಿರುಗಿದ್ದರು. ಹಾಂಕ್​​ಕಾಂಗ್​ ಎದುರಿನ ಮೊದಲ ಪಂದ್ಯದಲ್ಲಿ 2 ರನ್ ನೀಡಿ 5 ವಿಕೆಟ್ ಉರುಳಿಸಿದ್ದ ಕನ್ನಡತಿ, ಬಾಂಗ್ಲಾ ಎದುರಿನ ಫೈನಲ್​ ಪಂದ್ಯದಲ್ಲಿ 13ಕ್ಕೆ 4 ವಿಕೆಟ್ ಉರುಳಿಸಿ ಏಷ್ಯಾಕಪ್​​​​ಗೆ ಭಾರತ ಮುತ್ತಿಡುವಂತೆ ಮಾಡಿದ್ದರು. ಅಷ್ಟೇ ಅಲ್ಲ.! 2 ಪಂದ್ಯಗಳಿಂದ ಬರೋಬ್ಬರಿ 9 ವಿಕೆಟ್ ಉರುಳಿಸಿ ಮ್ಯಾನ್ ಆಫ ದ ಸಿರೀಸ್​ ಮುಡಿಗೇರಿಸಿಕೊಂಡಿದ್ದಳು. ಈ ಬೆನ್ನಲ್ಲೇ ಶ್ರೇಯಾಂಕ ಅದೃಷ್ಟು ಖುಲಾಯಿಸಿದೆ.

ವಿದೇಶಿ ಲೀಗ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶ್ರೇಯಾಂಕ!

ಐಪಿಎಲ್​ ಹಾಗೂ ಎಮರ್ಜಿಂಗ್ ಏಷ್ಯಾಕಪ್​​ನಲ್ಲಿ ಮಿಂಚು ಹರಿಸಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್, ಈಗ ವಿದೇಶಿ ಲೀಗ್ ಆಡಲು ಸಜ್ಜಾಗಿದ್ದಾರೆ. ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡದ ಜೊತೆ ಒಪ್ಪಂದ ಮಾಡಿಕೊಂಡಿರುವ ಆಲ್​ರೌಂಡರ್ ಶ್ರೇಯಾಂಕ, ಆಗಸ್ಟ್ 31ರಿಂದ ಆರಂಭವಾಗಲಿರುವ ಕೆರಿಬಿಯನ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಆ ಮೂಲಕ ಅಂತರಾಷ್ಟ್ರೀಯ ಡೆಬ್ಯೂಗೂ ಮುನ್ನವೇ ವಿದೇಶಿ ಲೀಗ್‌ನಲ್ಲಿ ಗುತ್ತಿಗೆ ಪಡೆದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೆಕ್ಸ್ಟ್​ ಟೀಮ್ ಇಂಡಿಯಾನೇ ಕನ್ನಡತಿಯ ಟಾರ್ಗೆಟ್​..!

ಸಿಕ್ಕ ಸಿಕ್ಕ ಅವಕಾಶಗಳಲ್ಲಿ ಮಿಂಚುತ್ತಾ ಸಾಗ್ತಿರೋ ಈ ರೈಸಿಂಗ್ ಸ್ಟಾರ್​ ಶ್ರೇಯಾಂಕ, ಹೆಸರಿಗೆ ತಕ್ಕಂತೆ ಶ್ರೇಯಸ್ಸೂ ಕೂಡ ಗಳಿಸ್ತಿದ್ದಾರೆ. ಪರಿಣಾಮಕಾರಿ ಆಫ್ ಸ್ಪಿನ್ ಮೂಲಕ ಎದುರಾಳಿಯನ್ನ ಕೆಂಗೆಡಿಸುತ್ತಿರುವ ಕನ್ನಡತಿ, ಡೆತ್ ಓವರ್​​ಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುವ ತಾಕತ್ತಿದೆ. ಟೀಮ್ ಇಂಡಿಯಾ ಎಂಟ್ರಿಯ ಕನಸು ಕಾಣುತ್ತಿರುವ ಶ್ರೇಯಾಂಕ, ಈ ನಿಟ್ಟಿನಲ್ಲೇ ಹೆಜ್ಜೆ ಹಾಕಿದ್ದಾರೆ. ಇನ್​ಫ್ಯಾಕ್ಟ್​ ಈ ಕನಸು ನನಸಾಗುವ ಕಾಲವೂ ಹತ್ತಿರದಲ್ಲೇ ಇದೆ. ಒಟ್ಟಿನಲ್ಲಿ ಈಗಾಗಲೇ ಫ್ಯೂಚರ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶ್ರೇಯಾಂಕ, ಆದಷ್ಟು ಬೇಗ ಟೀಮ್ ಇಂಡಿಯಾಗೆ ಎಂಟ್ರಿ ನೀಡಲಿ, ಶ್ರೇಯಸ್ಸು ಗಳಿಸಲಿ ಅನ್ನೋದೇ ಅಭಿಮಾನಿಗಳ ಆಸೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡತಿ ಶ್ರೇಯಾಂಕಗೆ ಫುಲ್​ ಡಿಮ್ಯಾಂಡ್.. ವಿದೇಶ ಲೀಗ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ RCB ಆಟಗಾರ್ತಿ

https://newsfirstlive.com/wp-content/uploads/2023/07/Shreyanka-patil.jpg

Load More