ಸೀರಿಯಲ್ ದುನಿಯಾದಲ್ಲೂ ಹೊಸ ಟ್ರೆಂಡ್ ಶುರು
ಕಿರುತೆರೆ ಸೀರಿಯಲ್ಗಳಿಗೆ ಪೋಷಕ ಪಾತ್ರಗಳೇ ಲೀಡ್
ಪೋಷಕ ಪಾತ್ರಗಳ ಪವರ್ ಹೆಚ್ಚಿಸುವ ಕಾಲ ಬಂದೇ ಬಿಡ್ತು
ಟ್ರೆಂಡ್ ಯಾವಾಗ ಚೇಂಜ್ ಆಗುತ್ತೆ. ಹೇಗೆ ಚೇಂಜ್ ಆಗುತ್ತೆ ಅಂತಾ ಹೇಳುವುದು ತುಂಬಾ ಕಷ್ಟ. ನಮ್ಮ ಸೀರಿಯಲ್ ದುನಿಯಾದಲ್ಲೂ ಹೊಸ ಟ್ರೆಂಡ್ ಶುರುವಾಗಿದೆ. ಲೀಡ್ ನಟ-ನಟಿಯರೇ ಪ್ರಧಾನ ಎನ್ನುತ್ತಿದ್ದ ಕಾಲ ಬದಲಾಗಿ ಪೋಷಕ ಪಾತ್ರಗಳ ಪವರ್ ಹೆಚ್ಚಾಗುತ್ತಿದೆ. ಹೌದು, ಕೆಂಡಸಂಪಿಗೆಯ ಕೇಶವಪ್ರಸಾದ ಪಾತ್ರದಲ್ಲಿ ಹಿರಿಯ ನಟ ದೊಡ್ಡಣ್ಣ, ಶ್ರೀರಸ್ತು ಶುಭಮಸ್ತು ದತ್ತನ ಪಾತ್ರದ ವೆಂಕಟ್ ರಾವ್, ಭಾಗ್ಯಲಕ್ಷ್ಮೀಯ ಕುಸುಮಾ ಪಾತ್ರದ ಪದ್ಮಜಾ ರಾವ್, ಪುಟ್ಟಕ್ಕನ ಮಕ್ಕಳು ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ಮಂಜುಭಾಷಿನಿ, ರಾಮಾಚಾರಿಯ ಶಂಕರ್ ಅಶ್ವಥ್. ಇತ್ತೀಚೆಗೆ ಲಾಂಚ್ ಆದ ಅಮೃತಧಾರೆಯ ಮಂದಾಕಿನಿ ಪಾತ್ರದಲ್ಲಿ ಚಿತ್ರಾ ಶಣೈ ಹೀಗೆ ಸಾಲು ಸಾಲು ಪಾತ್ರಗಳು ಇಡೀ ಸೀರಿಯಲ್ಗೆ ಪವರ್ ತುಂಬಿತ್ತಿವೆ ಅಂದ್ರೆ ತಪ್ಪಾಗುವುದಿಲ್ಲ.
ಕೆಲ ವರ್ಷಗಳ ಹಿಂದೆ ಸೀರಿಯಲ್ ಕತೆಗೆ ತಕ್ಕಂತೆ ನಾಯಕ ನಾಯಕಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗ್ತಿತ್ತು. ಪೋಷಕ ಪಾತ್ರಗಳು ಲೀಡ್ಗೆ ಸಪೋರ್ಟ್ ಸಿಸ್ಟಮ್ ತರಹ ಇರುತ್ತಿದ್ದವು. ಸದ್ಯ ಪರಿಸ್ಥಿತಿ ಬದಲಾಗಿದ್ದು, ಎಲ್ಲಾ ಚಾನೆಲ್ಗಳ ಧಾರಾವಾಹಿಗಳಲ್ಲೂ ಪೋಷಕ ಪಾತ್ರಗಳ ವರ್ಚಸ್ ಬದಲಾಗಿದೆ. ಹಿರಿಯ ನಟರನ್ನ ಮತ್ತೇ ಕಿರುತೆರೆಗೆ ಕರೆತಂದು ಪಾತ್ರದ ತೂಕವನ್ನ ಹೆಚ್ಚಿಸಿದೆ ಸೀರಿಯಲ್ ತಂಡಗಳು. ಇನ್ನು, ವೀಕ್ಷಕರು ಕೂಡ ಪ್ರತಿಯೊಂದು ಪಾತ್ರವನ್ನ ಅಷ್ಟೇ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಈ ಪಾತ್ರಗಳ ಕಲಾವಿದರಿಗಾಗಿಯೇ ಅದೇಷ್ಟೋ ವೀಕ್ಷಕರು ಸೀರಿಯಲ್ ನೋಡ್ತಿದ್ದಾರೆ.
ಅದೆಷ್ಟು ಜನ ಮೆಚ್ಚಿಕೊಂಡಿದ್ದಾರೆ. ಒಂದು ವೇಳೆ ನಾಯಕ ನಾಯಕಿ ರಿಪ್ಲೇಸ್ ಆದ್ರೆ ಒಪ್ಪಿಕೊಳ್ಳಬಹುದು. ಆದರೆ ಅಪ್ಪಿತಪ್ಪಿ ಕೂಡ ಪೋಷಕ ಪಾತ್ರಗಳು ಬದಲಾಯಿಸಬೇಡಿ ಅಂತಾ ಅದೇಷ್ಟೋ ಬಾರಿ ಸಾಮಾಜಿಕ ಜಾಲತಾಣದ ಮೂಲಕ ನಿರ್ದೇಶಕರಿಗೆ ಮೆಸೇಜ್ ಮಾಡುವ ಮೂಲಕ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಒಳ್ಳೆಯ ಬಳವಣಿಗೆ ಅಂತಾನೇ ಹೇಳಬಹುದು. ಹಿರಿಯ ನಟರಿಗೆ ಕೈ ತುಂಬಾ ಕೆಲಸ ಸಿಕ್ಕಿದ ಹಾಗೇ ಕಿರಿಯ ಕಲಾವಿದರು ಇವರನ್ನು ನೋಡಿ ಕಲಿಯೋಕೆ ಒಂದು ಅವಕಾಶ. ಪ್ರೇಕ್ಷಕರಿಗೆ ಮನರಂಜನೆ ಜೊತೆಗೆ ಜೀವ ತುಂಬುವ ಕಲಾವಿದರನ್ನ ನೋಡೋ ಭಾಗ್ಯ ಒದಗಿ ಬಂದಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ