newsfirstkannada.com

ಜಿ-20 ಶೃಂಗಸಭೆ‌: ಯುಎಸ್‌ ಅಧ್ಯಕ್ಷ ಇಂದು ನವದೆಹಲಿಗೆ.. ಜೋ ಬೈಡನ್ ನೀಡಲಿರುವ ಭದ್ರತೆ ಹೇಗಿರುತ್ತೆ ಗೊತ್ತಾ?

Share :

08-09-2023

  ಯುಎಸ್‌ ಅಧ್ಯಕ್ಷ ಜೋ ಬೈಡನ್​ಗಾಗಿ ಭದ್ರತಾ ವ್ಯವಸ್ಥೆ ನಿಯೋಜನೆ

  ಹಲವು ಮಹತ್ತರ ದ್ವಿಪಕ್ಷೀಯ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ!

  ಪ್ರಧಾನಿ ನರೇಂದ್ರ ಮೋದಿಯಿಂದ ಬೈಡನ್​ಗೆ ಭರ್ಜರಿ ಔತಣಕೂಟ

ನವದೆಹಲಿ: ಇಡೀ ಜಗತ್ತಿನ ಗಮನವೀಗ G20 ಶೃಂಗಸಭೆ ಮೇಲೆ ನೆಟ್ಟಿದೆ. ಹೀಗಾಗಿ ಎಲ್ಲ ರೀತಿಯಲ್ಲೂ ಹಂತ ಹಂತವಾಗಿ ರಾಷ್ಟ್ರ ರಾಜಧಾನಿ ಸಂಪೂರ್ಣವಾಗಿ ಸಜ್ಜಾಗುತ್ತಿದೆ. ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ G20 ಶೃಂಗಸಭೆ ನಡೆಯಲಿದೆ. ದೆಹಲಿಗೆ ವಿವಿಧ ರಾಷ್ಟ್ರದ ಗಣ್ಯರು ಹಾಗೂ ಪ್ರತಿನಿಧಿಗಳು ಮತ್ತು G20 ಆಹ್ವಾನಿತರು ಆಗಮಿಸುತ್ತಿದ್ದಾರೆ. G20 ಶೃಂಗಸಭೆಯು ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪದಲ್ಲಿ ನಡೆಯಲಿದೆ.

G20 ಶೃಂಗಸಭೆಯಲ್ಲಿ ಯುಎಸ್‌ ಅಧ್ಯಕ್ಷ ಜೋ ಬೈಡನ್ ಆಗಮಿಸುತ್ತಿದ್ದಾರೆ. ಜೋ ಬೈಡನ್ ಅವರು ಮಿಲಿಟರಿ ಸಾರಿಗೆ ವಿಮಾನದಲ್ಲಿ ಯುಎಸ್​ನಿಂದ ದೆಹಲಿಗೆ ಬಂದಿಳಿಯಲಿದ್ದಾರೆ. ಇಂದು ಸಂಜೆ 7 ಗಂಟೆ ಸುಮಾರಿಗೆ ಜೋ ಬೈಡನ್ ದೆಹಲಿಗೆ ಆಗಮಿಸಲಿದ್ದಾರೆ. ಬಂದ ಮೊದಲ ದಿನವೇ ಜೋ ಬೈಡನ್ ಅವರು ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಜೋ ಬೈಡನ್ ಅವರ ಸುರಕ್ಷತೆಗಾಗಿ ವಿಶೇಷ ಮೂರು ಸುತ್ತಿನ ಭದ್ರತಾ ವ್ಯವಸ್ಥೆ ನಿಯೋಜನೆ ಮಾಡಲಾಗಿದೆ. ಮೊದಲನೇ ಹಂತದಲ್ಲಿ ಹೊರಗಿನ ಭದ್ರತಾ ಜವಾಬ್ದಾರಿ ಅರೆಸೇನಾ ಪಡೆ ನೋಡಿಕೊಳ್ಳಲಿದೆ. ಎರಡನೇ ಸುತ್ತಿನ ಭದ್ರತೆ ಭಾರತದ ವಿಶೇಷ ರಕ್ಷಣಾ ಗುಂಪಿನ ಕಮಾಂಡೋಸ್ ನೋಡಿಕೊಳ್ಳಲಿದ್ದಾರೆ. ಮತ್ತು ಮೊದಲ ಹಂತದ ಭದ್ರತೆಯನ್ನ ಯುಎಸ್​ನ ರಹಸ್ಯ ಸೇವಾ ಏಜೆಂಟ್‌ಗಳು ಭದ್ರತೆ ನೀಡಲಿದ್ದಾರೆ.

ಇದನ್ನು ಓದಿ: G20 ಶೃಂಗಸಭೆಯಲ್ಲಿ ಕರ್ನಾಟಕದ ಬಿದ್ರಿ ಕಲೆಗೆ ವಿಶೇಷ ಸ್ಥಾನ; ಭಾರತ್ ಮಂಟಪದ ಫೋಟೋಗಳು ಇಲ್ಲಿವೆ

ಇನ್ನೂ, ಜೋ ಬೈಡನ್​​ ದೆಹಲಿಯಲ್ಲಿ ಪ್ರಯಾಣಿಸಲು ಅಮೇರಿಕಾದಿಂದ ಕಾರು ಬಂದಿದೆ. ಬೋಯಿಂಗ್ C-17 Globemaster III ಯಲ್ಲಿ ಬೈಡನ್ ಕಾರು ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಈ ಕಾರು ಎಲ್ಲಾ ಆಧುನಿಕ ತಂತ್ರಜ್ಞಾನ ಹೊಂದಿದ್ದು, ಬುಲೆಟ್ ಫ್ರೂಫ್ ಜೊತೆಗೆ ಬಾಂಬ್ ದಾಳಿಗೆ ಜಗ್ಗೋದಿಲ್ಲ. ಜೊತೆಗೆ ಕೆಮಿಕಲ್ ಬಾಂಬ್ ದಾಳಿಯಿಂದಲೂ ಬೈಡನ್ ರಕ್ಷಿಸಲಿದೆ. ಬೈಡನ್ ತಂಗುವ ದೆಹಲಿಯ ITC ಮೌರ್ಯ ಹೋಟಲ್ ಸುತ್ತಮುತ್ತ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಜೊ ಬೈಡನ್​ ಬಂದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲೂ ಟ್ರೋನ್ ಮತ್ತು ವಿಮಾನ ಹಾರುವಂತಿಲ್ಲ. ಹೀಗಾಗಿ ಆ್ಯಂಟಿ ಡ್ರೋನ್ ಮತ್ತು ಆ್ಯಂಟಿ ಮಿಸೈಲ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಬೈಡನ್ ತಂಗುವ ಹೋಟಲ್​ನ 400 ಕೊಠಡಿಗಳು ಬುಕ್ ಆಗಿವೆ. ಹೋಟಲ್​​ನ 14 ನೇ ಮಹಡಿಯಲ್ಲಿ ಬೈಡನ್ ವಿಶ್ರಾಂತಿ ಮಾಡಲಿದ್ದಾರೆ. ಬೈಡನ್ ಸಂಚಾರಕ್ಕಾಗೆ 14ನೇ ಮಹಡಿಗೆ ವಿಶೇಷ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ಮೋದಿಯ ಲೋಕ ಕಲ್ಯಾಣ ಮಾರ್ಗ್​ನಲ್ಲಿರೋ ನಿವಾಸದಲ್ಲಿ ಮಾತುಕತೆ ನಡೆಯಲಿದೆ. ಸಂಜೆ 7.30ಕ್ಕೆ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗಲಿದ್ದಾರೆ. ಎರಡು ದೇಶಗಳ ಹಲವು ವಿಚಾರಗಳ ಚರ್ಚೆ ಮಾಡಲಿದ್ದಾರೆ. ಜೆಟ್ ಒಪ್ಪಂದ, ವೀಸಾವನ್ನು ಸರಾಗಗೊಳಿಸುವ ಬಗ್ಗೆ, ಉಕ್ರೇನ್‌ಗೆ ಜಂಟಿ ನೆರವು, ಪರಮಾಣು ಶಕ್ತಿ, ರಕ್ಷಣೆ, ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಇನ್ನೂ ಇದೇ ಮೊದಲ ಬಾರಿಗೆ ಯುಎಸ್ ಅಧ್ಯಕ್ಷ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾಕ್ಕೆ ಭೇಟಿ ಕೊಟ್ಟಿದ್ದಾಗ ಬೈಡನ್ ದಂಪತಿ ವಿಶೇಷ ಸತ್ಕಾರ ಮಾಡಿದ್ದರು. ಹೀಗಾಗಿ ಶೃಂಗಸಭೆಗೆ ಬಂದ ಅತಿಥಿಗಳಿಗೆ ಯಾವುದೇ ಕೊರತೆಯಾಗದಂತೆ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಲಾಗಿದೆ. ಶೃಂಗಸಭೆಯ ಕೊನೆಯಲ್ಲಿ ಹಲವು ನಾಯಕರೊಂದಿಗೆ ಭರ್ಜರಿ ಭೋಜನದ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಳ್ಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿ-20 ಶೃಂಗಸಭೆ‌: ಯುಎಸ್‌ ಅಧ್ಯಕ್ಷ ಇಂದು ನವದೆಹಲಿಗೆ.. ಜೋ ಬೈಡನ್ ನೀಡಲಿರುವ ಭದ್ರತೆ ಹೇಗಿರುತ್ತೆ ಗೊತ್ತಾ?

https://newsfirstlive.com/wp-content/uploads/2023/09/g20-3.jpg

Load More