ನೌಕರರ ಸಕಾಲ ವೇತನಕ್ಕೆ ಕುಟುಕಿದ್ದ ಬಿಜೆಪಿ ನಾಯಕ ಯತ್ನಾಳ್
ಯತ್ನಾಳ್ ಮಾತಿಗೆ ದೆಹಲಿಯಲ್ಲಿ ಗೃಹ ಸಚಿವರಿಂದ ತಿರುಗೇಟು
ಯತ್ನಾಳ್ ಕಮಾಲೆ ಕಣ್ಣಿನಿಂದ ನೋಡ್ತಿದ್ದಾರೆ ಎಂದ ಪರಮೇಶ್ವರ್
ನವದೆಹಲಿ: ಸರ್ಕಾರಿ ನೌಕರರಿಗೆ ಸಕಾಲಕ್ಕೆ ವೇತನ ಸಿಗದ ಆರೋಪದ ಹಿನ್ನಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ಟ್ವೀಟ್ ಮಾಡಿದ್ದರು. ಈ ವಿಚಾರ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಜಿ ಪರಮೇಶ್ವರ್ ಆಡಳಿತ ವ್ಯವಸ್ಥೆಯಲ್ಲಿ ಬೇರೆ, ಬೇರೆ ಕಾರಣಗಳಿಂದ ಸಂಬಳ ನಿಲ್ಲಿಸಲಾಗುತ್ತದೆ. ಯಾವುದೋ ಕಾರಣಕ್ಕೆ ಎಸ್ಪಿ ಸಂಬಳ ನಿಲ್ಲಿಸಿರಬಹುದು. ಗ್ಯಾರಂಟಿ ಯೋಜನೆಗಾಗಿ ಸಂಬಳ ನಿಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ಸಿಎಂ ಹಣಕಾಸಿನ ಸಚಿವರು, ಯೋಜನೆಗೆ ಬೇಕಾದ ಹಣವನ್ನು ಬಜೆಟ್‌ನಲ್ಲಿ ಇಟ್ಟಿದ್ದಾರೆ. ಸಂಬಳ ನಿಲ್ಲಿಸಿ ಗ್ಯಾರಂಟಿ ನೀಡುವ ಅಗತ್ಯ ಇಲ್ಲ. ಯತ್ನಾಳ್ ಕಾಮಾಲೆ ಕಣ್ಣಿನಿಂದ ನೋಡ್ತಿದ್ದಾರೆ ಎಂದು ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ಕುರಿತು ಕೆಲವು ಕಾರಣಗಳಿಂದ ರಿಪೋರ್ಟ್ ಮಾಡಿಕೊಂಡಿರಲಿಲ್ಲ. ಸ್ಥಳೀಯ ಶಾಸಕರು ನಾಯಕರಿಂದಲೂ ಕೆಲವು ಆಕ್ಷೇಪ ಬಂದಿತ್ತು. ಈ ಹಿನ್ನಲೆ ತಡೆ ಹಿಡಿಯಲಾಗಿದೆ ಸರಿಪಡಿಸುತ್ತೇವೆ. ಎಚ್ಚರಿಕೆಯಿಂದ ವರ್ಗಾವಣೆ ಮಾಡುತ್ತೇವೆ ಎಂದು ಜಿ. ಪರಮೆಶ್ವರ್ ಹೇಳಿದ್ದಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಟ್ವೀಟ್
ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ ನೌಕರರಿಗೆ ಸಕಾಲಕ್ಕೆ ವೇತನ ಸಿಗದ ಹಿನ್ನಲೆ ಟ್ವೀಟ್ ಮಾಡಿದ್ದರು. ಟ್ವೀಟ್ನಲ್ಲಿ ಇಲ್ಲಿ ಎಲ್ಲಾ ಹಾಳುಮಾಡಿ ದೆಹಲಿಯಲ್ಲಿ ಭಾಷಣ ಹೊಡೆಯಲು ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ಸರ್ಕಾರಿ ನೌಕರರಿಗೆ ಸರಿಯಾದ ಸಮಯದಲ್ಲಿ ವೇತನ ನೀಡಲು ಸರ್ಕಾರದಲ್ಲಿ ಅನುದಾನದ ಕೊರತೆ ಇದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟು ಸಂಕಷ್ಟಕ್ಕೆ ತಲುಪಲು ನೇರ ಸಿದ್ದರಾಮಯ್ಯನವರ ಪಟಾಲಂ ಕಾರಣ. ಈಗ ಮಹದೇವಪ್ಪನಿಗೂ ಟೋಪಿ, ಕಾಕಪಾಟೀಲನಿಗೂ ಟೋಪಿ ಎಂದು ಬರೆದಿದ್ದರು. ಈ ವಿಚಾರವಾಗಿ ಜಿ ಪರಮೇಶ್ವರ್ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ನೌಕರರಿಗೆ ಸಕಾಲಕ್ಕೆ ಸಿಗದ ವೇತನ!
ಇಲ್ಲಿ ಎಲ್ಲಾ ಹಾಳುಮಾಡಿ ದೆಹಲಿಯಲ್ಲಿ ಭಾಷಣ ಹೊಡೆಯಲು ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು.
ಸರ್ಕಾರೀ ನೌಕರರಿಗೆ ಸರಿಯಾದ್ ಸಮಯದಲ್ಲಿ ವೇತನ ನೀಡಲು ಸರ್ಕಾರದಲ್ಲಿ ಅನುದಾನದ ಕೊರತೆ ಇದೆ!
ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟು ಸಂಕಷ್ಟಕ್ಕೆ ತಲುಪಲು ನೇರ ಸಿದ್ದರಾಮಯ್ಯನವರ ಪಟಾಲಂ ಕಾರಣ.
ಈಗ… pic.twitter.com/Jbz1B9hRkw
— Basanagouda R Patil (Yatnal) (@BasanagoudaBJP) August 3, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ