newsfirstkannada.com

G-20 ಶೃಂಗಸಭೆಯಲ್ಲಿ ಚೀನಾಕ್ಕೆ ಭಾರತ ಟಕ್ಕರ್‌; ವಿಶ್ವದ ಅತಿ ದೊಡ್ಡ ಎಕನಾಮಿಕ್ ಕಾರಿಡಾರ್‌ನ ಸ್ಪೆಷಲ್ ರಿಪೋರ್ಟ್ ಇಲ್ಲಿದೆ

Share :

11-09-2023

  ದೆಹಲಿಯಲ್ಲಿ ನಡೆದ ಜಿ-20 ಭಾರತದ ಪಾಲಿಗೆ ಹೇಗೆ ಗೇಮ್ ಚೇಂಜರ್

  ಚೀನಾದ ಪ್ರಭಾವ ತಗ್ಗಿಸುವ ತೀರ್ಮಾನ ಕೈಗೊಂಡಿದ್ದು ಹೇಗೆ ಗೊತ್ತಾ..?

  140 ಕೋಟಿ ಜನಸಂಖ್ಯೆ ಹೊಂದಿರೋ ಭಾರತಕ್ಕೆ ಟೆಕ್ನಾಲಜಿ ಅಗತ್ಯತೆ!

G-20 ಶೃಂಗಸಭೆಯಲ್ಲಿ ಭಾರತದ ಪಾಲಿಗೆ ಗೇಮ್ ಚೇಂಜರ್ ಆಗುವ ತೀರ್ಮಾನವೊಂದನ್ನು ಕೈಗೊಳ್ಳಲಾಗಿದೆ. ಚೀನಾಕ್ಕೆ ಟಕ್ಕರ್ ಕೊಡುವ ತೀರ್ಮಾನವನ್ನು ಕೈಗೊಳ್ಳುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ದೆಹಲಿಯಲ್ಲಿ ನಡೆದ ಜಿ-20 ಭಾರತದ ಪಾಲಿಗೆ ಹೇಗೆ ಗೇಮ್ ಚೇಂಜರ್ ಆಗಲಿದೆ.

ಚೀನಾದ ಪ್ರಭಾವ ತಗ್ಗಿಸುವ ತೀರ್ಮಾನ ಕೈಗೊಂಡಿದ್ದು ಹೇಗೆ..!

G-20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ರಾಷ್ಟ್ರಗಳ ನಡುವೆ ಆರ್ಥಿಕ ಕಾರಿಡಾರ್ ರಚನೆಯ ತೀರ್ಮಾನ ಕೈಗೊಳ್ಳಲಾಗಿದೆ. ಇದು ಚೀನಾದ ಬೆಲ್ಟ್ ಅಂಡ್ ರೋಡ್ ಕಾರಿಡಾರ್‌ಗೆ ಕೌಂಟರ್ ಆಗಿ ಭಾರತ ಆಸಕ್ತಿ ವಹಿಸಿ ನಿರ್ಮಿಸುತ್ತಿರುವ ಎಕನಾಮಿಕ್ ಕಾರಿಡಾರ್‌. ಇದು ವಿಶ್ವದ ಅತಿ ದೊಡ್ಡ ಎಕನಾಮಿಕ್ ಕಾರಿಡಾರ್ ಆಗಲಿದೆ. ಇದು ಆಧುನಿಕ ಮಸಾಲೆ ಪದಾರ್ಥಗಳ ಸಾಗಾಟದ ರೂಟ್‌ ಆಗಲಿದೆ.

ಮುಂದಿನ 10 ವರ್ಷದಲ್ಲಿ ಈ ಎಕನಾಮಿಕ್ ಕಾರಿಡಾರ್ ನಿರ್ಮಾಣವಾಗಲಿದೆ. ಈ ಎಕನಾಮಿಕ್ ಕಾರಿಡಾರ್ ಏಷ್ಯಾ-ಯುರೋಪ್ ಸಂಪರ್ಕಿಸಲಿದೆ. ಇಂಡಿಯಾ-ಮಿಡ್ಲ್ ಈಸ್ಟ್ ಮತ್ತು ಯುರೋಪ್ ಎಕನಾಮಿಕ್ ಕಾರಿಡಾರ್, ಎರಡು ಪ್ರತ್ಯೇಕ ಕಾರಿಡಾರ್‌ಗಳನ್ನು ಹೊಂದಿರಲಿದೆ. ಪೂರ್ವ ಕಾರಿಡಾರ್, ಇಂಡಿಯಾ ಮತ್ತು ಅರೇಬಿಯನ್ ಗಲ್ಫ್‌ ರಾಷ್ಟ್ರಗಳನ್ನು ಸಂಪರ್ಕಿಸಲಿದೆ. ಉತ್ತರ ಕಾರಿಡಾರ್ ಅರೇಬಿಯನ್ ಗಲ್ಫ್‌ ಮತ್ತು ಯುರೋಪ್ ಅನ್ನು ಸಂಪರ್ಕಿಸಲಿದೆ.

ಈ ಕಾರಿಡಾರ್‌ನಲ್ಲಿ ರೈಲು ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತೆ. ಈ ರೈಲು ಮಾರ್ಗದಲ್ಲಿ ಸರಕು ಸಾಗಣೆಯನ್ನು ಮಾಡಲಾಗುತ್ತೆ. ಈಗ ಸದ್ಯ ಸಮುದ್ರ ಮಾರ್ಗದ ಮೂಲಕ ಮಾಡುತ್ತಿರುವ ಸಾಗಣೆಯನ್ನು ರೈಲು ಮಾರ್ಗದ ಮೂಲಕ ಮಾಡಲಾಗುತ್ತೆ. ಇದರಿಂದ ಖರ್ಚು ಕಡಿಮೆಯಾಗುತ್ತೆ. ಭಾರತ, ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್ ಮತ್ತು ಯೂರೋಪ್ ನಡುವೆ ಸರಕು-ಸೇವೆಗಳ ಸಾಗಾಟ ಮಾಡಲಾಗುತ್ತೆ. ಸಮುದ್ರ ಮಾರ್ಗದ ಜೊತೆಗೆ ರೈಲು ಸಂಪರ್ಕವನ್ನು ಕೂಡ ಸರಕು ಸಾಗಾಟಕ್ಕೆ ಬಳಸಿಕೊಳ್ಳಲಾಗುತ್ತೆ.

ಈ ಕಾರಿಡಾರ್‌ನಲ್ಲಿ ರೈಲು ಮಾರ್ಗದ ಜೊತೆಗೆ ವಿದ್ಯುತ್ ಮತ್ತು ಡಿಜಿಟಲ್ ಸಂಪರ್ಕ, ಹೈಡ್ರೋಜನ್ ರಫ್ತಿಗೆ ಪೈಪ್ ಮಾರ್ಗ ನಿರ್ಮಾಣ ಮಾಡಲಾಗುತ್ತೆ. ಜೊತೆೆಗೆ ಭಾರತ- ಮಧ್ಯ ಪ್ರಾಚ್ಯ-ಯೂರೋಪ್ ರಾಷ್ಟ್ರಗಳ ಬಂದರುಗಳನ್ನು ಜೋಡಣೆ ಮಾಡಲಾಗುತ್ತೆ. ಜೊತೆಗೆ ಎಕನಾಮಿಕ್ ಕಾರಿಡಾರ್ ಮೂಲಕ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳನ್ನ ನಡೆಸಲಾಗುತ್ತೆ. ಭಾರತದಲ್ಲಿ ಉತ್ಪಾದನೆಯಾಗುವ ಮಸಾಲೆ ಪದಾರ್ಥಗಳು, ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನಗಳನ್ನು ಮಧ್ಯಪ್ರಾಚ್ಯ, ಯೂರೋಪ್‌ಗೆ ರಫ್ತು ಮಾಡಲು ಎಕನಾಮಿಕ್ ಕಾರಿಡಾರ್‌ನಿಂದ ಅನುಕೂಲವಾಗಲಿದೆ.

ಈ ಎಕನಾಮಿಕ್ ಕಾರಿಡಾರ್ ನಿರ್ಮಿಸಲು ಈ ಮೆಮೊರಂಡಮ್ ಆಫ್ ಅಂಡರ್ ಸ್ಟಾಂಡಿಂಗ್‌ಗೆ ಕಾರಿಡಾರ್ ಹಾದು ಹೋಗುವ ರಾಷ್ಟ್ರಗಳ ನಾಯಕರು ಸಹಿ ಹಾಕಿದ್ದಾರೆ. ಜೊತೆಗೆ ಮುಂದಿನ 60 ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ಕಾರಿಡಾರ್ ನಿರ್ಮಾಣ ಆ್ಯಕ್ಷನ್ ಪ್ಲ್ಯಾನ್ ಅನ್ನು ನೀಡಬೇಕು. ಇದರ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕೆಂದು ನಿರ್ಧಾರವಾಗಿದೆ.

ಈ ಎಕನಾಮಿಕ್ ಕಾರಿಡಾರ್ ಭಾರತ-ಅಮೆರಿಕಾವನ್ನ ಏನೂ ಸಂಪರ್ಕಿಸುತ್ತಿಲ್ಲ. ಯುರೋಪ್‌ನಿಂದ ಅಮೆರಿಕಾಕ್ಕೂ ಸಂಪರ್ಕಿಸಲ್ಲ. ಆದರೂ ಅಮೆರಿಕಾ, ಈ ಕಾರಿಡಾರ್ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ಏಕೆಂದರೇ, ಆ ಕಾರಿಡಾರ್ ನಿರ್ಮಾಣವಾದರೇ, ಭಾರತ ದೇಶಕ್ಕೆ ಇರಾನ್ ಹಾಗೂ ರಷ್ಯಾದ ಮೇಲಿನ ಅವಲಂಬನೆ ಕಡಿಮೆಯಾಗುತ್ತೆ. ಹೀಗಾಗಿ ಅಮೆರಿಕಾವು ರಷ್ಯಾ, ಇರಾನ್ ಜೊತೆಗೆ ವೈರತ್ವ ಸಂಬಂಧ ಇದೆ. ಹೀಗಾಗಿ ಭಾರತಕ್ಕೆ ರಷ್ಯಾ, ಇರಾನ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಈಗ ಭಾರತ-ಮಧ್ಯ ಪ್ರಾಚ್ಯ-ಯುರೋಪ್ ಕಾರಿಡಾರ್ ಬಗ್ಗೆ ಅಮೆರಿಕಾ ಆಸಕ್ತಿ ವಹಿಸುತ್ತಿದೆ. ಜೊತೆಗೆ ಏಷ್ಯಾದಲ್ಲಿ ಚೀನಾದ ಪ್ರಭಾವ ಕೂಡ ಕಡಿಮೆಯಾಗುತ್ತೆ.

ಏಕಕಾಲಕ್ಕೆ ಚೀನಾ, ರಷ್ಯಾ, ಇರಾನ್ ದೇಶಗಳ ಪ್ರಭಾವ ಕಡಿಮೆಗೊಳಿಸುವುದೇ ಈಗ ಅಮೆರಿಕಾದ ಗುರಿಯಾಗಿದೆ. ಹೀಗಾಗಿ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಇಂಡಿಯಾ-ಮಧ್ಯ ಪ್ರಾಚ್ಯ-ಯೂರೋಪ್ ಎಕನಾಮಿಕ್ ಕಾರಿಡಾರ್ ಅನ್ನು ದೊಡ್ಡ ಡೀಲ್ ಎಂದಿದ್ದಾರೆ. ಚೀನಾದ ಬೆಲ್ಟ್ ಅಂಡ್ ರೋಡ್ ಕಾರಿಡಾರ್ ಮೂಲಕ ಅನೇಕ ರಾಷ್ಟ್ರಗಳನ್ನು ಚೀನಾ, ಸಾಲದ ಸುಳಿಗೆ ಸಿಲುಕಿಸಿದೆ. ಆದರೆ, ಭಾರತಕ್ಕೆ ಯಾವುದೇ ರಾಷ್ಟ್ರಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಉದ್ದೇಶ ಇಲ್ಲ. ಬದಲಿಗೆ ಈ ಕಾರಿಡಾರ್​ನಿಂದ ಭಾರತಕ್ಕೂ ಅನುಕೂಲ ಆಗಬೇಕು, ಯುರೋಪ್‌ಗೂ ಅನುಕೂಲ ಆಗಬೇಕು ಅನ್ನುವುದಷ್ಟೇ ಭಾರತದ ಉದ್ದೇಶ.

ಭಾರತದಲ್ಲಿ 140 ಕೋಟಿ ಜನಸಂಖ್ಯೆ ಇದೆ. ಆದರೆ, ಭಾರತಕ್ಕೆ ಉನ್ನತ ಮಟ್ಟದ ಟೆಕ್ನಾಲಜಿಯ ಅಗತ್ಯತೆ ಇದೆ. ಈಗ ಯುರೋಪ್‌ಗೆ ಭಾರತವನ್ನು ತಮ್ಮ ಉತ್ಪನ್ನಗಳ ಮಾರುಕಟ್ಟೆಯಾಗಿ ಬಳಕೆ ಮಾಡಿಕೊಳ್ಳಲು ಈ ಎಕನಾಮಿಕ್ ಕಾರಿಡಾರ್‌ನಿಂದ ಸಾಧ್ಯವಾಗಲಿದೆ. ಜೊತೆಗೆ ಭಾರತದಲ್ಲಿ ಉತ್ಪಾದನೆಯಾದ ಕೃಷಿ, ಕೈಗಾರಿಕಾ ಉತ್ಪನ್ನಗಳನ್ನ ವಿದೇಶಕ್ಕೆ ಸುಲಭವಾಗಿ ರಫ್ತು ಮಾಡಲು ಈ ಕಾರಿಡಾರ್‌ನಿಂದ ಸಾಧ್ಯವಾಗಲಿದೆ. ಈ ಕಾರಿಡಾರ್‌ನಿಂದ ಭಾರತ-ಯುರೋಪ್ ನಡುವಿನ ವ್ಯಾಪಾರ ಶೇ.40 ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಈಗ ಕೆಂಪು ಸಮುದ್ರ, ಸುಯೇಜ್ ಕಾಲುವೆ ಮೂಲಕ ಈಗ ಸರಕು ಸಾಗುತ್ತಿರುವ ಮಾರ್ಗದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ಹೊಸ ಕಾರಿಡಾರ್‌ನಿಂದ ಸುಯೆಜ್ ಕಾಲುವೆ ಮಾರ್ಗ ಬಿಟ್ಟು ಸೀದಾ ಯುರೋಪ್‌ಗೆ ಸರಕು ಸಾಗಿಸಬಹುದು.

ವಿಶೇಷ ವರದಿ: ಚಂದ್ರಮೋಹನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

G-20 ಶೃಂಗಸಭೆಯಲ್ಲಿ ಚೀನಾಕ್ಕೆ ಭಾರತ ಟಕ್ಕರ್‌; ವಿಶ್ವದ ಅತಿ ದೊಡ್ಡ ಎಕನಾಮಿಕ್ ಕಾರಿಡಾರ್‌ನ ಸ್ಪೆಷಲ್ ರಿಪೋರ್ಟ್ ಇಲ್ಲಿದೆ

https://newsfirstlive.com/wp-content/uploads/2023/09/pm-modi-2.jpg

Load More