newsfirstkannada.com

G20 ಶೃಂಗಸಭೆಯಲ್ಲಿ ಕರ್ನಾಟಕದ ಬಿದ್ರಿ ಕಲೆಗೆ ವಿಶೇಷ ಸ್ಥಾನ; ಭಾರತ್ ಮಂಟಪದ ಫೋಟೋಗಳು ಇಲ್ಲಿವೆ

Share :

07-09-2023

    ಸೆಪ್ಟೆಂಬರ್ 9 ಹಾಗೂ 10ನೇ ತಾರೀಖಿನಂದು ದೆಹಲಿಯಲ್ಲಿ G20 ಶೃಂಗಸಭೆ

    ಶೃಂಗಸಭೆಯಲ್ಲಿ ವೈವಿಧ್ಯಮಯ ಸಂಸ್ಕೃತಿ, ಪರಂಪರೆಯ ಪ್ರದರ್ಶನ

    ತಮಿಳುನಾಡು ರಾಜ್ಯದ ಸ್ವಾಮಿಮಲೈ ಜಿಲ್ಲೆಯಲ್ಲಿ ಕೆತ್ತಿರುವ ಪ್ರತಿಮೆ

ನವದೆಹಲಿ: ಇಡೀ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿರುವ G20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ಸಂಪೂರ್ಣವಾಗಿ ಸಜ್ಜಾಗಿದೆ. ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ G20 ಶೃಂಗಸಭೆ ನಡೆಯಲಿದೆ. ಇಂದಿನಿಂದ ದೆಹಲಿಗೆ ವಿವಿಧ ರಾಷ್ಟ್ರದ ಗಣ್ಯರು ಹಾಗೂ ಪ್ರತಿನಿಧಿಗಳು ಮತ್ತು G20 ಆಹ್ವಾನಿತರು ಆಗಮಿಸುತ್ತಿದ್ದಾರೆ. G20 ಶೃಂಗಸಭೆಯು ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪದಲ್ಲಿ ಪ್ರಾರಂಭವಾಗುತ್ತದೆ.

ಭಾರತ್ ಮಂಟಪದಲ್ಲಿ ರೆಡಿಯಾಗಿರುವ ಅನುಭವ ಮಂಟಪ

G20 ಶೃಂಗಸಭೆಯಲ್ಲಿ ಕರ್ನಾಟಕದ ಮುಕುಟ ಬಿದ್ರಿ ಕಲೆ ಮತ್ತು ಸ್ಫೂರ್ತಿ ಅನಾವರಣಗೊಳ್ಳಲಿದೆ. ಕರ್ನಾಟಕದ ಬಸವಕಲ್ಯಾಣದ ಕಾಯಕಯೋಗಿ ಬಸವಣ್ಣನವರ ಅನುಭವ ಮಂಟಪವನ್ನು ಸ್ಪೂರ್ತಿಯಾಗಿಟ್ಟುಕೊಂಡು ಭಾರತ್​​ ಮಂಟಪ ನಿರ್ಮಾಣ ಮಾಡಲಾಗಿದೆ.

ಇದನ್ನು ಓದಿ: ಉಕ್ಕಿನ ಕೋಟೆಯಾಗಿ ಬದಲಾದ ದೆಹಲಿ; G20 ಶೃಂಗಸಭೆಗೆ ಸಜ್ಜಾದ ಟಾಪ್‌ 10 ಫೋಟೋ ಇಲ್ಲಿವೆ ನೋಡಿ

ಇದರ ಜೊತೆಗೆ ಬೀದರ್​​ನ ವಿಶೇಷ ಕಲೆ ಬಿದ್ರಿ ಕಲೆ ವಿಶ್ವದ ನಾಯಕರ ಗಮನ ಸೆಳೆಯಲಿದೆ. ಬಿದ್ರಿ ಕಲೆಯನ್ನ ವಿಶ್ವದ ಮುಂದೆ ಪರಿಚಯಿಸಲು ವಿಶೇಷ ಮಳಿಗೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಬಿದ್ರಿ ಕಲೆಯನ್ನು ವಿದೇಶಿ ಗಣ್ಯರು ಖರೀದಿಸಿ ತಮ್ಮ ದೇಶಕ್ಕೆ ಕೊಂಡೊಯ್ಯಬಹುದಾಗಿದೆ.

ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಭಾರತ ಮಂಟಪ ತಯಾರಿಗೆ 2,700 ಕೋಟಿ ರೂಪಾಯಿ ಖರ್ಚಾಗಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಂಟಪ ಉದ್ಘಾಟನೆ ಮಾಡಿದ್ದರು. ಈಗ ಭಾರತ ಮಂಟಪದಲ್ಲೇ G-20 ಶೃಂಗಸಭೆ ಆಯೋಜನೆ ಮಾಡಲಾಗಿದೆ.

ಇನ್ನೂ ಭಾರತ್​ ಮಂಟಪದ ಎದುರು ಈಗಾಗಲೇ ತಮಿಳುನಾಡು ರಾಜ್ಯದ ಸ್ವಾಮಿಮಲೈ ಜಿಲ್ಲೆಯಲ್ಲಿ ಕೆತ್ತಿರುವ ನಟರಾಜ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಅಷ್ಟಧಾತು ಬಳಸಿ 18 ಟನ್ ತೂಕದ ನಟರಾಜ ವಿಗ್ರಹ ನಿರ್ಮಾಣ ಮಾಡಿದ್ದಾರೆ. ವಿದೇಶಿ ಗಣ್ಯರಿಗೆ ನಟರಾಜ‌ ವಿಗ್ರಹದ ಮೂಲಕ ಭಾರತದ ಕಲೆ, ಪರಂಪರೆಯ ಪರಿಚಯ ಮಾಡಿಸುವುದಕ್ಕೆ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲ

G20 ಶೃಂಗಸಭೆಯಲ್ಲಿ ಕರ್ನಾಟಕದ ಬಿದ್ರಿ ಕಲೆಗೆ ವಿಶೇಷ ಸ್ಥಾನ; ಭಾರತ್ ಮಂಟಪದ ಫೋಟೋಗಳು ಇಲ್ಲಿವೆ

https://newsfirstlive.com/wp-content/uploads/2023/09/g-20-3.jpg

Load More