‘ಒಂದೇ ನೆಲ.. ಒಂದೇ ಕುಟುಂಬ.. ಒಂದೇ ಭವಿಷ್ಯ’!
ಪ್ರಧಾನಿ ಮೋದಿ ಆಸನದ ಮುಂದೆ ಗಮನಸೆಳೆದ ಭಾರತ
ಭಾರತದ ಇತಿಹಾಸ, ಕಲೆ, ಸಂಸ್ಕೃತಿಯ ಅನಾವರಣ
ಎರಡು ದಿನಗಳ ಮಟ್ಟಿಗೆ ವಿಶ್ವದ ರಾಜಧಾನಿಯಾಗಿ ಬದಲಾಗಿರೋ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೃಂಗಸಭೆಯ ಸಂಭ್ರಮ ಮನೆಮಾಡಿದೆ. ಮೊದಲ ದಿನದ ಶೃಂಗಸಭೆಯ ಸಡಗರಕ್ಕೆ ಸಾಕ್ಷಿಯಾದ ನವದೆಹಲಿಯಲ್ಲಿ ನವನವೀನ ಬೆಳವಣಿಗಳಿಗೆ ಬುನಾದಿ ಹಾಕಲಾಗಿದೆ. ಒನ್ ಅರ್ತ್, ಒನ್ ಫ್ಯಾಮಿಲಿ ಘೋಷಣೆಗೆ 20 ರಾಷ್ಟ್ರಗಳ ಸಹಮತ ವ್ಯಕ್ತವಾಗಿದೆ.
ನವದೆಹಲಿ ಕೇವಲ ಭಾರತದ ರಾಷ್ಟ್ರ ರಾಜಧಾನಿಯಲ್ಲ ವಿಶ್ವದ ರಾಜಧಾನಿ. 100ನೇ ಜಿ20 ಶೃಂಗಸಭೆಯ ರುವಾರಿಯಾಗಿರೋ ಭಾರತ, ನವದೆಹಲಿಯನ್ನ ವಿಶ್ವದ ರಾಜಧಾನಿಯಾಗಿ ಬದಲಿಸಿದೆ. ಅತಿರಥ-ಮಹಾರಥರ ಆಗಮನದಿಂದ ಉತ್ಸಾಹದ ಪುಳಕವೇ ಉಕ್ಕಿರೋ ದೆಹಲಿಯಲ್ಲಿ ಹೊಸ ಮನ್ವಂತರದ ಹಾದಿಗೆ ಮುನ್ನುಡಿ ಸಿಕ್ಕಂತಾಗಿದೆ. ಶೃಂಗಸಭೆಯ ಸಂಭ್ರಮ ಸಡಗರ ದೇಶಕ್ಕೆ ಮತ್ತೊಂದು ಮನ್ವಂತರದ ಭಾಷ್ಯ ಬರೆದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕಳೆಗಟ್ಟಿದ ಶೃಂಗಸಭೆಯ ಸಂಭ್ರಮ!
ದಿಗ್ಗಜರ ಅಪೂರ್ವ ಸಂಗಮಕ್ಕೆ ‘ಭಾರತ ಮಂಟಪ’ ಲಕ ಲಕ!
ಮೊದಲ ದಿನದ ಜಿ20 ಶೃಂಗಸಭೆಗೆ ಸಾಕ್ಷಿಯಾದ ನವದೆಹಲಿಯ ಭಾರತ ಮಂಟಪ 20 ದೇಶಗಳ ದಿಗ್ಗಜರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯ್ತು. ಅತಿರಥ-ಮಹಾರಥರಿಗೆ ಆತ್ಮೀಯತೆಯ ಆಲಿಂಗನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅತಿಥಿ ದೇವೋಭವ ಎಂಬ ಆತಿಥ್ಯ ನೀಡಿದರು.
‘ಒಂದೇ ನೆಲ.. ಒಂದೇ ಕುಟುಂಬ.. ಒಂದೇ ಭವಿಷ್ಯ’!
‘ವಸುಧೈವ ಕುಟುಂಬಕಂ’ ಎಂದು ಸಾರಿದ ನಮೋ!
ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಭಾರತದ ಅತಿಥ್ಯದಲ್ಲಿ ಮೊದಲ ದಿನದ ಜಿ-20 ಶೃಂಗಸಭೆ ಯಶಸ್ವಿಯಾಗಿ ನಡೆಯಿತು. ಭಾರತ ಮಂಟಪದಲ್ಲಿ ದೇಶದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ, ಗತ ವೈಭವದ ಪ್ರದರ್ಶನವಾಯ್ತು. ಒರಿಸ್ಸಾದ ಕೋನಾರ್ಕ್ ಚಕ್ರದ ಆಕೃತಿಯ ಮುಂದೆ ಪ್ರಧಾನಿ ಮೋದಿ ಜಿ-20 ರಾಷ್ಟ್ರಗಳ ಮುಖ್ಯಸ್ಥರನ್ನ ಬರ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕೋನಾರ್ಕ್ ಚಕ್ರದ ಬಗ್ಗೆ ಪ್ರಧಾನಿ ಮೋದಿ ಖುದ್ದಾಗಿ ವಿವರಿಸಿದ್ರು. ಇನ್ನೂ ಮುಖ್ಯ ದ್ವಾರದಲ್ಲೇ ಒಂದೇ ನೆಲ, ಒಂದೇ ಕುಟುಂಬ, ಒಂದೇ ಭವಿಷ್ಯ ಎಂಬ ಘೋಷವ್ಯಾಕ್ಯದೊಂದಿಗೆ ಮೋದಿ ವಸುಧೈವ ಕುಟುಂಬಕಂನ ಮಹತ್ವವನ್ನ ವಿದೇಶಿ ನಾಯಕರಿಗೆ ಸಾರಿ ಸಾರಿ ಹೇಳಿದರು.
ಮೋದಿ ಆಸನದ ಮುಂದೆ ಗಮನಸೆಳೆದ ‘ಭಾರತ’!
ದೇಶದಾದ್ಯಂತ ಇಂಡಿಯಾ ಭಾರತವಾಗಿ ಬದಲಾಗುವ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುವ ಹೊತ್ತಲ್ಲೇ ಜಿ20 ಶೃಂಗಸಭೆ ಮೂಲಕ ಮೋದಿ ದೊಡ್ಡದೊಂದು ಸಿಗ್ನಲ್ ರವಾನಿಸಿದ್ರು. ಮಧ್ಯಾಹ್ನ ವಿವಿಧ ದೇಶಗಳ ನಾಯಕರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ ವೇಳೆ ಕಂಡು ಬಂದ ದೃಶ್ಯವೊಂದು ಮತ್ತೊಂದು ಚರ್ಚೆಗೆ ಮುನ್ನುಡಿ ಬರೆದಂತಿತ್ತು. ಶೃಂಗಸಭೆಯಲ್ಲಿ ಮೋದಿ ಆಸನದ ನಾಮಫಲಕದ ಮೇಲೆ ಇಂಡಿಯಾ ಎಂಬ ಹೆಸರಿನ ಬದಲು ಭಾರತ ಅಂತ ಬರೆದಿರೋದು ಹೆಸರು ಬದಲಾವಣೆಯೆ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿತ್ತು.
ಜಿ20 ಶೃಂಗಕ್ಕೆ ಸೇರ್ಪಡೆಯಾದ ಆಫ್ರಿಕನ್ ಯೂನಿಯನ್!
ದೆಹಲಿಯಲ್ಲಿ ನಡೆದ ಜಿ20ಯ 100ನೇ ಶೃಂಗಸಭೆ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ.. ಸೆಷನ್ ಆರಂಭದಲ್ಲೇ ಜಿ-20 ಕೂಟದಲ್ಲಿ ಆಫ್ರಿಕನ್ ಯೂನಿಯನ್ಗೆ ಶಾಶ್ವತ ಸದಸ್ಯತ್ವ ನೀಡುವ ತೀರ್ಮಾನವನ್ನು ಮೋದಿ ಘೋಷಿಸಿದ್ದಾರೆ. ಬಳಿಕ ಆಫ್ರಿಕನ್ ಯೂನಿಯನ್ ಅಧ್ಯಕ್ಷರನ್ನು ವಿದೇಶಾಂಗ ಸಚಿವ ಜೈಶಂಕರ್ ಕರೆತಂದು ಜಿ-20 ನಾಯಕರ ವೇದಿಕೆಯಲ್ಲಿ ಕೂರಿಸಿದ್ರು. ಆಫ್ರಿಕನ್ ಯೂನಿಯನ್ ಜಿ20ಗೆ ಸೇರ್ಪಡೆಯಾಗಿದ್ದರಿಂದ ಜಿ-20 ಕೂಟವನ್ನು ಜಿ21 ಎಂದು ಮರು ನಾಮಕರಣ ಮಾಡಬೇಕಾಗಬಹುದು. ಇದಕ್ಕೆ ಎಲ್ಲ ರಾಷ್ಟ್ರಗಳ ಒಪ್ಪಿಗೆ ಇದೆ ಎಂದು ಭಾವಿಸುತ್ತೇನೆ ಎಂದು ಮೋದಿ ತಿಳಿಸಿದ್ರು.
ಸ್ನೇಹಿತರೇ, ಈಗಷ್ಟೇ ಒಂದು ಖುಷಿಯ ಸುದ್ದಿ ಸಿಕ್ಕಿದೆ. ನಮ್ಮ ತಂಡದ ಹಾರ್ಡ್ ವರ್ಕ್ ನಿಂದಾಗಿ ಮತ್ತು ನಿಮ್ಮೆಲ್ಲರ ಸಹಕಾರದಿಂದಾಗಿ ನವದೆಹಲಿ ಜಿ-20 ನಾಯಕರ ಶೃಂಗಸಭೆಯ ಘೋಷಣೆಗೆ ಸಹಮತ ಮೂಡಿದೆ. ನನ್ನ ಪ್ರಸ್ತಾವ ಏನೆಂದರೇ, ಈ ನಾಯಕರ ಘೋಷಣೆಯನ್ನು ಅಂಗೀಕರಿಸಬೇಕು. ಒಟ್ಟಿನಲ್ಲಿ ಸಡಗರ, ಸಂಭ್ರಮ, ಹೊಸ ಉತ್ಸಾಹಕ್ಕೆ ಸಾಕ್ಷಿಯಾದ ಶೃಂಗಸಭೆ 20 ದೇಶಗಳ ನಾಯಕರ ಮಧ್ಯೆ ಹೊಸ ಬೆಸುಗೆ ಬೆಸೆಯಿತು. ಭಾರತದ ಅತಿಥಿ ಸತ್ಕಾರ, ಅಚ್ಚುಕಟ್ಟಾದ ತಯಾರಿ ವಿದೇಶಿ ನಾಯಕರ ಮೆಚ್ಚುಗೆಗೂ ಪಾತ್ರವಾಯ್ತು.
Been a productive morning at the G20 Summit in Delhi. pic.twitter.com/QKSBNjqKTL
— Narendra Modi (@narendramodi) September 9, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ