newsfirstkannada.com

VIDEO- ರಾಷ್ಟ್ರಪತಿ ಔತಣ ಕೂಟ.. ಸೀರೆಯುಟ್ಟು ಮಿಂಚಿದ ವಿಶ್ವದ ಗಣ್ಯ ಮಹಿಳೆಯರು, ಯಾಱರು?

Share :

Published September 10, 2023 at 7:43am

    ದೆಹಲಿಯಲ್ಲಿ ನಿನ್ನೆಯಿಂದ ನಡೆಯುತ್ತಿರುವ G-20 ಶೃಂಗಸಭೆ

    ಸೀರೆಯುಟ್ಟು ಗಮನ ಸೆಳೆದ PM ಫ್ಯೂಮಿಯೋ ಕಿಶಿಡಾ ಪತ್ನಿ

    G-20 ಶೃಂಗಸಭೆಯಲ್ಲಿ ವಿಶ್ವದ ಗಣ್ಯರು ಭಾಗಿ, ಮಹತ್ವದ ಚರ್ಚೆ

ನವದೆಹಲಿ: ನಿನ್ನೆಯಿಂದ G-20 ಶೃಂಗಸಭೆಯು ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಭಾಗವಹಿಸಲು ವಿಶ್ವದ ಗಣ್ಯರು ಭಾರತಕ್ಕೆ ಆಗಮಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಸದ್ಯ G-20 ಶೃಂಗಸಭೆಯಲ್ಲಿ ಭಾಗವಹಿಸಿದ ಕೆಲ ವಿದೇಶಿ ಗಣ್ಯ ಮಹಿಳೆಯರು ಭಾರತದ ಸಂಪ್ರದಾಯದಂತೆ ಸೀರೆಯನ್ನುಟ್ಟು ಗಮನ ಸೆಳೆದಿದ್ದಾರೆ.

ದೆಹಲಿಯ ಕಲ್ಯಾಣ ಮಂಡಪಂನಲ್ಲಿ ಮೊದಲನೇ ದಿನದ G-20 ಶೃಂಗಸಭೆ ಯಶಸ್ವಿಯಾಯಿತು. G-20ಯಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಅನಾವರಣಗೊಂಡಿದೆ. ವಿಶೇಷ ಅಂದರೆ ಈ ಔತಣಕೂಟದಲ್ಲಿ ಹಲವು ವಿದೇಶಿ ಗಣ್ಯರು ಸೀರೆಯುಟ್ಟ ಕಂಗೊಳಿಸಿದ್ದಾರೆ.

ನಿನ್ನೆ ರಾತ್ರಿ ವಿಶ್ವ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣ ಕೂಟ ಏರ್ಪಡಿಸಿದ್ದರು. ಈ ಔತಣಕ್ಕೆ ಆಗಮಿಸಿದ ಜಪಾನ್​ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರ ಪತ್ನಿ ಯುಕೊ ಕಿಶಿಡಾ, ಭಾರತೀಯ ನಾರಿಯಂತೆ ಹಚ್ಚ ಹಸಿರ ರೇಷ್ಮೆ ಸೀರೆಯನ್ನುಟ್ಟು ಗಮನ ಸೆಳೆದರು. ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌಥ್ ಪತ್ನಿ ಕೋಬಿತಾ ಜುಗ್ನೌಥ್ ಕೂಡ ಸೀರೆ ಧರಿಸಿ ಮಿಂಚಿರುವುದು ವಿಶೇಷ ಎನಿಸಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO- ರಾಷ್ಟ್ರಪತಿ ಔತಣ ಕೂಟ.. ಸೀರೆಯುಟ್ಟು ಮಿಂಚಿದ ವಿಶ್ವದ ಗಣ್ಯ ಮಹಿಳೆಯರು, ಯಾಱರು?

https://newsfirstlive.com/wp-content/uploads/2023/09/PM_MODI-2.jpg

Load More