newsfirstkannada.com

PHOTO: G20 ಶೃಂಗಸಭೆ ಅತಿಥಿಗಳಿಗೆ ರೆಡಿಯಾಗಿರೋ ಊಟದ ಮೆನುವಿನಲ್ಲಿ ಏನೇನಿದೆ ಗೊತ್ತಾ?

Share :

08-09-2023

    G20 ಶೃಂಗಸಭೆಗೆ ಜಗತ್ತಿನ ಪ್ರಮುಖ ರಾಷ್ಟ್ರಗಳಿಂದ ಗಣ್ಯರ ಆಗಮನ

    ಸೆಪ್ಟೆಂಬರ್ 9, 10ನೇ ರಂದು ದೆಹಲಿಯಲ್ಲಿ ನಡೆಯುವ G20 ಶೃಂಗಸಭೆ

    ಅತಿಥಿಗಳಿಗೆ ಪಂಚ ತಾರಾ ಹೋಟೆಲ್​ನಲ್ಲಿ ಭರ್ಜರಿ ಭೋಜನ ವ್ಯವಸ್ಥೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರೋ G20 ಶೃಂಗಸಭೆ ಊಟದ ಮೆನುವಿನ ವಿಚಾರದಲ್ಲೂ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸೆಪ್ಟೆಂಬರ್ 9 ಮತ್ತು 10 ರಂದು G20 ಶೃಂಗಸಭೆ ನಡೆಯಲಿದ್ದು, ಸುರಕ್ಷತೆ ಹಾಗೂ ಭದ್ರತಾ ದೃಷ್ಟಿಯಿಂದ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಲಾಗಿದೆ. ಈ ಏಳು ಸುತ್ತಿನ ಭದ್ರಕೋಟೆಯ ಜೊತೆಗೆ ಅತಿಥಿಗಳಿಗೆ ವಿಶೇಷವಾದ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ.

ವಿವಿಧ ರಾಷ್ಟ್ರದ ಗಣ್ಯರು ಹಾಗೂ ಪ್ರತಿನಿಧಿಗಳನ್ನು ಸ್ವಾಗತಿಸುವ ಸಲುವಾಗಿ ಕುತುಬ್ ಮಿನಾರ್‌ನಿಂದ ದೆಹಲಿಯ ಜಾಮಾ ಮಸೀದಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬಣ್ಣ ಬಣ್ಣದ ಲೈಟಿಂಗ್ಸ್​ ನೋಡುಗರ ಕಣ್ಮನ ಸೆಳೆಯುತ್ತಿದೆ. G20 ಶೃಂಗಸಭೆಯು ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪದಲ್ಲಿ ಪ್ರಾರಂಭವಾಗುತ್ತದೆ.

ಈ ಶೃಂಗಸಭೆಯ ಪ್ರಯುಕ್ತ ನವದೆಹಲಿಯಲ್ಲಿರೋ ಐಷಾರಾಮಿ ಹೊಟೇಲ್​ಗಳಲ್ಲಿ ಕೊಠಡಿಗಳು ಬುಕ್ಕಿಂಗ್‌ ಆಗಿವೆ. ಈ ಹೊಟೇಲ್​ಗಳಲ್ಲಿ ಎಲ್ಲಾ ರೀತಿ ಸಿದ್ಧತೆಗಳನ್ನು ಮಾಡಲಾಗಿದೆ. ಇದರ ಜೊತೆ ಬೇರೆ ಬೇರೆ ರಾಷ್ಟ್ರದಿಂದ ಬಂದಂತಹ ಗಣ್ಯರಿಗೆ ಈಗಾಗಲೇ ಬಗೆ ಬಗೆಯ ಖಾದ್ಯಗಳ ಪಟ್ಟಿಯನ್ನು ತಯಾರಿಸಲಾಗಿದೆ.

ಇದನ್ನು ಓದಿ: G20 ಶೃಂಗಸಭೆಯಲ್ಲಿ ಕರ್ನಾಟಕದ ಬಿದ್ರಿ ಕಲೆಗೆ ವಿಶೇಷ ಸ್ಥಾನ; ಭಾರತ್ ಮಂಟಪದ ಫೋಟೋಗಳು ಇಲ್ಲಿವೆ

ಇದರ ಜೊತೆಗೆ ವಿದೇಶದಿಂದ ಬರುವ ಅತಿಥಿಗಳಿಗೆ ಚಿನ್ನ, ಬೆಳ್ಳಿ ತಟ್ಟೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಪಂಚ ತಾರಾ ಹೋಟೆಲ್​ನಲ್ಲಿ ಈಗಾಗಲೇ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ.

ಹೀಗಾಗಿ ವಿದೇಶಿ ಗಣ್ಯರಿಗೆ ಸಿರಿಧಾನ್ಯದ ಭೋಜನ, ರಾಗಿ ದೋಸೆ, ರಾಗಿ ಲಡ್ಡು, ಸಿರಿಧಾನ್ಯದ ಥಾಲಿ, ಪಲಾವ್, ಇಡ್ಲಿ, ಪಡ್ಡು, ರಾಜಸ್ಥಾನದ ದಾಲ್, ಬೆಂಗಾಲಿ ರಸಗುಲ್ಲಾ, ಕರ್ನಾಟಕದ ಮಸಾಲೆ ದೋಸೆಯ ಭಕ್ಷ್ಯ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಭಾರತೀಯ ಸಾಂಪ್ರದಾಯಿಕ ಅಡುಗೆ ಎಂದರೆ ಅದು ಭಾರತೀಯ ಥಾಲಿ. ಈ ಮೆನುವಿನ ಪಟ್ಟಿಯಲ್ಲಿ ಭಾರತೀಯ ಥಾಲಿ ಸೇರಿಸಿಕೊಂಡಿದ್ದಾರೆ. ಇದರ ಜೊತೆಗೆ ಪರೋಟಾ ಹಾಗೂ ಗುಲ್ಕಾ ಲಾಡೂ ಸಹ ಇದೆ.

ಹೀಗೆ ವಿದೇಶದಿಂದ ಬಂದ ಅತಿಥಿಗಳಿಗೆ ಬಗೆ ಬಗೆಯಾದ ತಿಂಡಿಗಳು ಹಾಗೂ ಭರ್ಜರಿ ಔತಣಕೂಟವನ್ನು ಏರ್ಪಡಿಸಿದ್ದಾರೆ.

ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಆಸ್ಟ್ರೇಲಿಯನ್ ಪ್ರಧಾನಿ ಆಂಥೋನಿ ಅಲ್ಬನೀಸ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಇನ್ನಿತರ ಗಣ್ಯರು ಭಾಗಿಯಾಗಲಿದ್ದಾರೆ. ಶೃಂಗಸಭೆಯ ಹಿನ್ನೆಲೆಯಲ್ಲಿ ಗಣ್ಯರಿಗೆ ವಿಶೇಷ ಔತಣಕೂಟವನ್ನು ಆಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: G20 ಶೃಂಗಸಭೆ ಅತಿಥಿಗಳಿಗೆ ರೆಡಿಯಾಗಿರೋ ಊಟದ ಮೆನುವಿನಲ್ಲಿ ಏನೇನಿದೆ ಗೊತ್ತಾ?

https://newsfirstlive.com/wp-content/uploads/2023/09/g20-17.jpg

Load More