newsfirstkannada.com

PHOTOS: ನಾನೊಬ್ಬ ಹಿಂದು.. ಟೀಕಿಸುವವರಿಗೆ ಭಾರತದಲ್ಲೇ ಉತ್ತರ ಕೊಟ್ಟ ಬ್ರಿಟನ್ ಪ್ರಧಾನಿ; ಮಾಡಿದ್ದೇನು?

Share :

10-09-2023

    ಅಕ್ಷರಧಾಮ ದೇವಸ್ಥಾನದಲ್ಲಿ ರಿಷಿ ಸುನಕ್, ಅಕ್ಷತಾ ಮೂರ್ತಿ ದಂಪತಿ

    ರುದ್ರಾಕ್ಷಿ, ಭಗವದ್ಗೀತೆ ಪ್ರತಿ ಮತ್ತು ಹನುಮಾನ್ ಚಾಲೀಸಾ ಉಡುಗೊರೆ

    ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ ರಿಷಿ

ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಭಾರತದ ಪ್ರವಾಸದ ವೇಳೆ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.  G20 ಶೃಂಗಸಭೆಯ ನಿಮಿತ್ತ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದ ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿತ್ತು. ಶೃಂಗಸಭೆಯಲ್ಲಿ ಭಾಗಿಯಾದ ರಿಷಿ ಸುನಕ್ ಇಂದು ತಮ್ಮ ಪತ್ನಿ ಅಕ್ಷತಾ ಮೂರ್ತಿಯವರ ಜೊತೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

G20 ಶೃಂಗಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್, ನಾನೊಬ್ಬ ಹೆಮ್ಮೆಯ ಹಿಂದು. ನಾನು ಹೀಗೆ ಬೆಳೆದಿದ್ದೇನೆ, ನಾನು ಹೀಗೇ ಇದ್ದೇನೆ ಮತ್ತು ಮುಂದೆಯೂ ಹೀಗೆ ಇರುತ್ತೇನೆ. ಮುಂದಿನ ಒಂದೆರಡು ದಿನಗಳಲ್ಲಿ ದೆಹಲಿಯಲ್ಲಿ ಇರುವ ಸಮಯದಲ್ಲಿ ಮಂದಿರಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿಕೊಂಡಿದ್ದರು. ರಿಷಿ ಸುನಕ್ ಕೊಟ್ಟ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದಾದ ಬಳಿಕ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿಯವರು ಭೇಟಿ ಕೊಟ್ಟಿದ್ದಾರೆ. ಇನ್ನೂ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಅಗತ್ಯವಾದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು.

ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರನ್ನು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಸ್ವಾಗತಿಸಿದ್ದರು. ರುದ್ರಾಕ್ಷಿ, ಭಗವದ್ಗೀತೆಯ ಪ್ರತಿ ಮತ್ತು ಹನುಮಾನ್ ಚಾಲೀಸಾ ನೀಡಿ ಗೌರವಿಸಿದ್ದಾರೆ. ವಿಶೇಷ ಎಂದರೆ ರಿಷಿ ಸುನಕ್ ಅವರು ದೇವಸ್ಥಾನದೊಳಗೆ ಬರಿಗಾಲಿನಲ್ಲಿ ಹೋಗುವ ಹಿಂದೂ ಸಂಪ್ರದಾಯಕ್ಕೆ ಬದ್ಧರಾಗಿದ್ದರು.

ಈ ವೇಳೆ ರಿಷಿ ಸುನಕ್ ದಂಪತಿ ದೇವಸ್ಥಾನದಲ್ಲಿ ಆರತಿ ಬೆಳಗಿ, ಅಕ್ಷರಧಾಮದ ಸಂತರನ್ನು ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಇನ್ನೂ ದೇವಸ್ಥಾನಗಳಿಗೆ ಭೇಟಿ ಕೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಗ್ರೀನ್​ ಕ್ಲೈಮೇಟ್​​ ಫಂಡ್​​ಗೆ ಯುಕೆ ಪ್ರಧಾನಿ ರಿಷಿ ಸುನಾಕ್​​ ಬದ್ಧತೆಯ ನೆರವು ಘೋಷಿಸಿದ್ದಾರೆ. ಭಾರತದ ಹವಾಮಾನ ವೈಪರೀತ್ಯ, ಹವಾಮಾನ ಬದಲಾವಣೆ ಕುರಿತು ನಿನ್ನೆಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಇದರ ಬೆನ್ನಲ್ಲೇ ದಾಖಲೆಯ ಮೊತ್ತವನ್ನ ನೀಡುವುದಾಗಿ ಸುನಾಕ್ ಘೋಷಿಸಿದ್ದಾರೆ. ಅದರಂತೆ ಗ್ರೀನ್ ಕ್ಲೈಮೇಟ್ ಫಂಡ್‌ಗೆ 2 ಬಿಲಿಯನ್ ಡಾಲರ್ ಯುಕೆ ನೀಡಲಿದೆ ಅಂತ ರಿಷಿ ಸುನಾಕ್ ಹೇಳಿದ್ದಾರೆ. ಈ ಮೂಲಕ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಯುಕೆ ಅತಿದೊಡ್ಡ ಫಂಡ್​​ ರಿಲೀಸ್​​ ಮಾಡಿದೆ.

ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆದ G20 ಶೃಂಗಸಭೆ ಯಶಸ್ವಿಯಾಗಿ ಮುಗಿದಿದೆ. ಶೃಂಗಸಭೆಯ ಹಿನ್ನೆಲೆ ದೆಹಲಿಗೆ ವಿವಿಧ ರಾಷ್ಟ್ರದ ಗಣ್ಯರು ಹಾಗೂ ಪ್ರತಿನಿಧಿಗಳು ಮತ್ತು G20 ಆಹ್ವಾನಿತರು ಆಗಮಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ನಾನೊಬ್ಬ ಹಿಂದು.. ಟೀಕಿಸುವವರಿಗೆ ಭಾರತದಲ್ಲೇ ಉತ್ತರ ಕೊಟ್ಟ ಬ್ರಿಟನ್ ಪ್ರಧಾನಿ; ಮಾಡಿದ್ದೇನು?

https://newsfirstlive.com/wp-content/uploads/2023/09/rishi-sunak-12-1.jpg

Load More