newsfirstkannada.com

G20 Summit: ಭಾರತ ಮಂಟಪದಲ್ಲಿ ಜಾಗತಿಕ ಸಮಸ್ಯೆಗಳ ಕುರಿತು ಮಹಾಮಂಥನ.. ಇಂದಿನ ಶೃಂಗಸಭೆಯ ವೇಳಾಪಟ್ಟಿ ಹೀಗಿದೆ..

Share :

09-09-2023

    ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ G-20 ಶೃಂಗಸಭೆ

    ಇನ್ನೇನು ಕೆಲ ಗಂಟೆಗಳಲ್ಲಿ 18ನೇ G-20 ಶೃಂಗಸಭೆ ಆರಂಭ

    ಇಂದು ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರ ಸಮಾಗಮ

ಇವತ್ತು ರಾಷ್ಟ್ರ ರಾಜಧಾನಿ ದೆಹಲಿ, ವಿಶ್ವದ ರಾಜಧಾನಿಯಾಗಿ ಬದಲಾಗಿದೆ. ಎರಡು ದಿನಗಳ ಮಟ್ಟಿಗೆ ಭಾರತದ ರಾಜಧಾನಿಯನ್ನ ವಿಶ್ವ ನಾಯಕರ ಸಮಾಗಮಕ್ಕೆ ವೇದಿಕೆ ಆಗಿದೆ.. ಈ ಮಧ್ಯೆ ನಿನ್ನೆ ಅಮೆರಿಕಾ ಅಧ್ಯಕ್ಷ ಬೈಡನ್​​ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಿದ್ದಾರೆ.

ಬೆಳಕಿನ ಸೌಂದರ್ಯ ಹೊತ್ತು ನಿಂತ ರಾಷ್ಟ್ರ ರಾಜಧಾನಿ. ಇಂದಿನಿಂದ ಎರಡು ದಿನಗಳ ಕಾಲ ಇಡೀ ಜಗತ್ತಿನ ಚಿತ್ತ ಭಾರತದತ್ತ ನೆಟ್ಟಿರಲಿದೆ. ಈ ಭಾರತ ಮಂಟಪದಲ್ಲಿ ಜಾಗತಿಕ ಸಮಸ್ಯೆಗಳ ಕುರಿತು ಮಹಾಮಂಥನ ನಡೆಯಲಿದೆ. ಇದೇ ಮೊದಲ ಬಾರಿಗೆ ದೆಹಲಿಯ ಈ ವೇದಿಕೆಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರ ಸಮಾಗಮ ಆಗ್ತಿದೆ. ಇನ್ನು, ಭಾರತದ ಕರೆಯ ಮೇರೆಗೆ ಫಸ್ಟ್​ಟೈಂ ಆಫ್ರಿಕನ್ ಯೂನಿಯನ್​ ಕೂಡ ಶೃಂಗದಲ್ಲಿ ಭಾಗಿ ಆಗಿದೆ.

ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲು ಸಜ್ಜಾದ ದೆಹಲಿ!

ಇನ್ನೇನು ಕೆಲ ಗಂಟೆಗಳಲ್ಲಿ 18ನೇ G-20 ಶೃಂಗಸಭೆ ಆರಂಭ ಆಗಲಿದೆ. 19 ಪ್ರತ್ಯೇಕ ದೇಶಗಳು ಮತ್ತು ಯುರೋಪಿಯನ್​ ಒಕ್ಕೂಟ ಈ ಶೃಂಗಕ್ಕೆ ಕಳಶ ಪ್ರಾಯವಾಗಿದೆ. G20ನ ಸದಸ್ಯ ರಾಷ್ಟ್ರಗಳ ಜಾಗತಿಕ GDPಯ ಸರಿಸುಮಾರು 85 ಪ್ರತಿಶತ ಭಾಗ ಹೊಂದಿವೆ. 75 ಪ್ರತಿಶತಕ್ಕಿಂತ ಹೆಚ್ಚು ಜಾಗತಿಕ ವ್ಯಾಪಾರ ವಹಿವಾಟು ಹೊಂದಿದ್ದು, ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಭೂಭಾಗವನ್ನ ಪ್ರತಿನಿಧಿಸುತ್ತವೆ.

ಜಿ-20 ಶೃಂಗಸಭೆ ಹಿನ್ನೆಲೆ ನವದೆಹಲಿಗೆ ನಿನ್ನೆ ಸಂಜೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಗಮಿಸಿದ್ದಾರೆ.​​ ಅಮೆರಿಕ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ ಬೈಡನ್​​ರನ್ನ ಕೇಂದ್ರ ಸಚಿವ ವಿ.ಕೆ.ಸಿಂಗ್‌ ಸ್ವಾಗತಿಸಿದ್ರು. ಬಳಿಕ ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬೈಡನ್​​, ಜಾಗತಿಕ ಜ್ವಲಂತ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮೋದಿ-ಬೈಡನ್​​​ ಮೀಟಿಂಗ್​​

ಮೂವತ್ತೊಂದು ಎಂಕ್ಯೂ-9 ರೀಪರ್‌ ಡ್ರೋನ್‌ ಖರೀದಿ, ಇತ್ತೀಚೆಗಷ್ಟೇ ಅಮೆರಿಕ ಸಂಸತ್ತು ಅನುಮೋದಿಸಿದ ಎಚ್‌ಎಎಲ್‌ ಸಹಯೋಗದಲ್ಲಿ ಎಫ್‌-516 ಜೆಟ್‌ ಎಂಜಿನ್‌ ಉತ್ಪಾದನೆ ಒಪ್ಪಂದ, 5ಜಿ ಮತ್ತು 6ಜಿ ತಂತ್ರಜ್ಞಾನ ವರ್ಗಾವಣೆ ಕುರಿತು ಬೈಡನ್‌-ಮೋದಿ ಚರ್ಚೆ ನಡೆಸಿದ್ದಾರೆ.. ಮುಂದಿನ 5 ವರ್ಷಗಳು ಭಾರತದಲ್ಲಿ ಅಮೆರಿಕ 400 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲಿದೆ.. ಸಾರಿಗೆ ವಲಯವನ್ನು ಡಿಕಾರ್ಬೊನೈಸ್ ಮಾಡುವ ಪ್ರಾಮುಖ್ಯತೆ ಪ್ರಸ್ತಾಪಿಸಿದ ಬೈಡನ್, ಭಾರತದಲ್ಲಿ ವಿದ್ಯುತ್ ಆಧಾರಿತ ವಾಹನಗಳ ಚಾಲನೆ ಬಗ್ಗೆ ಶ್ಲಾಘಿಸಿದ್ರು. ಬಾಹ್ಯಾಕಾಶದಲ್ಲಿ ತಂತ್ರಜ್ಞಾನ ಸಹಕಾರ ಕುರಿತು ಇಬ್ಬರ ನಡುವೆ ಚರ್ಚೆ ಆಗಿದೆ.

ಉಭಯ ನಾಯಕರ ನಡುವೆ ಒಟ್ಟು ನಲವತ್ತೈದು ನಿಮಿಷಗಳ ಕಾಲ ಚರ್ಚೆ ನಡೆದಿದೆ. ಬೈಡನ್ ಭೇಟಿ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಬೈಡನ್​ರನ್ನ ನಂಬರ್​ 7, ಲೋಕ ಕಲ್ಯಾಣ ಮಾರ್ಗಕ್ಕೆ ಸ್ವಾಗತಿಸಿದ್ದಕ್ಕೆ ಸಂತೋಷವಾಗಿದೆ ಅಂತ ತಿಳಿಸಿದ್ದಾರೆ. ಭಾರತ ಮತ್ತು USA ನಡುವಿನ ಆರ್ಥಿಕ ಮತ್ತು ಜನರಿಂದ ಜನರ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಹಲವಾರು ವಿಷಯಗಳನ್ನು ನಾವು ಚರ್ಚಿಸಲು ಸಾಧ್ಯವಾಗಿದೆ. ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವು ಜಾಗತಿಕ ಒಳಿತನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಅಂತ ಮೋದಿ ಬಣ್ಣಿಸಿದ್ದಾರೆ. ಅಲ್ಲದೆ, ಕ್ವಾಡ್ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವಂತೆ ಬೈಡನ್​ರನ್ನ ಮೋದಿ ಆಹ್ವಾನಿಸಿದ್ದಾರೆ.

 ಇಂದಿನ ಶೃಂಗಸಭೆ ವೇಳಾಪಟ್ಟಿ

09:20 ರಿಂದ 10:20ರ ವರೆಗೆ ಭಾರತ ಮಂಟಪಕ್ಕೆ ಆಗಮನ
10:30 ರಿಂದ 1:30 ರವರೆಗೆ ಅಧಿವೇಶನ 1 – ಒನ್ ಅರ್ಥ್
1:30 ರಿಂದ 3:00ರ ವರೆಗೆ – ನಾಯಕರ ದ್ವಿಪಕ್ಷಿಯ ಸಭೆಗಳು
ಮ 3:00 ರಿಂದ 4:45 ರವರೆಗೆ – ಸೆಷನ್ 2 – ಒಂದು ಕುಟುಂಬ
4:45-5:30ರವರೆಗೆ – ನಾಯಕರ ನಡುವೆ ವಿವಿಧ ಸಭೆಗಳು
7:00 ರಿಂದ 9:15ರ ನಡುವೆ ರಾಷ್ಟ್ರಪತಿಯಿಂದ ಔತಣಕೂಟ
ರಾತ್ರಿ 9:15ರ ನಂತರ ತಾವಿರುವ ಹೋಟೆಲ್​​​ಗಳಿಗೆ ವಾಪಸ್​​

ಬೆಳಗ್ಗೆ 09:20 ರಿಂದ 10:20ರ ವರೆಗೆ ಭಾರತ ಮಂಟಪಂಗೆ ನಾಯಕರು ಆಗಮಿಸ್ತಾರೆ. 10:30 ರಿಂದ 1:30ರ ವರೆಗೆ ಅಧಿವೇಶನ ಒಂದು ಒನ್ ಅರ್ಥ್ ಎಂಬ ವಿಷಯದಡಿ ಚರ್ಚೆ ನಡೆಸ್ತಾರೆ. ಮಧ್ಯಾಹ್ನ 1:30 ರಿಂದ 3:00ರ ವರೆಗೆ ವಿವಿಧ ದೇಶಗಳ ನಾಯಕರ ದ್ವಿಪಕ್ಷಿಯ ಸಭೆಗಳು ನಡೆಯಲಿವೆ. ಮಧ್ಯಾಹ್ನ 3 ರಿಂದ 4:45 ರವರೆಗೆ 2ನೇ ಸೆಷನ್ ಒಂದು ಕುಟುಂಬ ಎಂಬ ವಿಷಯದಡಿ ಆರಂಭ ಆಗಲಿದೆ. ಸಂಜೆ 4:45-5:30ರವರೆಗೆ ನಾಯಕರ ನಡುವೆ ವಿವಿಧ ಸಭೆಗಳಿವೆ. 7:00 ರಿಂದ 9:15ರ ನಡುವೆ ರಾಷ್ಟ್ರಪತಿಯಿಂದ ವಿಶ್ವನಾಯಕರಿಗೆ ಔತಣಕೂಟ ಆಯೋಜನೆ ಆಗಿದೆ. ಬಳಿಕ ರಾತ್ರಿ 9:15ರ ನಂತರ ತಾವಿರುವ ಹೋಟೆಲ್​​​ಗಳಿಗೆ ಎಲ್ಲಾ ನಾಯಕರು ವಾಪಸ್​​ ಆಗಲಿದ್ದಾರೆ.

ಒಟ್ಟಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆಯ ಸಂಭ್ರಮ ಮನೆಮಾಡಿದ್ದು ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ. ವಿದೇಶಿ ನಾಯಕರ ಮುಂದೆ ದೇಶದ ವೈಭವನ್ನ ಸಾರಿ ಭಾರತ ನೆಲದ ಸೊಗಡನ್ನ ಬಿತ್ತರಿಸಲು ಕೇಂದ್ರ ಸರ್ಕಾರ ಅಣಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

G20 Summit: ಭಾರತ ಮಂಟಪದಲ್ಲಿ ಜಾಗತಿಕ ಸಮಸ್ಯೆಗಳ ಕುರಿತು ಮಹಾಮಂಥನ.. ಇಂದಿನ ಶೃಂಗಸಭೆಯ ವೇಳಾಪಟ್ಟಿ ಹೀಗಿದೆ..

https://newsfirstlive.com/wp-content/uploads/2023/09/G20-5.jpg

Load More