ಜೈಲರ್ ಅಬ್ಬರಕ್ಕೆ ಬಾಕ್ಸ್ಆಫೀಸ್ ಪೀಸ್ ಪೀಸ್
ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ ಗದ್ದರ್
ಓ ಮೈ ಗಾಡ್ 2 ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು..?
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ. ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 ಚಿತ್ರ. ಬಾಲಿವುಡ್ ನಟ ಸನ್ನಿ ಡಿಯೋಲ್ ‘ಗದರ್ 2’. ಈ ಮೂರು ಚಿತ್ರಗಳು ಇದೀಗ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿವೆ. ತಲೈವಾ ಹೊಸ ಸಿನಿಮಾ ಥಿಯೇಟರ್ಗೆ ಬಂದರೆ ಸಾಕು ನೂಕು ನುಗ್ಗಲು, ಹೌಸ್ ಫುಲ್ ಶೋ ಪಕ್ಕಾ. 72 ನೇ ವಯಸ್ಸಿನಲ್ಲೂ ತೆರೆ ಮೇಲೆ ಮಿಂಚುವ ರಜಿನಿ ಹೊಸ ಸ್ಟೈಲ್, ಅದ್ಬುತ ನಟನೆಗೆ ಎಂಥವರೂ ಕೂಡ ಫಿದಾ ಆಗಿ ಬಿಡುತ್ತಾರೆ. ಅಷ್ಟರ ಮಟ್ಟಿಗೆ ಫ್ಯಾನ್ಸ್ ಬಳಗ ಸೂಪರ್ ಸ್ಟಾರ್ಗೆ ಇದ್ದಾರೆ.
ಈ ಚಿತ್ರವು 10 ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಜೈಲರ್ ಚಿತ್ರವು ಆಗಸ್ಟ್ 10ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಇನ್ನು ಭಾರತದಲ್ಲಿ ಈ ಚಿತ್ರ ರಿಲೀಸ್ ಆದ ಮೊದಲ ದಿನ 48.35 ಕೋಟಿ, ಎರಡನೇ ದಿನ 25.75, ಮೂರನೇ ದಿನ 34.35, ನಾಲ್ಕನೇ ದಿನ 42.20 ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ ಇಡೀ ವಿಶ್ವಾದ್ಯಂತ ನಾಲ್ಕು ದಿನದ ಕಲೆಕ್ಷನ್ 300 ಕೋಟಿ ಗಳಿಸಿಕೊಂಡಿದೆ.
‘ಗದರ್ 2’ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು..?
ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ತಮ್ಮ 66ನೇ ವಯಸ್ಸಿನಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸನ್ನು ಕಂಡಿದ್ದಾರೆ. ‘ಗದರ್ 2’ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದ ಇಡೀ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. ಅಷ್ಟರ ಮಟ್ಟಿಗೆ ಗದರ್- 2 ಚಿತ್ರ ಕಮಾಲ್ ಮಾಡುತ್ತಿದೆ. ಆಗಸ್ಟ್ 11ರಂದು ಗದರ್- 2 ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಈ ಚಿತ್ರವು ಮೊದಲನೇ ದಿನ ಗಳಿಸಿದ ಕಲೆಕ್ಷನ್ 40.00 ಕೋಟಿ ರೂ, ಎರಡನೇ ಹಾಗೂ ಮೂರನೇ ದಿನ 45.00 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನ ನಟ ಸನ್ನಿ ಡಿಯೋಲ್ ಅವರ ಬಹುದಿನಗಳ ಕನಸೊಂದು ನನಸಾಗಿದೆ.

ಇನ್ನು, ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಓ ಮೈ ಗಾಡ್ 2 ಚಿತ್ರವು ಆಗಸ್ಟ್ 11ರಂದು ತೆರೆಕಂಡಿತ್ತು. ಆದರೆ ಆ ಸಿನಿಮಾವು ‘ಗದರ್- 2’ ಚಿತ್ರದ ಅರ್ಧದಷ್ಟು ಕಲೆಕ್ಷನ್ ಕೂಡ ಮಾಡಿಲ್ಲ. ಮೊದಲ ದಿನ 4.25 ಕೋಟಿ, ಎರಡನೇ ದಿನ 15.30 ಕೋಟಿ, ಮೂರನೇ ದಿನ 15 ಕೋಟಿ ಗಳಿಸಿದೆ. ಒಟ್ಟಾರೆಯಾಗಿ ಈ ಮೂರು ಚಿತ್ರಗಳು ಬಾಕ್ಸ್ ಆಫೀಸ್ ಸಖತ್ ಹವಾ ಕ್ರಿಯೇಟ್ ಮಾಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ