ಕೊನೆಯುಸಿರು ನಿಲ್ಲಿಸಿದ ಗದ್ದರ್
ಪ್ರಜಾ ಗಾಯಕ 'ಗದ್ದರ್' ಇನ್ನಿಲ್ಲ!
ಯಾರು ಈ ಕ್ರಾಂತಿಕಾರಿ ಕವಿ ಗದ್ದರ್?
ಇತ್ತೀಚೆಗೆ ದೇಶದಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಗಾದ ವಿಷಯ ಎಂದರೆ ನಕ್ಸಲ್ ಮತ್ತು ಮಾವೋವಾದಿ ಚಳುವಳಿ. ಕಾರಣ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಾದರಿಯಲ್ಲೇ ನರೇಂದ್ರ ಮೋದಿ ಹತ್ಯೆಗೂ ನಕ್ಸಲೀಯರು ಸಂಚು ರೂಪಿಸಿದ್ದರು ಎನ್ನಲಾದ ವರದಿ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಡೆದಿದೆ ಎನ್ನಲಾದ ಕೇಸ್ನಲ್ಲಿ ಆಂಧ್ರದ ಪ್ರಮುಖ ಮಾವೋವಾದಿ ಚಿಂತಕ, ಕ್ರಾಂತಿಕವಿ ಎಂದೇ ಖ್ಯಾತರಾದ ವರವರ ರಾವ್ ಅವರನ್ನು ಬಂಧಿಸಲಾಗಿದೆ. ಇವರ ಬಂಧನ ಖಂಡಿಸಿ ಇಡೀ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆದವು. ಅದರಲ್ಲೂ ಆಂಧ್ರ, ತೆಲಂಗಾಣದಲ್ಲಂತೂ ಎಡ ಮತ್ತು ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದವು. ಈ ಹೋರಾಟದ ನೇತೃತ್ವ ವಹಿಸಿದ್ದು ಇದೇ ಕ್ರಾಂತಿಕಾರಿ ಕವಿ, ಜನಪ್ರಿಯ ಗಾಯಕ ಗದ್ದರ್. ಇದೇ ಗದ್ದರ್ ಕೊನೇ ಹೋರಾಟ.
ಸದ್ಯ ದಶಕಗಳ ಕಾಲ ದೇಶದ ಬಡವರು, ದೀನ ದಲಿತರ ಪರ ಧ್ವನಿ ಎತ್ತಿದ್ದ ಕ್ರಾಂತಿಯ ದನಿ ತನ್ನ ಸದ್ದು ನಿಲ್ಲಿಸಿದೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಶತಮಾನದ ಮಾವೋವಾದಿ ಚಳುವಳಿಯ ಕೊನೆಯ ಕೊಂಡಿ ಗದ್ದರ್ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಕೊನೆಯುಸಿರೆಳೆದಿದ್ದಾರೆ.
ಗದ್ದರ್ ಕೊನೆಯುಸಿರು
ಹಿರಿಯ ಹೋರಾಟಗಾರ ಗದ್ದರ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಅನಾರೋಗ್ಯದ ವಿಚಾರ ತಿಳಿದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಸೇರಿದಂತೆ ಹಲವು ಗಣ್ಯರು ಮನೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಇತ್ತೀಚೆಗೆ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಚಿಕಿತ್ಸೆ ಪಡೆಯುತ್ತಿದ್ದಾಗ ಇಹಲೋಕ ತ್ಯಜಿಸಿದ್ದಾರೆ. ಗದ್ದರ್ ಅವರು ಶ್ವಾಸಕೋಶ ಮತ್ತು ಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದರು. ಇವರ ಆರೋಗ್ಯ ಸಂಪೂರ್ಣ ಹದಗೆಟ್ಟಿತು, ಎಷ್ಟೇ ಪ್ರಯತ್ನಿಸಿದರೂ ಉಳಿಯಲಿಲ್ಲ ಎಂದು ಅಪೋಲೋ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ತಿಳಿಸಿದೆ.
ಗದ್ದರ್ ಮನೆಯತ್ತ ಅಭಿಮಾನಿಗಳ ಸಾಗರ
ಸದ್ಯ ಗದ್ದರ್ ಮೃತದೇಹವನ್ನು ಸಿಕಂದರಾಬಾದಿನ ಭೂಚೇವಿ ನಗರದ ತನ್ನ ನಿವಾಸದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ನಿವಾಸಕ್ಕೆ ಸಂಬಂಧಿಕರು ಮತ್ತು ಅಭಿಮಾನಿಗಳು ಅಪಾರ ಪ್ರಮಾಣದಲ್ಲಿ ಆಗಮಿಸುತ್ತಲೇ ಇದ್ದಾರೆ. ಗದ್ದರ್ ಪೀಪಲ್ಸ್ ವಾರ್, ಮಾವೋವಾದಿ ಮತ್ತು ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಈ ಮೂಲಕ ತಮ್ಮ ಧ್ವನಿಯಿಂದಲೇ ಕೋಟ್ಯಾಂತರ ಜನರಿಗೆ ಸ್ಫೂರ್ತಿಯಾದವರು.
ಯಾರು ಈ ಗದ್ದರ್?
ಗದ್ದರ್ ಹುಟ್ಟಿದ್ದು ತುಪ್ರಾನ್ ಎಂಬಲ್ಲಿ, ಅದು 1949ರಲ್ಲಿ. ಇವರ ಮೂಲ ಹೆಸರು ಗುಮ್ಮಡಿ ವಿಠ್ಠಲ್ ರಾವ್. ತಮ್ಮ ಬಾಲ್ಯದ ಶಿಕ್ಷಣವನ್ನು ಹೈದರಾಬಾದ್‌ನಲ್ಲೇ ಪೂರ್ಣಗೊಳಿಸಿದರು. 1975ರಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ್ದರು. ಪತ್ನಿ ಹೆಸರು ವಿಮಲಾ. ಗದ್ದರ್ ದಂಪತಿಗೆ ಮೂವರು ಮಕ್ಕಳು.
ಜನ ನಾಟ್ಯ ಮಂಡಳಿ ಶುರು ಮಾಡಿದ್ದ ಗದ್ದರ್
ಸರ್ಕಾರದ ದಮನಕಾರಿ ನೀತಿಗಳನ್ನು ಪ್ರಶ್ನಿಸಲು ಶುರುವಾಗಿದ್ದೇ ಜನ ನಾಟ್ಯ ಮಂಡಳಿ. ಗದ್ದರ್ ಜನ ನಾಟ್ಯ ಮಂಡಳಿ ಸಂಸ್ಥಾಪಕರು. ಸಾರ್ವಜನಿಕ ಸಮಸ್ಯೆಗಳ ವಿರುದ್ಧ ಬೀದಿ ಹೋರಾಟ ಮಾತ್ರವಲ್ಲ, ಬದಲಿಗೆ ತಮ್ಮ ಹಾಡುಗಳಿಂದಲೇ ಸರ್ಕಾರಗಳನ್ನು ನಡುಗಿಸಿದ್ದು ಗದ್ದರ್. ಈ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದರು.
ಏನಿದು ಜನ ನಾಟ್ಯ ಮಂಡಳಿ?
ಯಾರ ಪ್ರತಿಭಟನೆ ಹಕ್ಕನ್ನು ದಮನ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಸರ್ಕಾರವನ್ನು ಪ್ರಶ್ನಿಸುವ ಧ್ವನಿಗಳನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ. ಹೋರಾಟಗಾರರ ಮೇಲೆ ಗುಂಡು ಹಾರಿಸುವುದು, ಪ್ರಶ್ನಿಸುವ ಜನರ ಧ್ವನಿಯನ್ನು ಅಡಗಿಸುವುದು, ತುಳಿತಕ್ಕೊಳಗಾದವರ ಪರ ಹೋರಾಡುವ ಮಾನವೀಯ ಜೀವಿಗಳ ಹಕ್ಕು ಕಸಿಯುವುದು ಸಲ್ಲದು. ದೇಶ ನಿಂತಿರುವುದೆ ಬಡವ ಮತ್ತು ಕೂಲಿ ಕಾರ್ಮಿಕರ ಮೇಲೆ. ಸರ್ಕಾರ ಶೋಷಿತರ ಮತ್ತು ಬಡವರ ಏಳಿಗೆಗಾಗಿ ಕೆಲಸ ಮಾಡಬೇಕು. ಸರ್ಕಾರದ ವಿರುದ್ಧ ಹೋರಾಡಲು ಜನ ನಾಟ್ಯ ಮಂಡಳಿ ಒಂದು ಪ್ರಬಲ ಸಾಧನ ಎಂಬುದು ಗದ್ದರ್ ಅಭಿಪ್ರಾಯ.
ಪ್ರತ್ಯೇಕ ತೆಲಂಗಾಣ ಹೋರಾಟದಲ್ಲಿ ಗದ್ದರ್
ದಶಕಗಳ ಹೋರಾಟ, ತ್ಯಾಗ, ಬಲಿದಾನದ ಬಳಿಕ ಭಾರತದ 29ನೇ ರಾಜ್ಯವಾಗಿ ತೆಲಂಗಾಣ ಉದಯಿಸಿದೆ. ತೆಲಂಗಾಣ ರಾಜ್ಯವಾಗಿ ಅಸ್ತಿತ್ವಕ್ಕೆ ಬರೋ ಮುನ್ನ ಪ್ರತಿಭಟನೆ ಕಾವು ಬಹಳ ಜೋರಾಗಿತ್ತು. 1953ರಲ್ಲಿ ಹೊಸ ರಾಜ್ಯ ಸ್ಥಾಪನೆ ಆಯ್ತು. ಅಂದಿನಿಂದಲೇ ಪ್ರತ್ಯೇಕತೆ ಕೂಗು ಇದ್ದೇ ಇತ್ತು. ಆಗಿನ ಕೇಂದ್ರ ಸರ್ಕಾರ ಭಾಷಾ ಆಧಾರದ ಮೇಲೆ ಆಂಧ್ರಪ್ರದೇಶ ಸ್ಥಾಪನೆಗೆ ಒಪ್ಪಿಗೆ ಸೂಚಿಸಿತ್ತು. ತೆಲಂಗಾಣ ಪ್ರಾಂತ್ಯದ ಜನರಿಗೆ ತಮ್ಮ ಅಸ್ತಿತ್ವದ ಬಗ್ಗೆ ಚಿಂತೆ ಶುರುವಾಯಿತು. ಇದಕ್ಕೆ ಕಾರಣವೇ ಗದ್ದರ್ ಹಾಡುಗಳು.
ಗದ್ದರ್ ಇಡೀ ತೆಲಂಗಾಣ ಪ್ರಾಂತ್ಯದಲ್ಲಿ ಹಗಲು ರಾತ್ರಿಯೆನ್ನದೇ ಓಡಾಟ ನಡೆಸಿದರು. ಜನ ನಾಟ್ಯ ಮಂಡಳಿಯಿಂದ ಸಾವಿರಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ತನ್ನ ಹಾಡುಗಳ ಮೂಲಕವೇ ತೆಲಂಗಾಣದ ಮಹತ್ವವನ್ನು ಜಗತ್ತಿಗೆ ಸಾರಿದರು. ಇದರ ಪರಿಣಾಮ ತೆಲಂಗಾಣದ ಜನರ ಆಶೋತ್ತರಗಳ ಈಡೇರಿಸುವ ಭರವಸೆ ಜತೆಗೆ 1955ರಂದು ಆಂಧ್ರದ ವಿಧಾನಸಭೆಯಲ್ಲಿ ಹೊಸ ರಾಜ್ಯ ಸ್ಥಾಪನೆ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿತ್ತು. ಬಳಿಕ ತೆಲಂಗಾಣಕ್ಕೆ ಸೂಕ್ತ ಸ್ಥಾನಮಾನದ ಭರವಸೆ ಸಿಕ್ಕ ಮೇಲೆ ಅಖಂಡ ಆಂಧ್ರಕ್ಕೆ ನಾಂದಿ ಹಾಡಲಾಯಿತು.
ಒಮ್ಮೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಂಪುಟದಲ್ಲಿ ತೆಲಂಗಾಣ ಪ್ರಾಂತ್ಯದವರಿಗೆ ಪ್ರಾಮುಖ್ಯತೆ ಸಿಗಲಿಲ್ಲ. ಹೀಗಾಗಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಕೆ. ಚಂದ್ರಶೇಖರ್ ರಾವ್ ಉಗ್ರ ಹೋರಾಟ ನಡೆಸಿದರು. ಅಂದು ಕೆಸಿಆರ್ಗೆ ಸಾಥ್ ನೀಡಿದ್ದು ಇದೇ ಗದ್ದರ್. ಗದ್ದರ್ನಿಂದಲೇ ಇಡೀ ಚಳುವಳಿಗೆ ತೂಕ ಸಿಕ್ಕಿತ್ತು. ಗದ್ದರ್ ತಮ್ಮ ಹಾಡುಗಳ ಮೂಲಕ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಚಳುವಳಿ ಕಟ್ಟಿದರು. ತೆಲುಗು ರಾಜ್ಯಗಳಲ್ಲಿ ತಮ್ಮ ಹಾಡುಗಳ ಮೂಲಕ ಆಡಳಿತ ವರ್ಗದ ವಿರುದ್ಧ ಧ್ವನಿ ಎತ್ತಿದರು. ಇಳಿ ವಯಸ್ಸಿನ ಗದ್ದರ್ ಹಾಡು ಕೇಳಲು ಎಷ್ಟೋ ಬಾರಿ ಲಕ್ಷಾಂತರ ಜನ ಸೇರುತ್ತಾರೆ. ಇವರ ಹಾಡುಗಳು ಅಷ್ಟರಮಟ್ಟಿಗೆ ಜನರ ಮೇಲೆ ಪರಿಣಾಮ ಬೀರಿದ್ದವು.
ಬದುಕುಳಿದಿದ್ದ ಗದ್ದರ್
ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) ಪೀಪಲ್ಸ್ ವಾರ್. ಇದು 90ರ ದಶಕದಲ್ಲಿ ತೆಲಂಗಾಣ ಪ್ರಾಂತ್ಯದಲ್ಲಿ ಅತೀ ಹೆಚ್ಚು ಸಕ್ರಿಯವಾಗಿದ್ದ ನಿಷೇಧಿತ ಸಂಘಟನೆ. ಇದರ ಸಾಂಸ್ಕೃತಿಕ ಸಂಘಟನೆಯೇ ಜನ ನಾಟ್ಯ ಮಂಡಳಿ. ಗದ್ದರ್ ತೆಲಂಗಾಣ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರವಲ್ಲ ದಲಿತ ಹತ್ಯೆಗಳ ವಿರುದ್ಧ ಅವಿರತ ಹೋರಾಟ ನಡೆಸಿದರು. ಈ ಹೋರಾಟದಲ್ಲಿ ಜನ ನಾಟ್ಯ ಮಂಡಳಿ ಪಾತ್ರ ದೊಡ್ಡದು. ದಶಕಗಳ ಹಿಂದೆ ಮಾವೋವಾದಿ ಹೋರಾಟ ಬಹಳ ವಿಸ್ತಾರವಾಗಿ ಬೆಳೆದಿತ್ತು. ಕಾಡು ದಾಟಿ ವಿಶ್ವವಿದ್ಯಾಲಯ, ರಾಜಕೀಯ ರಂಗಗಳಿಗೂ ವ್ಯಾಪಿಸಿತ್ತು. ಇದರ ಪರಿಣಾಮ ಅಂದು ಕಂಡ ಕಂಡಲ್ಲಿ ಮಾವೋವಾದಿಗಳಿಗೆ ಪೊಲೀಸರು ಗುಂಡಿಟ್ಟರು. ಈ ವೇಳೆ ಗದ್ದರ್ ಪೊಲೀಸರ ಕ್ರೌರ್ಯದ ವಿರುದ್ಧ ಹೋರಾಡಿದ್ದರು. ಕೊನೆಗೂ ಸರ್ಕಾರವೇ ಗದ್ದರ್ಗೆ ಗುಂಡಿಕ್ಕಿ ಎಂದು ಆದೇಶಿಸಿತ್ತು. ಹೀಗಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಗದ್ದರ್ ಭೂಗತ ಆಗಬೇಕಾಯ್ತು. 1997ರಲ್ಲಿ ಗದ್ದರ್ ಮೇಲೆ ಗುಂಡಿನ ದಾಳಿ ನಡೆಯಿತು. ಅಂದು ಪೊಲೀಸರು ನಡೆಸಿದ ಗುಂಡಿನ ದಾಳಿಯಿಂದ ಪಾರಾದರು. ನಂತರ ಮುಖ್ಯವಾಹಿನಿಗೆ ಬಂದು ನನ್ನ ಹಾಡುಗಳು ಗುಂಡುಗಳಂತೆ ಸರ್ಕಾರವನ್ನು ಹೊಡೆಯುತ್ತಿವೆ. ಹೀಗಾಗಿ ಸರ್ಕಾರ ಪೊಲೀಸರ ಮೂಲಕ ನನ್ನ ಧ್ವನಿಯನ್ನು ನಿಲ್ಲಿಸಲು ಎದುರು ನೋಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು. ಬಳಿಕ ಕಾಲ ಕಳೆದಂತೆ ಮಾವೋವಾದಿ ಹೋರಾಟದ ತೀವ್ರತೆ ಕಡಿಮೆಯಾಯ್ತು. ಗದ್ದರ್ ಕೂಡ ಮಾವೋವಾದಿ ಚಳುವಳಿಯಿಂದ ದೂರ ಉಳಿದರು.
ತನ್ನ ಜೀವನದ ಕೊನೇ ಕಾಲದಲ್ಲಿ ಗದ್ದರ್ ಮಾವೋವಾದಿಗಳೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿರಲಿಲ್ಲ. ಹೀಗಿದ್ದರೂ ಮಾವೋವಾದಿಗಳ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡಿದ್ದ ಆಪರೇಷನ್ ಗ್ರೀನ್ ಹಂಟ್ ವಿರುದ್ಧ ಗದ್ದರ್ ಇದ್ದರು.
ಮಹಿಳೆಯರ ಮೇಲಿನ ದೌರ್ಜನ್ಯ, ಅಸಮಾನತೆ, ರೈತರ ಆತ್ಮಹತ್ಯೆ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಸಂವಿಧಾನದ ಮೇಲಿನ ನಿರಂತರ ದಾಳಿ, ಬಡತನ, ನಿರುದ್ಯೋಗ, ಅನಾರೋಗ್ಯ, ಮೂಲ ಸೌಕರ್ಯ ಕೊರತೆ ಹೀಗೆ ಹಲವು ಸಮಸ್ಯೆಗಳು ಇಡೀ ದೇಶವನ್ನು ಕಾಡುತ್ತಿದ್ದವು. ಇದಕ್ಕಾಗಿ ತನ್ನ ಕೊನೆ ಉಸಿರುವವರೆಗೂ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಆಶಯಗಳ ಉಳಿವಿಗಾಗಿ ಧ್ವನಿ ಎತ್ತಿದವರು ಗದ್ದರ್.
ಲೇಖಕರು: ಗಣೇಶ್ ನಚಿಕೇತು, ನ್ಯೂಸ್ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ