ನಕಲಿ RSS ಪ್ರಚಾರದ ವ್ಯಕ್ತಿಯನ್ನ ಸೃಷ್ಟಿಸಿರುವ ಆರೋಪ
ಚೈತ್ರಾ ಕುಂದಾಪುರಳನ್ನು ಬಂಧಿಸಿದ ಬೆಂಗಳೂರು ಸಿಸಿಬಿ ಪೊಲೀಸರು
ಈ ಪ್ರಕರಣದಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರ್ ಹೆಸರು
ಚಿಕ್ಕಮಗಳೂರು: ನಕಲಿ RSS ಪ್ರಚಾರದ ವ್ಯಕ್ತಿಯನ್ನ ಸೃಷ್ಟಿಸಿರುವ ಆರೋಪದಡಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಗಗನ್ ಕಡೂರ್ನನ್ನು ವಿಮುಕ್ತಿಗೊಳಿಸಲಾಗಿದೆ.
ಬಿಜೆಪಿಗೆ ಟಿಕೆಟ್ ಕೊಡಿಸುತ್ತೇನೆ ಎಂಬ ಆರೋಪದಡಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಈ ಪ್ರಕರಣದಲ್ಲಿ ಗಗನ್ ಕಡೂರ್ ಹೆಸರು ಕೂಡ ಕೇಳಿಬಂದಿದೆ. ಈ ವಂಚನೆ ಪ್ರಮುಖ ಆರೋಪಿಯಾಗಿಯು ಆತನ ಹೆಸರು ಕೇಳಿಬರುತ್ತಿದ್ದು, ಇದೀಗ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಗಗನ್ನನ್ನು ಉಚ್ಚಾಟನೆ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಎಂಬವರಿಗೆ ಚೈತ್ರಾ ಕುಂದಾಪುರ 5 ಕೋಟಿ ರೂಪಾಯಿ ವಂಚಿಸಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಗಗನ್ ಕಡೂರ್ RSS ಹಿರಿಯ ಪ್ರಚಾರಕನೆಂದು ವಿಶ್ವನಾಥ್ ಎಂಬವರ ಹೆಸರನ್ನು ಸೃಷ್ಟಿಸಿ ಅವರ ಮೂಲಕ ಶಿಫಾರಸ್ಸು ಮಾಡೋದಾಗಿ ಭರವಸೆ ನೀಡಿದ್ದನು ಎನ್ನಲಾಗಿದೆ. ಚಿಕ್ಕಮಗಳೂರಲ್ಲಿ ವಿಶ್ವನಾಥ್ ಜೀ ಅಂತಾ ಬೇರೊಬ್ಬನನ್ನ ಭೇಟಿ ಮಾಡಿಸಿ ವಂಚಿಸಿದ್ದನು ಎಂದು ವಂಚನೆಗೊಳಗಾದ ಗೋವಿಂದ ಬಾಬು ದೂರಿನಲ್ಲಿ ಹೇಳಿದ್ದರು. ಇದೀಗ ಚೈತ್ರಾ ಕುಂದಾಪುರ ಸಿಸಿಬಿ ವಶವಾದ ಬೆನ್ನಲ್ಲೇ ಮತ್ತು ಗಗನ್ ಕಡೂರ್ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಂತೆ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಆತನನ್ನು ವಿಮುಕ್ತಿಗೊಳಿಸಿದ್ದಾರೆ.
ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ರಮೇಶ್ ಮತ್ತು ಧನರಾಜ್
ಇನ್ನು ಈ ಪ್ರಕರಣದಲ್ಲಿ ರಮೇಶ್ ಮತ್ತು ಧನರಾಜ್ ಹೆಸರು ಕೇಳಿಬಂದಿದ್ದು, ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ನಿಮಗೂ ಅನುಕೂಲ ಆಗುತ್ತೆ ಎಂದಿದ್ದಕ್ಕೆ ನಾವು ಒಪ್ಪಿಕೊಂಡಿದ್ದೀವಿ ಎಂದು ವಿಡಿಯೋ ಮಾಡಿ ಪ್ರತಿಕ್ರಿಯೆ ಧನರಾಜ್ ಮತ್ತು ರಮೇಶ್ ಹಳೆಯ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋದಲ್ಲಿ ಇದು ಇಷ್ಟೊಂದು ದೊಡ್ಡ ಮಟ್ಟದ ವ್ಯವಹಾರ ಎಂದು ನಮಗೆ ಗೊತ್ತಿರಲಿಲ್ಲ. ನಾನು ಹೇಳಿದಾಗಿ ನೀವು ನಟಿಸಿ ಎಂದು ಹೇಳಿದ್ರು. ನಾವು ಹಾಗೇ ಮಾಡಿದ್ವಿ ಅಷ್ಟೇ.
ದೊಡ್ಡ ವ್ಯವಹಾರ ಬಗ್ಗೆ ಮಾಹಿತಿ ಇಲ್ಲ. ಎಲ್ಲಾ ಕ್ರಿಯೆಟ್ ಮಾಡಿದ್ದು ಗಗನ್. ಆ ರೀತಿ ನಾವು ನಟನೆ ಮಾಡಿದ್ವಿ ಅಷ್ಟೇ. ಟಿಕೆಟ್ ನೀಡಿದ್ರೆ ಅವರು ಗೆಲ್ಲುತ್ತಾರೆ.
ಆಗ ನಿಮಗೂ ಹೆಲ್ಫ್ ಆಗುತ್ತದೆ ಎಂದಿದ್ರು ಎಂದು ರಮೇಶ್ ಮತ್ತು ಧನರಾಜ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ