ಹುಬ್ಬಳ್ಳಿ-ಧಾರವಾಡ ಪಾಲಿಕೆ ಆವರಣದಲ್ಲಿ ವಿಜಯೋತ್ಸವ!
ಹೈಕೋರ್ಟ್ ಸೂಚನೆಯಂತೆ ಗಣೇಶೋತ್ಸವಕ್ಕೆ ಪಾಲಿಕೆ ಅನುಮತಿ
ಆದರೆ 18 ಷರತ್ತುಗಳನ್ನು ಪಾಲಿಕೆ ವಿಧಿಸಿದ್ದಕ್ಕೆ ಅಸಮಾಧಾನ
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸ್ತಿದ್ದ ಸಂಘಟನೆಗಳಿಗೆ ಹೈಕೋರ್ಟ್ ಸಿಹಿ ನೀಡಿದೆ. ಮುಸ್ಲಿಂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಗಣೇಶ ಪ್ರತಿಷ್ಠಾಪನೆಗೆ ಅಸ್ತು ಎಂದಿದೆ. ಹೈಕೋರ್ಟ್ ಆದೇಶಕ್ಕೂ ಕ್ಯಾರೇ ಎನ್ನದ ಕೆರೆ ದಡ ಆಟವಾಡ್ತಿದ್ದ. ಹುಬ್ಬಳ್ಳಿ-ಧಾರವಾಡ ಪಾಲಿಕೆ ಕೊನೆಗೂ ತಲೆ ಬಾಗಿ ಪರ್ನಿಷನ್ ಕೊಟ್ಟಿದೆ. ಆದ್ರೆ ಕೆಲ ಷರತ್ತುಗಳ ಮೇಲೆ ಆದೇಶ ನಿಂತಿದೆ.
ಗಣೇಶ ಪ್ರತಿಷ್ಠಾಪನೆಗೆ ಹಸಿರು ನಿಶಾನೆ ನೀಡಿದ ಹೈಕೋರ್ಟ್
ಹುಬ್ಬಳ್ಳಿಯಲ್ಲಿ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಜಟಾಪಟಿ ನಡೆದಿತ್ತು. ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ್ದರು. ಶಾಸಕ ಬೆಲ್ಲದ್ಗೆ ನಿನ್ನೆ ಬೆಳಗ್ಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಭಾಗಿಯಾದ ಬಳಿಕ ಪ್ರತಿಭಟನೆ ಮತ್ತಷ್ಟು ಕಾವು ಪಡೆದಿತ್ತು. ಬಿಜೆಪಿ ಕಾರ್ಯಕರ್ತರ ಜೊತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಭಾಗಿಯಾಗಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ರು. ಇದೀಗ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ಫಲಸಿಕ್ಕಿದೆ.

ಇತ್ತ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಗಲಾಟೆ ನಡೆಯುತ್ತಿದ್ರೆ ಅತ್ತ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಠರಾವಿಗೆ ತಡೆಯಾಜ್ಞೆ ಕೋರಿ ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ. ಮಹಾನಗರ ಪಾಲಿಕೆ ಮನವಿಗೆ ಹೈಕೋರ್ಟ್ ಅಸ್ತು ಎಂದಿದ್ದು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೊಟ್ಟಿದೆ.
ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್, ಪಾಲಿಕೆ ಮೇಯರ್, ಆಯುಕ್ತರಿಗೆ ಸೂಚಿಸಿದ್ದರು. ಈ ನಡುವೆ ಪಾಲಿಕೆ ಆಯುಕ್ತರು ಅನುಮತಿ ಕೊಡಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಬಳಿಕ ಗಣೇಶೋತ್ಸವಕ್ಕೆ ಮೂರು ದಿನಗಳ ಅನುಮತಿ ಫಿಕ್ಸ್ ಆಗಿದ್ದು, ಪಾಲಿಕೆ ಆಯುಕ್ತರು ಷರತ್ತುಗಳನ್ನ ವಿಧಿಸಿ ಅಧಿಕೃತ ಘೋಷಣೆ ಮಾಡಿದ್ದಾರೆ. ಆಯುಕ್ತರಿಂದ ಆದೇಶ ಬರುತ್ತಿದ್ದಂತೆ ಪಾಲಿಕೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈದ್ಗಾ ಮೈದಾನದಲ್ಲಿ ವಿಘ್ನೇಶ್ವರನ ಹಬ್ಬಕ್ಕೆ ಮೂರು ದಿನ ಅನುಮತಿ ಸಿಕ್ಕಿದೆ. ಆದ್ರೆ ಆಯುಕ್ತರು, ಅನುಮತಿ ಕೊಟ್ಟಿದ್ದೇವೇ. ಆದ್ರೆ 18 ಷರತ್ತುಗಳಿವೆ ಅಂತ ಹೊಸ ಬಾಂಬ್ ಸಿಡಿಸಿದರು.
ಪಾಲಿಕೆ ಷರತ್ತುಗಳು
ಪಾಲಿಕೆ ಹಾಕಿರುವ ಷರತ್ತುಗಳಿಗೆ ಹುಬ್ಬಳ್ಳಿಯಲ್ಲಿ ಗಜಾನನೋತ್ಸವ ಆಚರಣೆ ಸಮೀತಿ ಅಧ್ಯಕ್ಷ ಸಂಜೀವ್ ಬಡಸ್ಕರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ, ಹುಬ್ಬಳ್ಳಿ ಗಣೇಶೋತ್ಸವ ಈ ಬಾರಿ ಕೂಡ ಗಮನ ಸೆಳೆದಿದೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚಣೆಗೆ ಪಾಲಿಕೆ ಅನುಮತಿ ನೀಡದೆ. ಈ ಕಾರಣ, ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಶುರುವಾಗಿದೆ. ಇನ್ನು ಗಣೇಶೋತ್ಸವ ಹೇಗೆ ನಡೆಯುತ್ತೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ