newsfirstkannada.com

ದೊಡ್ಡ ಶೋ ರೂಂಗಳೇ ಇವರ ಟಾರ್ಗೆಟ್​​.. ಸ್ಯಾರಿ ತೋರಿಸಿ ಎಂದು ಲಕ್ಷಾಂತರ ಬೆಲೆಯ ಸೀರೆ ಖದಿಯುತ್ತಿದ್ದ ಕಳ್ಳರ ​ಗ್ಯಾಂಗ್​ ಅರೆಸ್ಟ್​

Share :

23-08-2023

    ಆಂಧ್ರದಿಂದ ಬೆಂಗಳೂರಿಗೆ ಬಂದು ಸೀರೆ ಕಳ್ಳತನ

    ಮದುವೆ, ಸಭೆ ಸಮಾರಂಭದ ಹೆಸರಲ್ಲಿ ಸ್ಯಾರಿ ಕಳ್ಳತನ

    ಲಕ್ಷಾಂತರ ಮೌಲ್ಯದ ಸೀರೆಗಳೇ ಇವರ ಟಾರ್ಗೆಟ್​.. ಕೊನೆಗೂ ಕಳ್ಳರು ಅರೆಸ್ಟ್​

ಬೆಂಗಳೂರು: ಸಿಲಿಕಾನ್​​ ಸಿಟಿಯಲ್ಲಿ ಸೀರೆ ಕದಿಯುತ್ತಿದ್ದ ನಾರಿಯರನ್ನು ಹೈಗ್ರೌಂಡ್ಸ್​​ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಐದಾರು ಶೋರೂಂಗಳಿಗೆ ನುಗ್ಗಿ ಸೀರೆ ಕದಿಯುತ್ತಿದ್ದ ಮಹಿಳೆಯರು ಪೊಲೀಸರ ವಶದಲ್ಲಿದ್ದಾರೆ. ಆಂಧ್ರದ ಗುಂಟೂರು ಮೂಲದ ಸುನೀತಾ, ಮಟ್ಟಪತಿ ರಾಣಿ, ರತ್ನವೇಲು ಸೇರಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರು ಮತ್ತು ಪುರುಷರು ಸೇರಿ ಒಟ್ಟು 11 ಜನರು ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಟ್ಟು ಸೀರೆ ಕಳ್ಳತನ ಮಾಡಿದ್ದಾರೆ. ಮದುವೆ, ಸಭೆ ಸಮಾರಂಭದ ಹೆಸರಲ್ಲಿ ಸ್ಯಾರಿ ಕಳ್ಳತನ ಮಾಡಿದ್ದಾರೆ. ನಗರದ ಹಲವು ಶೋರೂಂಗಳಿಗೆ ತೆರಳಿ ಸೀರೆ ಕದ್ದಿದ್ದಾರೆ.

ಲಕ್ಷಾಂತರ ಮೌಲ್ಯದ ಸಿಲ್ಕ್ ಸೀರೆಗಳು

ಆಂಧ್ರ ಮೂಲದ ಗ್ಯಾಂಗ್ ಇದಾಗಿದ್ದು, ಲಕ್ಷಾಂತರ ಮೌಲ್ಯದ ಸೀರೆ ಖರೀದಿ ನೆಪದಲ್ಲಿ ಮಹಿಳೆಯರು ಕೈಚಳಕ ತೋರಿಸಿದ್ದಾರೆ. ದೊಡ್ಡ ದೊಡ್ಡ ಸೀರೆ ಶೋ ರೂಂಗಳನ್ನು ಟಾರ್ಗೆಟ್ ಮಾಡಿಕೊಂಡ ಮಹಿಳೆಯರು ಸೀರೆ ಕದ್ದಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಸಿಲ್ಕ್ ಸೀರೆಗಳನ್ನು ಹೈಗ್ರೌಂಡ್ಸ್ ಪೊಲೀಸರು ಜಪ್ತಿ ಮಾಡಿದ್ದಾರೆ.

ಸೀರೆ ಕಳ್ಳರ ಗ್ಯಾಂಗ್

ಸೀರೆ ಕಳ್ಳರ ಗ್ಯಾಂಗ್​ನಲ್ಲಿ ಮೂವರು ಮಹಿಳೆಯರ ಜೊತೆಗೆ ಮೂವರು ಪುರುಷರು ಇದ್ದರು. ಮನೆಯಲ್ಲಿ ಮದುವೆ ಕಾರ್ಯ ಇದೆ ರಿಚ್ ಸ್ಯಾರಿ ತೋರಿಸಿ ಎಂದು ಅಂಗಡಿಯವರನ್ನು ಯಾಮಾರಿಸುತ್ತಿದ್ದರು. ಸುಮಾರು 50-60 ಸೀರೆಗಳನ್ನ ಒಮ್ಮೆಲೆ ತೆಗೆಸಿ ನೋಡಲು ಯತ್ನಿಸುತ್ತಿದ್ದರು. ಬಳಿಕ ಲಕ್ಷ ಲಕ್ಷ ಬೆಲೆಬಾಳುವ ಸೀರೆಗಳನ್ನ ಈ ಕಳ್ಳರ ಗ್ಯಾಂಗ್​ ಎಗರಿಸುತ್ತಿದ್ದರು.

ಸೀರೆ ಕದಿಯುತ್ತಿದ್ದ ಮಹಿಳೆಯರ ಗ್ಯಾಂಗ್​ ವಿರುದ್ಧ ಆಶೋಕನಗರ ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು.

ಸೀರೆ ಶೋರೂಂ ಸಿಸಿಟಿವಿ ಪರಿಶೀಲನೆ ನಡೆಸಿ ಏಳು ಮಂದಿಯನ್ನು ಬಂಧಿಸಲಾಗಿದೆ. ಉಳಿದವರಿಗೆ ಬಲೆ ಬೀಸಲಾಗಿದೆ. ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಸಿಲ್ಕ್ ಸೀರೆಗಳು ಜಪ್ತಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೊಡ್ಡ ಶೋ ರೂಂಗಳೇ ಇವರ ಟಾರ್ಗೆಟ್​​.. ಸ್ಯಾರಿ ತೋರಿಸಿ ಎಂದು ಲಕ್ಷಾಂತರ ಬೆಲೆಯ ಸೀರೆ ಖದಿಯುತ್ತಿದ್ದ ಕಳ್ಳರ ​ಗ್ಯಾಂಗ್​ ಅರೆಸ್ಟ್​

https://newsfirstlive.com/wp-content/uploads/2023/08/saaree.jpg

Load More