newsfirstkannada.com

ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​​.. ಚಿಕ್ಕಣ್ಣ ಬೆನ್ನಲ್ಲೇ ಮತ್ತೋರ್ವ ಸ್ಟಾರ್​ ನಟನಿಗೆ ಸಂಕಷ್ಟ

Share :

Published June 17, 2024 at 9:13pm

Update June 17, 2024 at 9:14pm

    ನಟ ದರ್ಶನ್​ ಮತ್ತು ಗ್ಯಾಂಗ್​​ನಿಂದ ನಡೆದಿದೆ ಎನ್ನಲಾದ ಕೊಲೆ ಕೇಸ್

    ಹತ್ಯೆಯಾದ ದಿನ ನಟ ದರ್ಶನ್​ ಜೊತೆ ಇದ್ದ ಸ್ಟಾರ್​​ ಯಶಸ್​ ಸೂರ್ಯ

    ಗರಡಿ ಚಿತ್ರದ ನಟ ಯಶಸ್ ಸೂರ್ಯಗೆ ನೋಟಿಸ್​ ನೀಡೋ ಸಾಧ್ಯತೆ

ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬಿದ್ದ ಕೊಲೆ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಕ್ಕಿದೆ. ಅಂದು ಜೂನ್​ 8ನೇ ತಾರೀಕು ಶನಿವಾರ. ರೇಣುಕಾಸ್ವಾಮಿ ಕೊಲೆಯಾದ ದಿನ. ಅಂದು ನಟ ದರ್ಶನ್​ ಮತ್ತು ಗ್ಯಾಂಗ್​​ ಆರೋಪಿ ವಿನಯ್​ ಒಡೆತನದಲ್ಲಿರೋ ಸ್ಟೋನಿ ಬ್ರೂಕ್​ ಪಬ್​ನಲ್ಲಿ ವಿಕೇಂಡ್​ ಪಾರ್ಟಿ ಮಾಡಿತ್ತು. ಫುಲ್ ಜಾಲಿ ಮೂಡ್​ನಲ್ಲಿತ್ತು. ಆ ಪಾರ್ಟಿಯಲ್ಲಿ ಚಿಕ್ಕಣ್ಣ ಜತೆಗೆ ನಟ ಯಶಸ್​​ ಸೂರ್ಯ ಕೂಡ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಹಾಗಾಗಿ ಯಶಸ್​ ಸೂರ್ಯ ಅವರಿಗೂ ಸಂಕಷ್ಟ ಎದುರಾಗಿದೆ.

ಮಧ್ಯಾಹ್ನದಿಂದ ಸಂಜೆವರೆಗೂ ಸತತ ಮೂರ್ನಾಲ್ಕು ಗಂಟೆಗಳ ಕಾಲ ದರ್ಶನ್​ ಟೀಂ ಪಾರ್ಟಿ ಮಾಡಿದೆ. ಈ ವೇಳೆ ಯಶಸ್​ ಸೂರ್ಯ ಕೂಡ ಇದ್ದರು. ಸಂಜೆಯಾಗ್ತಿದ್ದಂತೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಪಟ್ಟಣಗೆರೆ ಶೆಡ್​​ ಕರೆತರಲಾಗಿತ್ತು. ಮೊದಲಿಗೆ ಈ ವಿಚಾರವನ್ನ ಆರೋಪಿಗಳು ವಿನಯ್​ಗೆ ಮಾಹಿತಿ ನೀಡಿದ್ದಾರೆ. ಬಳಿಕ ​ವಿನಯ್​ ಈ ಬಗ್ಗೆ ಇನ್ಫಾರ್ಮ್​ ಮಾಡಿದ್ದೇ ತಡ ದರ್ಶನ್​ ಸ್ವಲ್ಪ ಕೆಲಸ ಇದೆ ಎಂದು ಪಾರ್ಟಿಯ ಅರ್ಧದಲ್ಲೇ ಎದ್ದು ಹೊರಟಿದ್ದಾರೆ.

ಇನ್ನು, ಪಾರ್ಟಿಯಲ್ಲಿ ನಟ ದರ್ಶನ್​ ಕೊಲೆ ಬಗ್ಗೆ ಮಾತಾಡಿದ್ರಾ ಅನ್ನೋ ಬಗ್ಗೆ ತನಿಖೆ ಮುಂದುವರಿದಿದೆ. ಗರಡಿ ಚಿತ್ರದ ನಟ ಯಶಸ್ ಸೂರ್ಯಗೂ ನೋಟಿಸ್​ ನೀಡಿ ವಿಚಾರಣೆಗೆ ಹಾಜರಾಗಲು ಪೊಲೀಸ್​​ ಇಲಾಖೆ ಮುಂದಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ನಟ ಯಶಸ್​ ಸೂರ್ಯ ಅವರನ್ನು ಸ್ಟೋನಿ ಬ್ರೂಕ್​ ಪಬ್​ಗೆ ಕರೆದುಕೊಂಡು ಇಂಚಿಂಚೂ ಮಾಹಿತಿ ಕಲೆ ಹಾಕಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​​.. ಚಿಕ್ಕಣ್ಣ ಬೆನ್ನಲ್ಲೇ ಮತ್ತೋರ್ವ ಸ್ಟಾರ್​ ನಟನಿಗೆ ಸಂಕಷ್ಟ

https://newsfirstlive.com/wp-content/uploads/2024/06/surya1.jpg

Load More