newsfirstkannada.com

Video: ತಿಂಡಿ ಕಾಯಿಸುವ ವೇಳೆ ಗ್ಯಾಸ್​ ಸಿಲಿಂಡರ್​ ಸ್ಫೋಟ; ಓರ್ವನ ಸ್ಥಿತಿ ಗಂಭೀರ, 10 ಮಂದಿಗೆ ಗಾಯ

Share :

09-09-2023

    ಇದ್ದಕ್ಕಿದ್ದಂತೆಯೇ ​ಸ್ಫೋಟಗೊಂಡ ಗ್ಯಾಸ್​​ ಸಿಲಿಂಡರ್

    ಸಿಸಿಟಿವಿಯಲ್ಲಿ ಸೆರೆಯಾಯ್ತು ಗ್ಯಾಸ್​​ ಸಿಲಿಂಟರ್​ ಸ್ಫೋಟದ ದೃಶ್ಯ

    ಗಿರಕಿ ಹೊಡೆದ​​ ಸಿಲಿಂಡರ್,​ ಹಬ್ಬಿದ ಬೆಂಕಿ, ಭಯದಿಂದ ಓಡಿದ ಜನರು

ಕ್ಯಾಂಟೀನ್​ನಲ್ಲಿ ತಿಂಡಿ ಕಾಯಿಸುವ ವೇಳೆ ಸಿಲಿಂಡರ್​ ಸ್ಫೋಟಗೊಂಡ ಘಟನೆ ಮೆಕ್ಸಿಕೋದ ಮೈಕೋಕಾನ್​​ನ ಮೊರೆಲಿಯಾದಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಟಿಟಿವಿಯಲ್ಲಿ ಸೆರೆಯಾಗಿದೆ. ಸಿಲಿಂಡರ್​ ಸ್ಫೋಟಕ್ಕೆ ಓರ್ವನ ಸ್ಥಿತಿ ಗಂಭೀರವಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ.

ಮೊರೆಲಿಯಾದ ಕ್ಯಾಂಟೀನ್​ವೊಂದರಲ್ಲಿ ಗ್ರಾಹಕಿಯೊಬ್ಬಳು ತಾನು ಖರೀದಿಸಿದ ಸಾಸ್​ಗೆ ಬಿಲ್​ ಹಾಕಿಸುತ್ತಿರುತ್ತಾಳೆ. ಅತ್ತ ಕ್ಯಾಂಟೀನ್​ ಮುಂಭಾಗದಲ್ಲಿ ವ್ಯಕ್ತಿಯೋರ್ವ ತಿಂಡಿ ತಯಾರಿಸುತ್ತಿದ್ದ. ಇದೇ ವೇಳೆ ಗ್ಯಾಸ್ ಸಿಲಿಂಡರ್​​ ಏಕಾಏಕಿ ಸ್ಫೋಟಗೊಂಡಿದೆ.

ಸಿಸಿಟಿವಿಯಲ್ಲಿ ಈ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ಗ್ಯಾಸ್​​ ಸ್ಫೋಟಗೊಳ್ತಿದ್ದಂತೆ ಜನ ದಿಕ್ಕಾಪಾಲಾಗಿದ್ದಾರೆ. ಸ್ಫೋಟಗೊಂಡ ಗ್ಯಾಸ್​​​ ಸಿಲಿಂಡರ್​ ಬೆಂಕಿ ಜೊತೆ ಗಿರಕಿ ಹೊಡೆದಿದೆ. ಬೆಂಕಿ ಹಬ್ಬುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ತಿಂಡಿ ಕಾಯಿಸುವ ವೇಳೆ ಗ್ಯಾಸ್​ ಸಿಲಿಂಡರ್​ ಸ್ಫೋಟ; ಓರ್ವನ ಸ್ಥಿತಿ ಗಂಭೀರ, 10 ಮಂದಿಗೆ ಗಾಯ

https://newsfirstlive.com/wp-content/uploads/2023/09/Gas-Cylinder.jpg

Load More