newsfirstkannada.com

ಧಾರವಾಡದಲ್ಲಿ ಟ್ಯಾಂಕರ್ ಅನಾಹುತ.. ಬ್ರಿಡ್ಜ್​ನಲ್ಲಿ ಸಿಲುಕಿ ಗ್ಯಾಸ್​ ಲೀಕ್.. 30 ಕಿ.ಮೀವರೆಗೆ ರಸ್ತೆ ಸಂಚಾರ ಬಂದ್..!

Share :

17-08-2023

    ಬ್ರಿಡ್ಜ್​ನಲ್ಲಿ ಸಿಲುಕಿದ ಬೃಹತ್ ಗ್ಯಾಸ್​ ಟ್ಯಾಂಕರ್​..!

    ಟ್ಯಾಂಕರ್​ನಿಂದ ಏಕಾಏಕಿ ಲೀಕ್​ ಆಗ್ತಿರುವ ಗ್ಯಾಸ್​

    ಎಚ್‌ಪಿ ಕಂಪನಿಗೆ ಸೇರಿದ ಎಲ್‌ಪಿಜಿ ಸಿಲಿಂಡರ್ ಗ್ಯಾಸ್

ಧಾರವಾಡದಲ್ಲಿ ಆತಂಕಕಾರಿ ಘಟನೆಯೊಂದು ನಡೆದುಹೋಗಿದೆ. ಆ ಒಂದು ಅಪಾಯದಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ಕಿಲೋಮೀಟರ್​ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ಇತ್ತ ನೆಮ್ಮದಿಯಿಂದ ಮನೆಯಲ್ಲಿರುವ ಜನರು ಕೂಡ ಜೀವವನ್ನು ಕೈಯಲ್ಲಿಡಿದುಕೊಂಡು ಮಲಗುವಂತಾಗಿದೆ.

ಬ್ರಿಡ್ಜ್​ನಲ್ಲಿ ಸಿಲುಕಿದ ಬೃಹತ್ ಗ್ಯಾಸ್​ ಟ್ಯಾಂಕರ್​ನಿಂದ ಆತಂಕ

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಧಾರವಾಡದಲ್ಲಿ ಅಪಾಯಕಾರಿ ಘಟನೆಯೊಂದು ನಡೆದುಹೋಗಿದೆ. ಧಾರವಾಡದ ಹೊರವಲಯದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕೋರ್ಟ್ ಬಳಿಯ ಅಂಡರ್‌ ಪಾಸ್‌ ಬ್ರಿಡ್ಜ್​ನಲ್ಲಿ ಬೃಹತ್ ಗಾತ್ರದ ಗ್ಯಾಸ್ ಟ್ಯಾಂಕರ್ ಸಿಲುಕಿದ್ದು ಆತಂಕಕ್ಕೆ ಕಾರಣವಾಗಿದೆ. ಗ್ಯಾಸ್ ಟ್ಯಾಂಕರ್ ಸೇತುವೆ ಕೆಳಗಡೆ ಹಾದು ಹೋಗುವಾಗ ಸೇತುವೆಗೆ ಬಡಿದಿದ್ದರಿಂದ ಗ್ಯಾಸ್ ಲೀಕ್ ಆಗುತ್ತಿದೆ. ಟ್ಯಾಂಕರ್ ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದ್ದು, ಸುತ್ತಮುತ್ತಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನ ಸಂಚಾರಿಸದಂತೆ ರಸ್ತೆ ಬಂದ್ ಮಾಡಿದ್ದಾರೆ.

ಬ್ರಿಡ್ಜ್​ ಕೆಳಗೆ ಸಿಲುಕಿಕೊಂಡಿರುವ ಎಚ್‌ಪಿ ಕಂಪನಿಗೆ ಸೇರಿದ ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್​ನಿಂದ ಗ್ಯಾಸ್ ಸೋರಿಕೆಯಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ಧಾರವಾಡ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸುತ್ತಮುತ್ತಲಿನ ಒಂದು ಕಿಲೋಮೀಟರ್​ವರೆಗೆ ರಸ್ತೆ ಸಂಪೂರ್ಣ ಬಂದ್ ಮಾಡಿದ್ದಾರೆ. ಮಾತ್ರವಲ್ಲದೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದಾರೆ. ಅಲ್ಲದೇ ಯಾವುದೇ ಅನಾಹುತವಾಗದಂತೆ ಬಹುತೇಕ 30 ಕಿಲೋಮೀಟರ್​ವರೆಗೆ ರಸ್ತೆ ಸಂಪೂರ್ಣ ಬಂದ್ ಆಗಿದೆ. ಬೆಳಗಾವಿ ರಸ್ತೆಯ ಬಾಗೇವಾಡಿಯಿಂದ ಧಾರವಾಡದ ತಡಸ ಕ್ರಾಸ್​ವರೆಗೂ ವಾಹನಗಳು ನಿಂತಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ಭದ್ರತೆಯಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿ
ಭದ್ರತೆಯಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿ

ಸದ್ಯ ಟ್ಯಾಂಕರ್‌ನಲ್ಲಿನ ಗ್ಯಾಸ್ ಲೀಕ್ ಆಗಿದ್ದರಿಂದ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇಡೀ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ತುಂಬಿಕೊಂಡಿದ್ದು ಟ್ಯಾಂಕರ್ ಖಾಲಿಯಾಗುವವರೆಗೆ ಹತ್ತಿರಕ್ಕೆ ಹೋಗದಂತೆ ಪೊಲೀಸರು ನಿರ್ಬಂಧಿಸಿದ್ದಾರೆ. ಧಾರವಾಡದ ಬೇಲೂರು, ಕೋಟೂರು, ಮುಮ್ಮಿಗಟ್ಟಿ, ಸಿಗನಹಳ್ಳಿ, ಮಲ್ಲಿಗವಾಡ ಹಾಗೂ ನರೇಂದ್ರ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿರುವ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆಗೆ ಸಿದ್ಧರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ಅಂಗಡಿ ಮುಂಗಟ್ಟು ಹಾಗೂ ಹೋಟೆಲ್​ಗಳನ್ನು ಬಂದ್ ಮಾಡಲಾಗಿದೆ. ಆದಷ್ಟು ಬೇಗ ಗ್ಯಾಸ್​ ಟ್ಯಾಂಕರ್​ನ್ನು ಸ್ಥಳದಿಂದ ಸುರಕ್ಷಿತವಾಗಿಒ ತೆರವುಗೊಳಿಸುವ ಕೆಲಸವಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಾರವಾಡದಲ್ಲಿ ಟ್ಯಾಂಕರ್ ಅನಾಹುತ.. ಬ್ರಿಡ್ಜ್​ನಲ್ಲಿ ಸಿಲುಕಿ ಗ್ಯಾಸ್​ ಲೀಕ್.. 30 ಕಿ.ಮೀವರೆಗೆ ರಸ್ತೆ ಸಂಚಾರ ಬಂದ್..!

https://newsfirstlive.com/wp-content/uploads/2023/08/DWD_GAS.jpg

Load More