newsfirstkannada.com

ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕಾಗಿ ಅಲೆಯುತ್ತಿರೋ ವೇದಾಂತ್​; ಗಟ್ಟಿಮೇಳದಲ್ಲಿ ಹೊಸ ಟ್ವಿಸ್ಟ್​​​!

Share :

26-07-2023

    ವೀಕ್ಷಕರಿಗೆ ಡಬಲ್​ ಧಮಾಕ ಕೊಡಲು ಸಜ್ಜಾದ ಗಟ್ಟಿಮೇಳ

    ತನ್ನ ತಂದೆಯನ್ನ ಹುಡುಕಿ ಹೊರಟ ಗಟ್ಟಿಮೇಳ ಹೀರೋ..!

    ಕೊನೆಗೂ ಬಂದೇ ಬಿಡ್ತು ಫ್ಯಾನ್ಸ್​​ ಕಾಯುತ್ತಿದ್ದ ಆ ಘಳಿಗೆ

ಕಿರುತೆರೆಯ ಮೋಸ್ಟ್ ಫೇವರೇಟ್ ಸೀರಿಯಲ್ ಅಂದ್ರೆ ಅದು ಗಟ್ಟಿಮೇಳ ಧಾರಾವಾಹಿ. ವೀಕ್ಷಕರು ಈ ಸೀರಿಯಲ್​ ಮೇಲೆ ಅಪಾರವಾದ ಪ್ರೀತಿ, ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಸದ್ಯ ಈಗ ಗಟ್ಟಿಮೇಳ 3.0 ವರ್ಷನ್ ಶುರುವಾಗಿದೆ. ಅಂದರೆ ವಿಕ್ಕಿ ಪಾತ್ರ ಮುಕ್ತಾಯದ ನಂತರ ವೇದಾಂತ್ ವಸಿಷ್ಠ ಮನೆಯ ಬಗ್ಗೆ ಕಾಳಜಿ ವಹಿಸಿದ್ದಾನೆ. ತನ್ನಗಿದ್ದ ಅಡ್ಡಗೋಡೆಗಳನ್ನು ಸಡಿಲ ಮಾಡಿಕೊಳ್ಳುತ್ತಾ ಇದ್ದಾನೆ. ಇದಕ್ಕೆ ಅಮೂಲ್ಯ ಕೂಡ ಸಾಥ್ ನೀಡಿದ್ದಾಳೆ.

ಸದ್ಯದಲ್ಲೇ ಸುಹಾಸಿನಿಯ ಮೋಸದ ಆಟಕ್ಕೆ ತೆರೆ ಬೀಳಲಿದೆ. ವೇದಾಂತ್ ಈಗ ತನ್ನ ತಂದೆಯನ್ನ ಹುಡುಕಿ ಹೊರಟಿದ್ದಾನೆ. 25 ವರ್ಷಗಳ ಹಿಂದಿನ ಜೀವನವನ್ನ ತೆರೆದಿಡಲು ಸಿದ್ದವಾಗುತ್ತಿದ್ದಾನೆ ವೇದಾಂತ್. ಎಲ್ಲಾ ರೀತಿಯ ಸಾಕ್ಷ್ಯಾಧಾರವನ್ನು ಹಿಡಿದು ತನ್ನ ತಂದೆ ಹುಡುಕಾಟ ಶುಟು ಮಾಡಿದ್ದಾನೆ. ಇಷ್ಟು ದಿನ ಅಭಿಮಾನಿಗಳು ಕಾಯುತ್ತಿದ್ದ ಆ ಘಳಿಗೆ ಕೊನೆಗೂ ಬಂದೇ ಬಿಟ್ಟಿದೆ. ಧಾರಾವಾಹಿಯಲ್ಲಿ ವಸಿಷ್ಠ ಕುಟುಂಬದ ಒಡೆಯ ಯಾರೆಂದು ತಿಳಿದಿದೆ.

ಸೂರ್ಯನಾರಾಯಣ್ ವಸಿಷ್ಠ ಅವರು ಸದ್ಯ ಈಗ ಆಶ್ರಮದಲ್ಲಿ ಬೀಡು ಬಿಟ್ಟದ್ದಾರೆ. ಸಂಚಿಕೆಗಳಲ್ಲಿ ಸೂರ್ಯನಾರಯಣ್ ಪಾತ್ರದ ಆಗಮನವಾಗಿದೆ. ಸ್ವತಹ: ವೇದಾಂತ್ ಕೂಡ ಅವರ ತಂದೆಯನ್ನ ಭೇಟಿ ಮಾಡಿದ್ದಾನೆ. ಆದ್ರೆ ಅವರೇ ವೇದಾಂತ್ ತಂದೆ ಅನ್ನೋದು ತಿಳಿದು ಬಂದಿಲ್ಲ. ಅಪ್ಪನಿಗೂ ಕೂಡ ಮಗನ ಗುರುತು ಸಿಕ್ಕಿಲ್ಲ. ಒಟ್ಟಿನಲ್ಲಿ ಮುಂದಿನ ಸಂಚಿಕೆಗಳಲ್ಲಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ ಘಳಿಗೆ ಬಂದಿದೆ. ಇನ್ನು ಮುಂಬರುವ ಸಂಚಿಕೆಗಳಲ್ಲಿ ಅಪ್ಪ -ಮಗನ ಬಾಂಧವ್ಯ ತೆರೆ ಮೇಲೆ ಬರಲಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕಾಗಿ ಅಲೆಯುತ್ತಿರೋ ವೇದಾಂತ್​; ಗಟ್ಟಿಮೇಳದಲ್ಲಿ ಹೊಸ ಟ್ವಿಸ್ಟ್​​​!

https://newsfirstlive.com/wp-content/uploads/2023/07/gattimela-5.jpg

Load More