ಎರಡೇ ವಾರಕ್ಕೆ ತಮ್ಮ ಆಟವನ್ನು ಮುಗಿಸಿದ ಸ್ಪರ್ಧಿ ಇವರು!
ಬಿಗ್ಬಾಸ್ ಸೀಸನ್ 10ಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು
ಬಿಗ್ಬಾಸ್ ಮನೆಯಿಂದ ಪತ್ರಕರ್ತ ಗೌರೀಶ್ ಅಕ್ಕಿ ಹೊರಗೆ
ಬಿಗ್ಬಾಸ್ ಸೀಸನ್ 10 ಶುರುವಾಗಿ ಎರಡು ವಾರ ಕಳೆದಿದೆ. ಎರಡನೇ ವಾರದಲ್ಲಿ ಬಿಗ್ಬಾಸ್ ಮನೆಯಿಂದ ಯಾವ ಸ್ಪರ್ಧಿ ಹೊರಗಡೆ ಹೋಗುತ್ತಾರೆ ಎಂಬ ಚರ್ಚೆ ಶುರುವಾಗಿತ್ತು. ಇದೀಗ ಈ ಚರ್ಚೆಗೆ ಬ್ರೇಕ್ ಬಿದ್ದಿದೆ. ಇಂದು ಪತ್ರಕರ್ತ ಗೌರೀಶ್ ಅಕ್ಕಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಇದನ್ನು ಓದಿ: Bigg Boss Kannada 2023: ದೊಡ್ಮನೆಯಿಂದ ಹೊರ ಹೋದ ಮೊದಲ ವ್ಯಕ್ತಿ ಇವರು! ನಿಜಕ್ಕೂ ಬೇಸರದ ಸುದ್ದಿ
ಇನ್ನೂ ಬಿಗ್ಬಾಸ್ನಲ್ಲಿ ಉಳಿದ 15 ಸ್ಪರ್ಧಿಗಳು ಎರಡು ವಾರ ಪೂರೈಸಿ ಮೂರನೇ ವಾರಕ್ಕೆ ಕಾಲಿಡುತ್ತಿದ್ದಾರೆ. ಮೊದಲ ವಾರ ಬಿಗ್ಬಾಸ್ ಮನೆಯಿಂದ ಮೈಸೂರಿನ ಸ್ನೇಕ್ ಶ್ಯಾಮ್ ಅವರು ಹೊರಬಿದ್ದಿದ್ದರು. ಈಗ ಎರಡನೇ ವಾರ ಗೌರೀಶ್ ಅಕ್ಕಿ ಬಿಗ್ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಬಿಗ್ಬಾಸ್ ಶುರುವಾದ ಎರಡನೇ ವಾರಕ್ಕೆ ನಟಿ ಭಾಗ್ಯಶ್ರೀ ಅವರು ಆಚೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಮನೆಯಿಂದ ಆಚೆ ಬರುವ ಸ್ಪರ್ಧಿಯ ಹೆಸರನ್ನು ಹೇಳಿ ಆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿಚ್ಚ ಸುದೀಪ್ ಬಳಿ ಮನಬಿಚ್ಚಿ ಮಾತಾಡಿದ್ದಾರೆ. ಇನ್ನು, ಬಿಗ್ಬಾಸ್ ಸೀಸನ್ 10 ಟಾಪ್ 3 ಸ್ಪರ್ಧಿಗಳು ಯಾರು ಇರುತ್ತಾರೆ ಎಂದು ಹೇಳಿದ್ದಾರೆ. ಸ್ನೇಹಿತ್, ನಮ್ರತಾ ಹಾಗೂ ವಿನಯ್ ಈ ಮೂವರು ಟಾಪ್ 3ಯಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ