newsfirstkannada.com

ರೋಹಿತ್​ ಹೊಗಳುವ ಭರದಲ್ಲಿ ಕೊಹ್ಲಿ-ಧೋನಿಗೆ ಗಂಭೀರ್ ಕೌಂಟರ್​​​​​​​​​.​​. ಏನಂದ್ರು ಆ್ಯಂಗ್ರಿ ಮ್ಯಾನ್​​..!?

Share :

31-10-2023

    ‘ಕ್ಯಾಪ್ಟನ್​, ಲೀಡರ್​​ಗೂ ವ್ಯತ್ಯಾಸ ಇದೆ’

    ರೋಹಿತ್​​​​​ ನಿಸ್ವಾರ್ಥ ನಾಯಕ ಎಂದ ಗೌತಮ್

    ರೋಹಿತ್​​​​ ‘ನಿಸ್ವಾರ್ಥ ಕ್ಯಾಪ್ಟನ್’​​​​​​, ಹಾಗಾದ್ರೆ ಕೊಹ್ಲಿ-ಧೋನಿ?

ವಿರಾಟ್ ಕೊಹ್ಲಿ-ಎಂ.ಎಸ್ ಧೋನಿ.. ಟೀಮ್ ಇಂಡಿಯಾದ ಭಲೇ ಜೋಡಿ. ಓರ್ವ ಬ್ಯಾಟಿಂಗ್ ದಿಗ್ಗಜ, ಮತ್ತೋರ್ವ ವಿಶ್ವಕಂಡ ದಿ ಬೆಸ್ಟ್​​ ಕ್ಯಾಪ್ಟನ್​​​. ಟೀಮ್​ ಇಂಡಿಯಾದ ಅದೆಷ್ಟೋ ಗೆಲುವುಗಳ ಹರಿಕಾರರು. ಇಂಥಾ ದಿಗ್ಗಜರು ಸ್ವಾರ್ಥಿಗಳಾ? ಇವರು ವೈಯಕ್ತಿಕ ಸಾಧನೆಗಳಿಗಾಗಿ ಮಾತ್ರವೇ ಆಡಿದ್ರಾ? ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​​​​​​ ಹೇಳಿದ ಆ ಒಂದು ಮಾತು ಸದ್ಯ ಹಲ್​ಚಲ್​ ಎಬ್ಬಿಸಿದೆ.

ಟೀಮ್ ಇಂಡಿಯಾ ಹೊಸ ಇತಿಹಾಸ ಬರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಐದೇ ಹೆಜ್ಜೆ..! ಯಶಸ್ವಿಯಾಗಿ ಆ ಐದು ಹೆಜ್ಜೆ ಹಾಕಿ ಬಿಟ್ರೆ ವಿಶ್ವಕಪ್​​​​​​​ ಕಿರೀಟ ಮುಡಿಗೇರಿಸಿಕೊಳ್ಳಲಿದೆ. ರೋಹಿತ್​​ ಪಡೆ ವಿಶ್ವಕಪ್​​ನಲ್ಲಿ ಡ್ರೀಮ್​ ಪರ್ಫಾಮೆನ್ಸ್​ ನೀಡ್ತಿರುವ ಹೊತ್ತಲ್ಲೇ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​​​​​​ ಆಡಿದ ಆ ಒಂದು ಮಾತು ಕ್ರಿಕೆಟ್​ ಲೋಕದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ.

ಮತ್ತೆ ಗುಡುಗಿದ ಗೌತಮ್​​​ ಗಂಭೀರ್​​​​.!

ಗೌತಮ್​​​​​ ಗಂಭೀರ್​​​..! ವಿಶ್ವ ಕ್ರಿಕೆಟ್​​ ಕಂಡ ಬೆಸ್ಟ್​ ಓಪನರ್.. ಈ ಡೆಲ್ಲಿ ಪುತ್ತರ್​​​ ಆಟದಿಂದ ಹೆಚ್ಚು ಫೇಮಸೋ, ವಿವಾದದಿಂದಲೂ ಅಷ್ಟೇ ಫೇಮಸ್​​. ಹರಿತವಾದ ಮಾತುಗಳಿಂದ ಅದೆಷ್ಟೋ ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಬೋಲ್ಡ್​ ಸ್ಟೇಟ್​​​ಮೆಂಟ್​ ನೀಡಿ ಫ್ಯಾನ್ಸ್​ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ರೋಹಿತ್​ ಹೊಗಳುವ ಭರದಲ್ಲಿ ಕೊಹ್ಲಿ-ಧೋನಿಗೆ ಕೌಂಟರ್​​​​​​​​​.​​.!

ಇಂಗ್ಲೆಂಡ್​​​​​ ಎದುರಿನ ಲೋ ಸ್ಕೋರ್​​​ ಗೇಮ್​​​​​​​​ ಅನ್ನ ಟೀಮ್ ಇಂಡಿಯಾ 100 ರನ್​ ಗಳಿಂದ ಗೆದ್ದು ಬೀಗ್ತು. ಪಂದ್ಯದ ಬಳಿಕ ಇಂಡಿಯನ್​ ಕಲಿಗಳ ಪ್ರದರ್ಶನದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಯ್ತು. ಇದಕ್ಕೆ ಗಂಭೀರ್ ಕೂಡ​ ಹೊರತಾಗಿಲ್ಲ. ಭಾರತ ಗೆಲ್ಲುತ್ತಿದ್ದಂತೆ ಕ್ಯಾಪ್ಟನ್ ರೋಹಿತ್ ಶರ್ಮಾರನ್ನ ಹೊಗಳಿ ಅಟ್ಟಕೇರಿಸಿದ್ದಾರೆ. ಅರೇ ಅದ್ರೇಲೇನು ತಪ್ಪಿದೆ ಅಂತೀರಾ ? ನಾಯಕನನ್ನ ಹೊಗಳೋದು ತಪ್ಪಿಲ್ಲ ನಿಜ..ಆದ್ರೆ ಗೌತಿ, ಹಿಟ್​ಮ್ಯಾನ್​ರನ್ನ ಹೊಗಳುವ ಭರದಲ್ಲಿ ಮಾಜಿ ಕೊಹ್ಲಿ ಹಾಗೂ ಧೋನಿಯನ್ನ ಸುಖಾಸುಮ್ಮನೇ ಟಾರ್ಗೆಟ್ ಮಾಡಿದ್ರಾ ಅನ್ನೋ ಪ್ರಶ್ನೆ ಎದ್ದಿದೆ.

‘ರೋಹಿತ್​​ ಶರ್ಮಾ ನಿಸ್ವಾರ್ಥ ನಾಯಕ’

ರೋಹಿತ್ ಶರ್ಮಾ ವೈಯಕ್ತಿಕ ಸಾಧನೆಗಾಗಿ ಆಡಿದ್ರೆ 40-45 ಶತಕ ಹೊಡೆಯುತ್ತಿದ್ದರು. ಆದರೆ ಅವರು ನೂರರ ಗೀಳನ್ನ ಹೊಂದಿಲ್ಲ. ವೈಯಕ್ತಿಕ ಸಾಧನೆಗಳಿಗಿಂತ ಹೆಚ್ಚಾಗಿ ತಂಡದ ಯಶಸ್ಸಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೆಚ್ಚು ಮಾರ್ಕೆಟಿಂಗ್​​​ ಮಾಡಲು ಬಯಸುವುದಿಲ್ಲ. ನಾಯಕನಾಗಿ ಮುಂಚೂಣಿಯಲ್ಲಿ ತಂಡ ಮುನ್ನಡೆಸುತ್ತಿದ್ದಾರೆ ಎಂದು ಗೌತಮ್​ ಗಂಭೀರ್ ಹೇಳಿದ್ದಾರೆ.

ಗುರು-ಶಿಷ್ಯನಿಗೆ ಟಕ್ಕರ್​ ಕೊಟ್ರಾ ಫೈರ್​​ ಗಂಭೀರ್​​..?

ರೋಹಿತ್​​ ಶರ್ಮಾ ಸೆಲ್ಫ್​ಲೆಸ್​ ಕ್ಯಾಪ್ಟನ್​ ಅನ್ನುವ ಮೂಲಕ ಗುರು-ಶಿಷ್ಯರಾದ ಧೋನಿ ಹಾಗೂ ಕೊಹ್ಲಿಗೆ ಕೌಂಟರ್​​​ ಕೊಟ್ರಾ ಅನ್ನೋ ಚರ್ಚೆ ಈಗ ನಡೀತಾಯಿದೆ. ಯಾಕಂದ್ರೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​​ನಲ್ಲಿ ಈಗಾಗ್ಲೇ 48 ಶತಕ ಸಿಡಿಸಿದ್ದಾರೆ. ಇನ್ನೆರಡು ಶತಕ ಬಾರಿಸಿದ್ರೆ ಕ್ರಿಕೆಟ್ ದೇವರು ಸಚಿನ್​ ತೆಂಡುಲ್ಕರ್​ ಅವರ ದಾಖಲೆಯನ್ನ ಅಳಿಸಿ ಹಾಕಲಿದ್ದಾರೆ. ವಿಶ್ವದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ ಇರೋದ್ರಿಂದ ಗೌತಿ ಹೀಗೆ ಹೇಳಿದ್ದಾರೆ ಅನ್ನೋದು ಫ್ಯಾನ್ಸ್​ ವಾದವಾಗಿದೆ.

ದಾಖಲೆ ವಿಚಾರದಲ್ಲಿ ಮಾತ್ರವಲ್ಲ.. ಕೊಹ್ಲಿ ಮಾರ್ಕೆಟಿಂಗ್ ರೂಲರ್​​ ಕೂಡ.. ಗೆಲ್ಲುವ ಕುದುರೆಯ ಮೇಲೆ ನೂರಾರು ಕೋಟಿ ಸುರಿಯಲು ಜಾಹೀರಾತು ಕಂಪನಿಗಳು ಸಾಲು ನಿಂತಿವೆ. ಇದೀಗ ರೋಹಿತ್​ ವಿಚಾರ ನೆಪವಾಗಿಸಿಕೊಂಡು ಗಂಭೀರ್, ಕೊಹ್ಲಿಯನ್ನ ಕುಟುಕಿದ್ದಾರೆ ಅನ್ನೋದು ಒಂದು ಬಣದ ವಾದವಾಗಿದೆ. ಮಾಜಿ ಕ್ಯಾಪ್ಟನ್​​ ಧೋನಿ ಕಂಡ್ರೆ ಗಂಭೀರ್​​​​ಗೆ ಅಷ್ಟಕಷ್ಟೇ. ಐಸಿಸಿ ಟ್ರೋಫಿಗಳ ಕ್ರೆಡಿಟ್​ ಧೋನಿಗೆ ಮಾತ್ರ ಸಂದಿದೆ ಅಂತ ಅನೇಕ ಬಾರಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಕೊಹ್ಲಿಯಂತೆ ಧೋನಿ ಕೂಡ ಮಾರ್ಕೆಟಿಂಗ್​​​​​​​​​​​​ ಸುಲ್ತಾನ್​​​​​​.. ಹೀಗಾಗಿ ರೋಹಿತ್​ ಹೊಗಳೋ ಭರದಲ್ಲಿ ಮಾಜಿ ಕ್ಯಾಪ್ಟನ್​ ಧೋನಿಗೂ ಗೌತಿ ಟಾಂಗ್ ಕೊಟ್ಟಿದ್ದಾರೆ ಅನ್ನೋದು ಮಾಹಿ ಫ್ಯಾನ್ಸ್​​ ವಾದವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್​ ಹೊಗಳುವ ಭರದಲ್ಲಿ ಕೊಹ್ಲಿ-ಧೋನಿಗೆ ಗಂಭೀರ್ ಕೌಂಟರ್​​​​​​​​​.​​. ಏನಂದ್ರು ಆ್ಯಂಗ್ರಿ ಮ್ಯಾನ್​​..!?

https://newsfirstlive.com/wp-content/uploads/2023/10/MSDHONI-2.jpg

Load More