newsfirstkannada.com

ಕ್ಯಾಪ್ಟನ್​ ಆಗಲು ಹಾರ್ದಿಕ್​​, ರಾಹುಲ್​ ಮಧ್ಯೆ ಫೈಟ್​​.. ಗಂಭೀರ್​​ ಬಂದ್ಮೇಲೆ ಎಲ್ಲಾ ಚೇಂಜ್​​!

Share :

Published July 10, 2024 at 5:27pm

Update July 10, 2024 at 5:28pm

    ಜಿಂಬಾಬ್ವೆ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ

    ಭಾರತ, ಶ್ರೀಲಂಕಾ ಮಧ್ಯೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ!

    ಟೀಮ್​ ಇಂಡಿಯಾ ನಾಯಕತ್ವಕ್ಕಾಗಿ ರಾಹುಲ್​​, ಹಾರ್ದಿಕ್​ ಮಧ್ಯೆ ಫೈಟ್​​

ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶ್ರೀಲಂಕಾ ಪ್ರವಾಸದಲ್ಲಿ ಟೀಮ್​​ ಇಂಡಿಯಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೆ ರೋಹಿತ್​ ಶರ್ಮಾ ಅಲಭ್ಯರಾಗಿದ್ದು, ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಬ್ಯಾಟರ್​​ ಕೆ.ಎಲ್​​ ರಾಹುಲ್​​​ ಕ್ಯಾಪ್ಟನ್​ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಜುಲೈ 27ನೇ ತಾರೀಕಿನಿಂದ ಶುರುವಾಗಲಿರೋ ಪ್ರವಾಸಕ್ಕೆ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಈಗಾಗಲೇ ಟೀಮ್​ ಇಂಡಿಯಾ ಹೊಸ ಕೋಚ್​​ ಆಗಿ ಗೌತಮ್​​ ಗಂಭೀರ್​ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್​ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾಗೆ ಸೀರೀಸ್​ನಿಂದ ರೆಸ್ಟ್​ ನೀಡಲಾಗುತ್ತಿದೆ. ಸೀನಿಯರ್ಸ್​ ಇಲ್ಲದ ಕಾರಣ ಸೀರೀಸ್​ಗೆ ತಂಡ ಆಯ್ಕೆ ಮಾಡುವುದು ಕೋಚ್​​​ಗೆ ತಲೆನೋವಾಗಿದೆ.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ರೋಹಿತ್​​​ ಅನುಪಸ್ಥಿತಿಯಲ್ಲಿ ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಹಾರ್ದಿಕ್​ ಪಾಂಡ್ಯ ಮುನ್ನಡೆಸಲಿದ್ದಾರೆ. ಏಕದಿನ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾದ ಕ್ಯಾಪ್ಟನ್​​ ಕೆ.ಎಲ್​ ರಾಹುಲ್​ ಆಗಲಿದ್ದಾರೆ. ಹಾರ್ದಿಕ್​​, ರಾಹುಲ್​ ಇಬ್ಬರು ಬಿಸಿಸಿಐ ಮೊದಲ ಆಯ್ಕೆಯಾಗಿದ್ದಾರೆ.

ಗಂಭೀರ್​​ ನಿರ್ಧಾರವೇ ಫೈನಲ್​​!

ಇನ್ನು, ಎರಡು ಫಾರ್ಮೇಟ್​ಗಳಲ್ಲೂ ಹಾರ್ದಿಕ್​ ಪಾಂಡ್ಯ ಕ್ಯಾಪ್ಟನ್​​ ಆಗಬೇಕು ಅನ್ನೋ ಚರ್ಚೆ ಕೂಡ ಇದೆ. ಕೆ.ಎಲ್​ ರಾಹುಲ್​ ಅವರು ಹಾರ್ದಿಕ್​ ನಂತರದ ಆಯ್ಕೆಯಾಗಲಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಈ ವಿಚಾರವಾಗಿ ಟೀಮ್​ ಇಂಡಿಯಾದ ಹೊಸ ಕೋಚ್​​ ಗೌತಮ್​ ಗಂಭೀರ್​​ ಇಬ್ಬರಲ್ಲಿ ಯಾರು ಕ್ಯಾಪ್ಟನ್​ ಆಗಬೇಕು? ಎಂದು ವೀಕೆಂಡ್​ ಮೀಟಿಂಗ್​ ಮಾಡಿ ಡಿಸೈಡ್​ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಗಂಭೀರ್​ ನಿರ್ಧಾರವೇ ಫೈನಲ್​ ಕೂಡ ಆಗಲಿದೆ.

ಈ ಹಿಂದೆ ಕೆ.ಎಲ್​ ರಾಹುಲ್​​ ಅವರು ಸೌತ್​ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲ ಹಾರ್ದಿಕ್​ ಪಾಂಡ್ಯ ಕೂಡ ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಲೀಡ್​ ಮಾಡಿದ್ದಾರೆ.

ಇದನ್ನೂ ಓದಿ: ಅಂದು ಅವಮಾನ ಇಂದು ಸನ್ಮಾನ! ಕ್ಯಾಪ್ಟನ್​ ಆಗುವಂತೆ KL ರಾಹುಲ್​ ಕಾಲು ಹಿಡಿದ BCCI

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ಯಾಪ್ಟನ್​ ಆಗಲು ಹಾರ್ದಿಕ್​​, ರಾಹುಲ್​ ಮಧ್ಯೆ ಫೈಟ್​​.. ಗಂಭೀರ್​​ ಬಂದ್ಮೇಲೆ ಎಲ್ಲಾ ಚೇಂಜ್​​!

https://newsfirstlive.com/wp-content/uploads/2024/07/Hardik_Rahul.jpg

Load More