newsfirstkannada.com

ಗೀತಾ-ವಿಜಿ ಮನೆಯಲ್ಲಿ ಮದುವೆ ಸಂಭ್ರಮ.. ಮಿಸ್ಟರ್ ಅಂಡ್ ಮಿಸಸ್​ ರಾಮಾಚಾರಿ ಸರ್ಪೈಸ್​ ಎಂಟ್ರಿ..!

Share :

22-06-2023

    ಭಾನುಮತಿಗೆ ಬಿಗ್ ಶಾಕ್, ಸುಧಾರಾಣಿಗೆ ಕೊನೆಗೂ ವಿಕ್ಟರಿ

    ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗೀತಾ-ವಿಜಿ

    ಅದ್ಧೂರಿ ಮದುವೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟ ರಾಮಾಚಾರಿ!

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸದ್ಯ ಗೀತಾ ಅಭಿಮಾನಿಗಳು ಮದುವೆ ಸಂಭ್ರಮದಲ್ಲಿ ಮುಳುಗಿದ್ದಾರೆ. ಆದರೆ, ಈ ಮದುವೆಗೆ ಭಾನುಮತಿ ಎಲ್ಲಿ ಟ್ವಿಸ್ಟ್​ ಕೊಡುತ್ತಾಳೋ ಎಂಬ ಸಣ್ಣ ಆತಂಕವೂ ಶುರುವಾಗಿದೆ.

ಇಡೀ ಕಥೆ ಧಾರಾವಾಹಿಯಲ್ಲಿ ಬರುವ ಹೀರೋ ವಿಜಿ ಮತ್ತು ಗೀತಾ ಮದುವೆ ಸುತ್ತ ಗಿರಕಿ ಹೊಡೆಯುತ್ತಿದೆ. ಮದುವೆ ಅಂತಿಮ ವಿಚಾರ ಬಂದಾಗಲೆಲ್ಲಾ, ವಿಜಿಯ ಮಲತಾಯಿ ಭಾನುಮತಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾಳೆ. ಇಬ್ಬರೂ ಮದುವೆ ಆಗಲೇಬಾರದು ಎಂಬ ಹಠಕ್ಕೆ ಬಿದ್ದಿರುವ ಭಾನುಮತಿ, ವಿಜಿ ಮತ್ತು ಗೀತಾಳನ್ನು ದೂರ ಮಾಡಲು ಇನ್ನಿಲ್ಲದ ಸರ್ಕಸ್ ಮಾಡಿಕೊಂಡು ಇಷ್ಟು ದಿನ ಬಂದಿದ್ದಳು. ಕೊನೆಗೂ ಅವೆಲ್ಲವನ್ನೂ ಮೆಟ್ಟಿನಿಂತು ವಿಜಿ-ಗೀತಾ ಸಿರೀಯಲ್​​ನಲ್ಲಿ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ವಿಜಿಗೆ ಕ್ಯಾನ್ಸರ್ ಇದೆ ಎಂಬ ಸುಳ್ಳು ರಿಪೋರ್ಟ್​ ನೀಡಿ, ಧಾರಾವಾಹಿ ಕತೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಳು ಭಾನುಮತಿ.  ಕೊನೆಗೆ ಈ ವಿಚಾರ ಗೀತಾ ಮತ್ತು ವಿಜಿಯ ಸ್ವಂತ ತಾಯಿ ಸುಧಾರಾಣಿಗೆ ಗೊತ್ತಾಗುತ್ತಿದ್ದಂತೆಯೇ ಕಥೆ ಹೊಸ ಸ್ವರೂಪ ಪಡೆದುಕೊಂಡಿದೆ.

ವಿಜಿ ಮತ್ತು ಗೀತಾ ಮನೆಯಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಸವಾಲುಗಳನ್ನು ಮೆಟ್ಟಿ ನಿಂತು ಕೊನೆಗೂ ಹಸಮಣೆ ಏರಲು ಸಜ್ಜಾಗುತ್ತಿರುವ ಗೀತಾ-ವಿಜಿಗೆ ರಾಮಚಾರಿಯ ಬೆಂಬಲ ಸಿಕ್ಕಿದೆ. ಮದುವೆಯನ್ನು ಅದ್ಧೂರಿಯಾಗಿ ನಡೆಸಿಕೊಡಲು ಸ್ವತಃ  ಮಿಸ್ಟರ್ ಆ್ಯಂಡ್ ಮಿಸಸ್​ ರಾಮಾಚಾರಿ ಎಂಟ್ರಿಯಾಗಿದೆ. ಗೀತಾ ಧಾರಾವಾಹಿಯಲ್ಲಿ ಇಂದೊಂದು ಸ್ಪೆಷಲ್ ಎಪಿಸೋಡ್ ಆಗಿ ಮೂಡಿ ಬರಲಿದೆ. ರಾಮಾಚಾರಿ ಜೋಡಿ ಗೀತಾ ವಿಜಿನಾ ಒಂದು ಮಾಡ್ತಾರೆ ಅಂತಾ ಅಭಿಮಾನಿಗಳು ಕೂಡ ಈ ವಿಶೇಷ ಎಪಿಸೋಡ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

ರಾಮಾಚಾರಿ ಹಾಗೂ ಗೀತಾ ಎರಡು ಸೀರಿಯಲ್​ಗಳು ರಾಮ್ ಜಿ ಅವರ ಕಾರಣದಿಂದ ಒಂದೇ ಎಪಿಸೋಡ್​ನಲ್ಲಿ ತೋರಿಸಿದ್ದಾರೆ. ಒಟ್ಟಿನಲ್ಲಿ ಗೀತಾ ಧಾರಾವಾಹಿ ಟ್ವಿಸ್ಟ್​ ಆ್ಯಂಡ್ ಟರ್ನ್​ ಎಪಿಸೋಡ್​ ಅನ್ನು ನೋಡಲು ಕಾತುರರಾಗಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಗೀತಾ-ವಿಜಿ ಮನೆಯಲ್ಲಿ ಮದುವೆ ಸಂಭ್ರಮ.. ಮಿಸ್ಟರ್ ಅಂಡ್ ಮಿಸಸ್​ ರಾಮಾಚಾರಿ ಸರ್ಪೈಸ್​ ಎಂಟ್ರಿ..!

https://newsfirstlive.com/wp-content/uploads/2023/06/ramachari-2-1.jpg

Load More