ಗದಗದಲ್ಲಿ ಅಪರೂಪದ ನಕ್ಷತ್ರ ಆಮೆ ಪತ್ತೆ
ಈ ಆಮೆಗೆ ಎಷ್ಟು ಬೇಡಿಕೆ ಇದೆ ಗೊತ್ತಾ?
10 ಇಂಚಿನವರೆಗೂ ಉದ್ದ ಬೆಳೆಯುವ ಆಮೆ
ಗದಗ: ಕಪ್ಪತಗುಡ್ಡ ವನ್ಯಜೀವಿಧಾಮ ಪ್ರದೇಶದ ಅಂಚಿನಲ್ಲಿರುವ ಶೆಟ್ಟಿಕೆರೆಯಲ್ಲಿ ಅಪರೂಪದ ನಕ್ಷತ್ರ ಆಮೆ ಪ್ರತ್ಯಕ್ಷವಾಗಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ನಕ್ಷತ್ರ ಆಮೆ ಕಾಣಿಸಿಕೊಂಡಿದೆ. ವಿಶೇಷ ತಳಿಯ ಆಮೆ ಇದಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಪ್ರತ್ಯಕ್ಷವಾಗಿದೆ. ಇದರ ವೈಜ್ಞಾನಿಕ ಹೆಸರು ಜಿಯೋಚೆಲೋನ್ ಎಲಗನ್ಸ್ (Geochelone elegans) ಎಂದಾಗಿದೆ.
ಇವುಗಳ ಅವಾಸ ಸ್ಥಾನಗಳ ನಾಶ ಮತ್ತು ಕಳ್ಳಬೇಟೆಯಿಂದಾಗಿ ಈ ಆಮೆ ಅಳವಿನಂಚಿನಲ್ಲಿವೆ. 10 ಇಂಚಿನವರೆಗೂ ಉದ್ದದಷ್ಟು ಬೆಳೆಯುವ ನಕ್ಷತ್ರ ಆಮೆ, ದೇಹದ ಮೇಲೆ ನಕ್ಷತ್ರ ಆಕಾರದ ಗಾಢವಾದ ಬಣ್ಣದ ವಿನ್ಯಾಸ ಇದೆ. ಇವುಗಳನ್ನು ಮನೆಯಲ್ಲಿ ಸಾಕಿದರೆ ಮನೆಯಲ್ಲಿ ಸಂಪತ್ತುವೃದ್ಧಿ ಎಂಬ ನಂಬಿಕೆ ಇದೆ.
ಆದ್ರೆ ಮನೆಯಲ್ಲಿ ಸಾಕಿದರೆ ಬಹಳಷ್ಟು ದಿನ ಇದು ಬದುಕೋದಿಲ್ಲ. ಕೆಲವರು ಚಿಪ್ಪು ಮತ್ತು ಅದರ ಮಾಂಸಕ್ಕಾಗಿ ಕಳ್ಳಬೇಟೆ ಆಡ್ತಾರೆ. ಹೀಗಾಗಿ ಈ ಪ್ರಾಣಿ ಅಳಿವಿನಂಚಿನಲ್ಲಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ