newsfirstkannada.com

ಆರೋಪಿ ಕಿರಣ್​ಗೆ ಮುಳುವಾಯ್ತು ತನ್ನದೇ ಸ್ಮಾರ್ಟ್​ಫೋನ್.. ಕಿಲಾಡಿ ಐಡಿಯಾ ಮಾಡಿದ್ದ ಚಾಲಕ ಸಿಕ್ಕಿಬಿದ್ದದ್ದು ಹೇಗೆ?

Share :

06-11-2023

    ಆರೋಪಿ ಪತ್ತೆ ಹಚ್ಚಲು ಪೊಲೀಸರಿಂದ ಮೂರು ತಂಡಗಳ ರಚನೆ

    ಸ್ಥಳದ ಸುಳಿವಿನಿಂದ ಸಿಕ್ತು ಪೊಲೀಸರಿಗೆ ಆರೋಪಿಯ ಮಾಹಿತಿ

    ಕಿರಣನೇ ಆರೋಪಿ ಎಂದು ಪೊಲೀಸರು ಕಂಡು ಹಿಡಿದದ್ದು ಹೇಗೆ?

ಪ್ರಾರಂಭದಲ್ಲಿ ಪ್ರತಿಮಾ ಕೊಲೆ ಆರೋಪಿ ಪತ್ತೆ ಹಚ್ಚಲು ತಲೆಕೆಡಿಸಿಕೊಂಡಿದ್ದ ಪೊಲೀಸರು ಮೂರು ತಂಡಗಳನ್ನು ರಚನೆ ಮಾಡಿದ್ದರು. ಬಳಿಕ ಒಂದೊಂದರಂತೆ ಒಂದು ತನಿಖೆ ನಡೆಸುತ್ತಾ ಬಂದ ಪೊಲೀಸರಿಗೆ ಸಣ್ಣ ಸುಳಿವೊಂದು ಸಿಕ್ಕಿದೆ. ಅದರ ಆಧಾರದ ಮೇಲೆ ಪೊಲೀಸರು ಚಾಲಕ ಕಿರಣ್​ನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಪೊಲೀಸರಿಗೆ ಚಾಲಕ ಕಿರಣನೇ​ ಆರೋಪಿ ಎಂಬ ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ?

ಪ್ರತಿಮಾ ಅವರನ್ನು ಚಾಕುವಿನಿಂದ ಇರಿದು ಕೊಂದ ಚಾಲಕ ಕಿರಣ್​ ಎರಡು ಮೊಬೈಲ್ ಬಳಸುತ್ತಿದ್ದನು. ಒಂದು ಮೊಬೈಲ್ ಸ್ವಿಚ್ ಆಫ್ ಮಾಡಿ ಮನೆಯಲ್ಲಿಯೇ ಇಟ್ಟಿದ್ದನು. ಮತ್ತೊಂದು ಮೊಬೈಲ್ ಕೊಲೆಗೆ ಮುನ್ನ ಸ್ಥಳದಲ್ಲಿ ಸ್ವಿಚ್ ಆಫ್ ಮಾಡಿಕೊಂಡಿದ್ದನು.

ಕೊಲೆ ನಂತರ ತನ್ನ ಇಬ್ಬರು‌ ಸ್ನೇಹಿತರನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದನು. ಕೊಲೆ ಮಾಡಿರುವ ಬಗ್ಗೆ ಸ್ನೇಹಿತರಿಗೆ ಯಾವುದೇ ಮಾಹಿತಿ ನೀಡಿದೆ ಅವರೊಂದಿಗೆ ಅಡ್ಡಾಡುತ್ತಿದ್ದನು.

ಇತ್ತ ಪ್ರತಿಮಾ ಕೊಲೆ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದ ಪೊಲೀಸರು ಆಕೆ ಜತೆ ಸಂಪರ್ಕದಲ್ಲಿದವರ CDR ಕಲೆ ಹಾಕಲು ಮುಂದಾದರು. ಮೊದಲಿಗೆ ಪೊಲೀಸರು ಪ್ರತಿಮಾ ಪತಿ, ಕುಟುಂಬಸ್ಥರು, ಸ್ನೇಹಿತರು, ಡ್ರೈವರ್ ಗಳ ಮೊಬೈಲ್ ಸಿಡಿಆರ್ ತೆಗೆದರು. ಈ ವೇಳೆ ಎಲ್ಲರ ಮೊಬೈಲ್​ಗಳು ಆನ್ ಇದ್ದು. ಕಿರಣ್​ ಮೊಬೈಲ್​ ಮಾತ್ರ ಸ್ವಿಚ್ ಆಫ್ ಆಗಿತ್ತು. ಆದರೆ ಮೊಬೈಲ್ ಅನ್ನು ತನ್ನ ಜೊತೆಯಲ್ಲೇ ಕಿರಣ್​ ತೆಗೆದುಕೊಂಡು ಹೋಗಿದ್ದನು. ಇದೇ ಅನುಮಾನದ ಮೇಲೆ ಕಿರಣ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಳಿಕ ನಿಜ ಸಂಗತಿ ಒಪ್ಪಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರೋಪಿ ಕಿರಣ್​ಗೆ ಮುಳುವಾಯ್ತು ತನ್ನದೇ ಸ್ಮಾರ್ಟ್​ಫೋನ್.. ಕಿಲಾಡಿ ಐಡಿಯಾ ಮಾಡಿದ್ದ ಚಾಲಕ ಸಿಕ್ಕಿಬಿದ್ದದ್ದು ಹೇಗೆ?

https://newsfirstlive.com/wp-content/uploads/2023/11/Prathima-6-1.jpg

Load More