newsfirstkannada.com

Video: ಬೆಂಗಳೂರು ರಸ್ತೆ ಬದಿಯ ತರಕಾರಿ ವ್ಯಾಪಾರಿಗಳ UPI ವಹಿವಾಟಿಗೆ ಮನಸೋತ ಜರ್ಮನ್​ ಸಚಿವ!

Share :

20-08-2023

    ರಸ್ತೆ ಬದಿ ತರಕಾರಿ ಖರೀದಿಸಿದ ಜರ್ಮನ್​ ಸಚಿವ

    ಯುಪಿಐ ಮೂಲಕ ಹಣ ಪಾವತಿಸಿದ ವೋಲ್ಕರ್​ ವಿಸ್ಸಿಂಗ್

    ಭಾರತದ ಡಿಜಿಟಲ್​ ರೂಪಾಂತರ ಕಂಡು ಸಂತಸಗೊಂಡ ವಿದೇಶಿ ಸಚಿವ

ಬೆಂಗಳೂರು: ಯುನಿಫೈಡ್​​ ಪೇಮೆಂಟ್​ ಇಂಟರ್​ಫೇಸ್​ (UPI) ಭಾರತೀಯರಿಗೆ ಪರಿಚಯಿಸಿದ್ದೇ ಪರಿಚಯಿಸಿದ್ದು, ಇಂದು ಬಹುಪಾಲು ಜನರ ಹಣದ ವಹಿವಾಟುಗಳು ಸರಾಗವಾಗಿ, ಸಮಯ ವ್ಯರ್ಥವಿಲ್ಲದೆ ನಡೆಯುತ್ತಿದೆ. ಹೋಟೆಲ್​, ಆಟೋ ರಿಕ್ಷಾ, ಕ್ಯಾಬ್​, ದಿನಸಿ ಅಂಗಡಿ, ಅಷ್ಟೇ ಏಕೆ ರಸ್ತೆ ಬದಿ ವ್ಯಾಪರಸ್ಥರು ಕೂಡ ಯುಪಿಐ ಸೇವೆ ಪಡೆಯುತ್ತಿದ್ದಾರೆ. ಅದರಂತೆಯೇ ಜರ್ಮನಿಯ ಡಿಜಿಟಲ್​ ಮತ್ತು ಸಾರಿಗೆ​ ಸಚಿವ ವೋಲ್ಕರ್​ ವಿಸ್ಸಿಂಗ್​ ಬೆಂಗಳೂರಿಗೆ ಆಗಮಿಸಿದ್ದು, ನಗರದ ತರಕಾರಿ ವ್ಯಾಪರಸ್ಥರು ಯುಪಿಐ ಸೇವೆಯನ್ನು ಬಳಸುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ತಾವು ಖರೀದಿಸಿದ ತರಕಾರಿಯ ಬೆಲೆಯನ್ನು ಯುಪಿಐ ಸೇವೆಯ ಮೂಲಕ ಪಾವತಿಸಿದ್ದಾರೆ.

ಸಚಿವ ವೋಲ್ಕರ್​ ವಿಸ್ಸಿಂಗ್​ ಅವರು ಬೆಂಗಳೂರಿನ ರಸ್ತೆಬದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸುತ್ತಿರುವ ದೃಶ್ಯವನ್ನು ಅನೇಕರು ಹಂಚಿಕೊಂಡಿದ್ದಾರೆ. ಬಿಜೆಪಿ ಎಂಪಿ ಪಿಸಿ ಮೋಹನ್​ ಟ್ವೀಟ್​ ಮಾಡಿದ್ದು, ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆಯ ಫೆಡರಲ್ ಸಚಿವ ವೋಲ್ಕರ್​ ವಿಸ್ಸಿಂಗ್ ಬೆಂಗಳೂರಿನಲ್ಲಿ ತರಕಾರಿಗಳನ್ನು ಖರೀದಿಸಲು UPI ಬಳಸಿದ್ದು, ಡಿಜಿಟಲ್ ಇಂಡಿಯಾದ ನಡೆಯನ್ನು ಕಂಡು ಸಂತಸಗೊಂಡರು. ನೇರ ವಹಿವಾಟು ಅವರನ್ನು ಆಕರ್ಷಿಸಿರುವುದು ಭಾರತದ ಡಿಜಿಟಲ್​ ರೂಪಾಂತರವನ್ನು ಎತ್ತಿ ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಬೆಂಗಳೂರು ರಸ್ತೆ ಬದಿಯ ತರಕಾರಿ ವ್ಯಾಪಾರಿಗಳ UPI ವಹಿವಾಟಿಗೆ ಮನಸೋತ ಜರ್ಮನ್​ ಸಚಿವ!

https://newsfirstlive.com/wp-content/uploads/2023/08/Volker-Wissing.jpg

Load More