newsfirstkannada.com

Watch: ಜಿಮ್ ಮಾಡುತ್ತಿದ್ದಾಗ ಹಾರ್ಟ್​ ಅಟ್ಯಾಕ್.. ಥ್ರೆಡ್​ಮಿಲ್​​ನಲ್ಲೇ ಉಸಿರು ಚೆಲ್ಲಿದ 19 ವರ್ಷದ ಯುವಕ

Share :

17-09-2023

    ಇದ್ದಕ್ಕಿದ್ದಾಗೆ ಕುಸಿದು ಬಿದ್ದ ಯುವಕ, ನೋಡು ನೋಡ್ತಿದ್ದಂತೆ ಸಾವು

    ಇತ್ತೀಚೆಗೆ ದೇಶದಲ್ಲಿ ಹಾರ್ಟ್​ ಅಟ್ಯಾಕ್​ನಿಂದ ಸಾವು ಹೆಚ್ಚಳವಾಗಿವೆ

    ವಿಡಿಯೋ ನೋಡುವವರ ಎದೆ ಝೆಲ್​​ ಎನಿಸುವಂತಿದೆ ಈ ದೃಶ್ಯ..!

ಲಕ್ನೋ: ದೇಶದಲ್ಲಿ ಇತ್ತೀಚೆಗೆ ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದು ಜನರಲ್ಲಿ ಭಾರೀ ಆತಂಕವುನ್ನುಂಟು ಮಾಡುತ್ತಿದೆ. ಚೆನ್ನಾಗಿಯೇ ಕಾಣುತ್ತಿರುತ್ತಾರೆ ನೋಡು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಣ್ಣು ಮುಚ್ಚುತ್ತಿರುವುದು ನೋವಿನ ಸಂಗತಿ. ಸದ್ಯ ಇಂತಹದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಿದ್ಧಾರ್ಥ್ ಕುಮಾರ್ ಸಿಂಗ್ (19) ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟ ಯುವಕ. ಉತ್ತರ ಪ್ರದೇಶದ ಘಾಜಿಯಾಬಾದ್ ನಗರದ ಜಿಮ್​​ವೊಂದರಲ್ಲಿ ಯುವಕ ಎಂದಿನಂತೆ ಜಿಮ್​ಗೆ ಹೋಗಿ ವರ್ಕೌಟ್ ಮಾಡುತ್ತಿರುತ್ತಾನೆ. ಈ ವೇಳೆ ಥ್ರೆಡ್​ ಮಿಲ್ (ಓಡುವ ಯಂತ್ರ) ಮೇಲೆ ರನ್ನಿಂಗ್ ಮಾಡುತ್ತಿರುತ್ತಾನೆ. ಆಗ ಇದ್ದಕ್ಕಿದ್ದಾಗೆ ಯುವಕನಿಗೆ ಹಾರ್ಟ್​ ಅಟ್ಯಾಕ್​ ಕಾಣಿಸುತ್ತೆ ಅಷ್ಟೇ. ಕ್ಷಣಾರ್ಧದಲ್ಲೇ ಥ್ರೆಡ್​ ಮಿಲ್ ಮೇಲೆ ಕುಸಿದು ಬೀಳುತ್ತಾನೆ.

ತಕ್ಷಣ ಅಲ್ಲಿಯೇ ಇದ್ದ ಇತರರು ಸಹಾಯಕ್ಕೆ ಬರುತ್ತಾರೆ. ಅಷ್ಟರಲ್ಲೇ ಯುವಕ ಮೃತಪಟ್ಟಿರುವುದು ಗೊತ್ತಾಗಿದೆ. ಯುವಕನು ಥ್ರೆಡ್​ ಮಿಲ್ ಮೇಲೆ ಕುಸಿದು ಬೀಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಜಿಮ್ ಮಾಡುತ್ತಿದ್ದಾಗ ಹಾರ್ಟ್​ ಅಟ್ಯಾಕ್.. ಥ್ರೆಡ್​ಮಿಲ್​​ನಲ್ಲೇ ಉಸಿರು ಚೆಲ್ಲಿದ 19 ವರ್ಷದ ಯುವಕ

https://newsfirstlive.com/wp-content/uploads/2023/09/MAN_DEAD_1.jpg

Load More